ಎಮಿನೆಂಟ್‌ ಇಂಜನಿಯರ್‌ ಅವಾರ್ಡ್‌-2026ರ ಪ್ರಶಸ್ತಿ ಪುರಸ್ಕೃತ ಸೋಮನಾಥ ಕೊಳಗೇರಿಗೆ ಸನ್ಮಾನ

KannadaprabhaNewsNetwork |  
Published : Sep 30, 2026, 03:00 AM IST
ಕೋಲ್ಹಾರ | Kannada Prabha

ಸಾರಾಂಶ

ತಾಲೂಕಿನ ಸುಕ್ಷೇತ್ರ ನಾಗರದಿನ್ನಿ ಗ್ರಾಮದ ಮಹಾತಪಸ್ವಿ ಸದ್ಗುರು ಸದಾನಂದ ಶಿವಯೋಗಿಗಳ 54ನೇ ಪುಣ್ಯಾರಾಧನೆಯ ನಿಮಿತ್ತ ನಡೆದ ಜಾತ್ರಾ ಮಹೋತ್ಸವದಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ನೀಡುವ ಎಮಿನೆಂಟ್‌ ಇಂಜನಿಯರ್‌ ಅವಾರ್ಡ್‌-2026ರ ಪ್ರಶಸ್ತಿ ಪುರಸ್ಕೃತರಾದ ಲೋಕೋಪಯೋಗಿ ಇಲಾಖೆಯ ಬಸವನ ಬಾಗೇವಾಡಿ ಉಪವಿಭಾಗದ ಸಹಾಯಕ ಅಭಿಯಂತರರಾದ ಸೋಮನಾಥ ಶಿವಶಂಕರ ಕೊಳಗೇರಿ ಅವರಿಗೆ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಈ ಸಂದರ್ಭದಲ್ಲಿ ಸುಕ್ಷೇತ್ರ ನಯಾನಗರ ಸುಖದೇವಾನಂದ ಪುಣ್ಯಾಶ್ರಮದ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಸಂಖ-ಬಡಚಿ-ಬಣ್ಣಗೇರಿ ಗುರುಬಸವ ವಿರಕ್ತಮಠದ ಡಾ.ಶಿವಲಿಂಗೇಶ್ವರ ಮಹಾಸ್ವಾಮಿಗಳು, ಮತ್ತಿಕಟ್ಟ ಪೂರ್ಣಾನಂದ ಅಶ್ರಮದ ಮಾತೋಶ್ರೀ ರಾಜರಾಜೇಶ್ವರಿ ತಾಯಿಯವರು, ಹಿರೇಅಸಂಗಿ ಗದ್ದುಗೇಶ್ವರ ಮಠದ ವೀರಬಸವ ದೇವರು, ಬಸವನ ಬಾಗೇವಾಡಿ ಕೆಎಂಎಫ್‌ನ ನಿರ್ದೇಶಕ ನಿಂಗನಗೌಡ ಪಾಟೀಲ, ಪಿಕೆಪಿಎಸ್‌ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಹನಮಂತಗೌಡ ಕುಬಕಡ್ಡಿ, ಮುಖಂಡರಾದ ಚಂದ್ರಶೇಖರ ಬಿರಾದಾರ, ನಾಗರದಿನ್ನಿ ಈರಯ್ಯ ಗಿ.ಹಿರೇಮಠ ಉಪಸ್ಥಿತರಿದ್ದರು. ಶಿಕ್ಷಕ ಎಸ್‌.ಆರ್‌.ಭೂಸರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಐ.ಬಿ.ಬಿರಾದಾರ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಗ ಬಾರದಂತೆ ತಡೆಯುವುದೇ ಆಯುರ್ವೇದದ ಶಕ್ತಿ
ಮೋದಿಯವರ 25 ವರ್ಷಗಳ ಜನಸೇವಾ ಪಯಣ ಪ್ರೇರಣಾದಾಯಕ