ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದಿಂದ ಆಯೋಜಿಸಿದ್ದ ವಿತರಕರ ದಿನಾಚರಣೆ ಮತ್ತು ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಬಲಿಷ್ಠ ವ್ಯವಹಾರ ಸಂಪತ್ತು ನಿರ್ಮಿಸುತ್ತದೆ. ಬಲಿಷ್ಠ ಕುಟುಂಬ ಸುಂದರ ಜೀವನ ನಿರ್ಮಿಸುತ್ತದೆ. ಎರಡರ ನಡುವೆ ಸಮತೋಲನ ಇದ್ದಾಗ ಸಂತೋಷ ಸ್ವಾಭಾವಿಕವಾಗಿ ದೊರೆಯುತ್ತದೆ. ವ್ಯವಹಾರ ನಮಗೆ ಉದ್ದೇಶ, ಗೌರವ ಹಾಗೂ ಆರ್ಥಿಕ ಭದ್ರತೆ ನೀಡುತ್ತದೆ. ಸಂತೋಷ ಎಂದರೆ ಸಾಧನೆಗಳು ಮಾತ್ರವಲ್ಲ. ಮನಸ್ಸಿನ ಶಾಂತಿಯಲ್ಲಿ ದೊರಕುವ ಅನುಭವ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಎಂ.ಸಿ.ದೇವರಾಜ ಮಾತನಾಡಿ, ವಿತರಕರ ಸಂಘದ ಇತಿಹಾಸದಲ್ಲಿ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲಾ ವಿತರಕರ ಸಂಘವು ವಿತರಕರ ಕುಟುಂಬ ಮಿಲನ ಕಾರ್ಯಕ್ರಮ ಆಯೋಜಿಸಿದೆ. ಮುಂಬರುವ ದಿನಗಳಲ್ಲಿ ವಿಭಿನ್ನ ರೀತಿ ಕಾರ್ಯಕ್ರಮಗಳನ್ನು ನೀಡುತ್ತೇವೆ ಎಂದು ಹೇಳಿದರು.ಲೆಕ್ಕ ಪರಿಶೋಧಕ ಕೆ.ವಿ. ಗೌರೀಶ್ ಭಾರ್ಗವ್ ಮಾತನಾಡಿ, ಸಾಂಪ್ರದಾಯಿಕ ವ್ಯವಹಾರ ಪದ್ಧತಿಯ ಜೊತೆಗೆ ಆಧುನಿಕ ಸ್ಪರ್ಶತೆ ನೀಡಿ ವ್ಯವಹಾರ ಮಾಡಿದ್ದಲ್ಲಿ ಯಾವುದೇ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮದೇ ಆದ ಛಾಪು ಮೂಡಿಸಬಹುದು ಎಂದು ತಿಳಿಸಿದರು.
ಕೆಎಫ್‌ಡಬ್ಲ್ಯೂಡಿಎ ಅಧ್ಯಕ್ಷ ಜಯಂತ್ ಗಾಣಿಗ್ ಮಾತನಾಡಿ, ಸರ್ಕಾರಗಳಿಗೆ ತೆರಿಗೆ ನೀಡಿ ತೆರಿಗೆ ಶೇಖರಿಸಿ ಕೊಡುವಲ್ಲಿ ಸರ್ಕಾರದ ಆದಾಯದ ಮೂಲದಲ್ಲಿ ನಾವು ಕೂಡ ಪ್ರಮುಖ ಭಾಗಿಯಾಗಿದ್ದೇವೆ. ಸರ್ಕಾರದಿಂದ ನಮಗೂ ಕೂಡ ಸೌಲಭ್ಯಗಳು ದೊರೆಯಬೇಕು ಎಂದು ತಿಳಿಸಿದರು.