ಧಾರವಾಡ: ತುರ್ತು ಪರಿಸ್ಥಿತಿಗೆ 50ನೇ ವರ್ಷವಾಗಿರುವ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿಯ ಅಣ್ಣಿಗೇರಿ ಪಿಯು ಕಾಲೇಜಿನಲ್ಲಿ ತುರ್ತು ಪರಿಸ್ಥಿತಿ ಕುರಿತ ವಿಶ್ಲೇಷಣೆ ನಡೆಯಿತು.
1975ರಲ್ಲಿ ಅಲಹಾಬಾದ್ ಹೈಕೋರ್ಟಿನ ತೀರ್ಪಿನ ಪ್ರಕಾರ ಲೋಕಸಭಾ ಸದಸ್ಯತ್ವ ಕಳಕೊಂಡ ಇಂದಿರಾ ಗಾಂಧಿ ಕಾಂಗ್ರೆಸ್ ಸರ್ಕಾರದ ಹಂಗಾಮಿ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಕೈಯಿಂದ ಅಧಿಕಾರ ಜಾರಿ ಹೋಗುತ್ತಿದೆ ಎಂದರಿತು ಹೈಕೋರ್ಟ್ ತೀರ್ಪಿನ ವಿರುದ್ಧ ಹಾಗೂ 352ನೇ ವಿಧಿ ದುರ್ಬಳಕೆ ಮಾಡಿಕೊಂಡು 1975ರ ಜೂನ್ 25ರಂದು ಅಸಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು ಎಂದರು.
ಅಣ್ಣಿಗೇರಿ ಕಾಲೇಜಿನ ಅಧ್ಯಕ್ಷ ನಾಗೇಶ್ ಅಣ್ಣಿಗೇರಿ, ಬಸವರಾಜ ಗರಗ, ಮಂಜುನಾಥ ಮಲ್ಲಿಗವಾಡ, ಪ್ರಮೋದ್ ಕಾರಕೂನ, ಸಂಜೀವ್ ಮಾಳದಕರ್, ಮಂಜುನಾಥ ನೀರಲಕಟ್ಟಿ ಇದ್ದರು. ಈ ಸಂದರ್ಭದಲ್ಲಿ ಶ್ರೀಧರ ನಾಡಗೇರ ಅವರನ್ನು ಗೌರವಿಸಲಾಯಿತು.