ಭೈರವೈಕ್ಯ ಎಂ.ಮರಿಯಪ್ಪನವರ ಗಣನೀಯ ಸೇವೆಗೆ ಗಣ್ಯರ ಬಣ್ಣನೆ

KannadaprabhaNewsNetwork |  
Published : Nov 03, 2025, 01:30 AM IST
2ಕೆಎಂಎನ್ ಡಿ12 | Kannada Prabha

ಸಾರಾಂಶ

ಬಡಮಕ್ಕಳ ಶಿಕ್ಷಣಕ್ಕೆ ವೈಯುಕ್ತಿಕ ಕೊಡುಗೆ ನೀಡುತ್ತಿದ್ದ ಮರಿಯಪ್ಪರವರು ಯದಶೈಲಾ ಶಾಲೆ ಸಹಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿ ಸ್ಪೂರ್ತಿನೀಡುತ್ತಿದ್ದರು. ಇಂತಹ ಮಹನೀಯರಿಗೆ ಶ್ರದ್ಧಾಂಜಲಿ-ನುಡಿನಮನ ಸಲ್ಲಿಸಬೇಕಾದ್ದು ನಾಗರೀಕರಾದ ನಮ್ಮೆಲ್ಲರ ಕರ್ತವ್ಯ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆ ಶೈಕ್ಷಣಿಕ ಅಭಿವೃದ್ಧಿಗೆ ಮುಖ್ಯಶಿಕ್ಷಕರಾಗಿ ನಿವೃತ್ತರಾಗಿದ್ದ ಭೈರವೈಕ್ಯ ಎಂ.ಮರಿಯಪ್ಪ ಗಣನೀಯ ಸೇವೆ ಮಾಡುವ ಜೊತೆಗೆ ಆದಿಚುಂಚನಗಿರಿ ಶಾಖಾ ಮಠದ ಬೆಳವಣಿಗೆಯಲ್ಲೂ ಶ್ರಮಿಸಿದ್ದಾರೆ ಎಂದು ಗಣ್ಯರು ಬಣ್ಣಿಸಿದರು. ಮೇಲುಕೋಟೆಯ ಅಹೋಬಿಲಮಠದ ಸಭಾಂಗಣದಲ್ಲಿ ಭೈರವೈಕ್ಯ ಎಂ.ಮರಿಯಪ್ಪರಿಗೆ ಅಭಿಮಾನಿಗಳು, ನಾಗರಿಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ-ನುಡಿ ನಮನದಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ.ವಿ.ವೆಂಕಟರಾಮೇಗೌಡ, ಮುಖ್ಯಶಿಕ್ಷಕ ಅಣ್ಣೇಗೌಡ, ವಾದ್ಯಾರ್ ತಿರುಮಲೈ, ಶಿಕ್ಷಣ ಸಂಯೋಜಕ ಲಿಂಗರಾಜು, ಪರಿಸರ ತಜ್ಞ ಸಂತೋಷ್‌ಕೌಲಗಿ, ಬಳಿಘಟ್ಟ ಶಿಕ್ಷಕ ರಾಮೇಗೌಡ, ರಾಜ್ಯ ಉತ್ತಮಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಸ್ಥಾನೀಕಂ ಸಂತಾನರಾಮನ್, ಪುಳಿಯೋಗರೆ ರವಿ ಮತ್ತಿತರರು ಮಾತನಾಡಿ ಮರಿಯಪ್ಪರವರು ಮೇಲುಕೋಟೆಯಲ್ಲಿ ಮಾಡಿದ ಸ್ಮರಣೀಯವಾದ ಶೈಕ್ಷಣಿಕ ಮತ್ತು ಸಮಾಜಸೇವೆಯ ಬಗ್ಗೆ ಸ್ಮರಿಸಿದರು.

ಬಡಮಕ್ಕಳ ಶಿಕ್ಷಣಕ್ಕೆ ವೈಯುಕ್ತಿಕ ಕೊಡುಗೆ ನೀಡುತ್ತಿದ್ದ ಮರಿಯಪ್ಪರವರು ಯದಶೈಲಾ ಶಾಲೆ ಸಹಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿ ಸ್ಪೂರ್ತಿನೀಡುತ್ತಿದ್ದರು. ಇಂತಹ ಮಹನೀಯರಿಗೆ ಶ್ರದ್ಧಾಂಜಲಿ-ನುಡಿನಮನ ಸಲ್ಲಿಸಬೇಕಾದ್ದು ನಾಗರೀಕರಾದ ನಮ್ಮೆಲ್ಲರ ಕರ್ತವ್ಯ ಎಂದರು.

ಸಾಮಾಜಿಕ ಹೋರಾಟಗಾರ ಈಶಮುರುಳಿ ಮತ್ತು ಮಹೇಶ್ ಗಣ್ಯರ ಆಶಯದಂತೆ ಎಂ.ಮರಿಯಪ್ಪರವರ ನೆನಪಿನಲ್ಲಿ ಬಡಮಕ್ಕಳಿಗೆ ಶೈಕ್ಷಣಿಕ ಕಾರ್ಯವನ್ನು ಪ್ರತಿವರ್ಷ ಮಾಡುತ್ತೇವೆ ಎಂದರು.

ಸಭೆಯಲ್ಲಿ ಗಣ್ಯರು, ಅಭಿಮಾನಿಗಳು, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಹೋಬಲಮಠದ ಶಶಿಕುಮಾರ್ ಉಚಿತವಾಗಿ ಸಭಾಂಗಣ ನೀಡಿದ್ದರು.

ಬೋರಾಪುರದಲ್ಲಿ ಚಿರತೆ ಬೋನಿಗೆ ಸೆರೆ

ಮದ್ದೂರು:

ತಾಲೂಕಿನ ಬೋರಾಪುರ ಗ್ರಾಮದ ತೋಟದಲ್ಲಿ ಅರಣ್ಯ ಇಲಾಖೆ ಇರಿಸಲಾಗಿದ್ದ ಬೋನಿನಲ್ಲಿ ಭಾನುವಾರ ಸೆರೆಯಾಗಿದೆ.

ಸುಮಾರು 6 ವರ್ಷದ ವಯಸ್ಸಿನ ಗಂಡು ಚಿರತೆ ಗ್ರಾಮದ ಪುಟ್ಟಲಿಂಗಮ್ಮ ತೋಟ ಮತ್ತು ಆಸುಪಾಸಿನ ಜಮೀನುಗಳಲ್ಲಿ ರಾತ್ರಿ ವೇಳೆ ಸಂಚಾರ ಮಾಡುತ್ತಾ ರೈತರಲ್ಲಿ ಆತಂಕ ಸೃಷ್ಟಿಸಿತ್ತು.

ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ಗವಿಯಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯಲು ಬೋನನ್ನು ಇರಿಸಿದ್ದರು. ಭಾನುವಾರ ಮುಂಜಾನೆ ಬೋನಿನಲ್ಲಿದ್ದ ಸತ್ತ ನಾಯಿ ಶವವನ್ನು ತಿನ್ನಲು ಬಂದು ಸೆರೆಯಾಗಿದೆ. ಸೆರೆಯಾದ ಚಿರತೆಯನ್ನು ವನ್ಯಧಾಮ ಅರಣ್ಯದ ವಶಕ್ಕೆ ಒಪ್ಪಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ