- ರೈಲು ಮಜಾ ಟಾಕೀಸ್, ಸಾಂಸ್ಕೃತಿಕ ವೇದಿಕೆಯ ಗೆಳೆಯರ ಬಳಗ ಆಯೋಜನೆ
ಕನ್ನಡಪ್ರಭ ವಾರ್ತೆ ಹರಿಹರ
ಬೆಳಗಿನ ಸಿದ್ಧಗಂಗಾ ರೈಲಿನ ಡಿ.6 ನಂಬಿನ ಬೋಗಿಯಲ್ಲಿ ಕೆ.ನಾಗರಾಜಪ್ಪ ಅವರು ರಚಿಸಿರುವ ಪ್ರೇಮಗೀತೆಗಳ ಕವನ ಸಂಕಲನ ಭಾವಾಂತರಂಗ ಪುಸ್ತಕವನ್ನು ಗುರುವಾರ ಹರಿಹರದ ರಾಜಶೇಖರ ಮೂರ್ತಿ ನೇತೃತ್ವದ ರೈಲು ಮಜಾ ಟಾಕೀಸ್, ಸಾಂಸ್ಕೃತಿಕ ವೇದಿಕೆಯ ಗೆಳೆಯರ ಬಳಗ ವತಿಯಿಂದ ಬಿಡುಗಡೆಗೊಳಿಸಲಾಯಿತು.ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ, ಕಡೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕ ಕೆ. ನಾಗರಾಜಪ್ಪ ಅವರ ಕವನ ಸಂಕಲನವನ್ನು ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪತ್ರಾಂಕಿತ ವ್ಯವಸ್ಥಾಪಕ ಚಂದ್ರಶೇಖರ್ ಹಾಗೂ ಕಡೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಮರುಳಸಿದ್ದ ಸ್ವಾಮೀಜಿ ಪುಸ್ತಕ ಬಿಡುಗಡೆ ನೆರವೇರಿಸಿದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕ ಅಧ್ಯಕ್ಷ ರಾಜಶೇಖರ ಮೂರ್ತಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಎಲ್ಲ ಸಹ ಪ್ರಯಾಣಿಕರು ಹಾಗೂ ಗೆಳೆಯರಿಗೆ ವಂದನೆ ಸಲ್ಲಿಸಿದರು.
(ಬಾಕ್ಸ್) * ರೈಲಿನ ಪ್ರಯಾಣದ ಮೂಲಕ ಪರಿಚಿತ ರೈಲು ಮಜಾ ಟಾಕೀಸ್, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ರಾಜಶೇಖರಮೂರ್ತಿ ಜಿ.ಎಂ. ಮಾತನಾಡಿ, ಭಾವಾಂತರಂಗ ಕೃತಿಯ ಲೇಖಕ ಕೆ.ನಾಗರಾಜಪ್ಪ ಅವರು ಮೂಲತಃ ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆಯವರು. ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿ, ಮುಂಬಡ್ತಿ ಹೊಂದಿ ಪ್ರಸ್ತುತ ಕಡೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ (ಟಿ.ಪಿ.ಒ.) ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
- - -