- ಒಳಮೀಸಲಾತಿಯಲ್ಲಿ ಜಾರಿಗೆ ತಂದಿದಕ್ಕೆ ಸಿ.ಕೆ.ಮಂಜುನಾಥ್ ಆಕ್ರೋಶ
ಒಳಮೀಸಲಾತಿಯಲ್ಲಿ ಜಾರಿಗೆ ತಂದಿರುವ ರೋಸ್ಟರ್ ಪದ್ಧತಿಯಿಂದ ಬಲಗೈ ಸಮುದಾಯಕ್ಕೆ ತುಂಬಾ ಅನ್ಯಾಯವಾಗಿದ್ದು, ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾದ ಕಾರ್ಯಾಧ್ಯಕ್ಷ ಸಿ.ಕೆ.ಮಂಜುನಾಥ್ ಆಗ್ರಹಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಳಮೀಸಲಾತಿಯಲ್ಲಿ ಜಾರಿಗೆ ತಂದಿರುವ ರೋಸ್ಟರ್ ಬಿಂದು ಪದ್ಧತಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿರುವುದನ್ನು ಶೈಕ್ಷಣಿಕ ಪ್ರವೇಶಗಳಲ್ಲಿ, ಉದ್ಯೋಗಗಳ ಅಧಿಸೂಚನೆಯಲ್ಲಿ ನೋಡುತ್ತಿದ್ದೇವೆ. ಇದನ್ನು ರಾಜ್ಯ ಸರ್ಕಾರ ಮನಗಂಡು ತಕ್ಷಣವೇ ಒಳಮೀಸಲಾತಿಯಿಂದ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.2018ರ ಮೀಸಲಾತಿಯನ್ನು ಪರಿಷ್ಕರಣೆ ಮಾಡಿ 2022ರಲ್ಲಿ ಎಸ್‌ಸಿಗಳಲ್ಲಿ ಶೇ.15 ರಷ್ಟು, ಎಸ್‌ಟಿಗಳಲ್ಲಿ ಶೇ.7ರಷ್ಟು ಮಾರ್ಪಾಡಿಸಿ ತಂದು ರೋಸ್ಟರ್ ಬಿಂದು ಪದ್ಧತಿಯಲ್ಲಿ 1ನೇ ರೋಸ್ಟರ್ ಬಿಂದುವಿನಲ್ಲಿ ಎಸ್‌ಸಿ ಸಮುದಾಯಕ್ಕೆ ಕೊಟ್ಟು ನಂತರ ಇನ್ನೂ ಉಳಿದ ಎಲ್ಲ ಹಿಂದುಳಿದವರ್ಗಗಳು, ಎಸ್‌ಟಿ ವರ್ಗಗಳಿಗೆ ಮೀಸಲಾತಿ ರೋಸ್ಟರ್ ಬಿಂದು ಮಾರ್ಪಾಡು ಮಾಡಿದರು.
ಒಳಮೀಸಲಾತಿ ಒಂದು ಅವೈಜ್ಞಾನಿವಾದದ್ದು, ಅಸಂವಿಧಾನಕ ಒಂದು ಕಾಯ್ದೆಯಾಗಿದೆ. ಸಹೋದರ ಸಮಾಜಗಳಿಗೆ ಆಗಿರುವಂತಹ ಅನ್ಯಾಯವನ್ನು ಸರಿಪಡಿಸಬೇಕು ಆ ಸಮಾಜಗಳು ಹೋರಾಟ ಮಾಡಿದಾಗ ನಾವು ಕೂಡ ಸಹಮತ ವ್ಯಕ್ತಪಡಿಸಿದಾಗ ಒಳಮೀಸಲಾತಿ ಜಾರಿಗೆ ತಂದಿರುವ ಸಂದರ್ಭದಲ್ಲಿ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗಿರುವದನ್ನು ಕಾಣಬಹುದು. ಆಗಾಗಿ ರೋಸ್ಟರ್ ಪದ್ಧತಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ರೋಸ್ಕರ್ ಬಿಂದುವಿನಿಂದ ಬಲಗೈ ಸಮುದಾಯಕ್ಕೆ ಅನ್ಯಾಯ ಖಂಡಿಸಿ ಫೆ.24 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅದಕ್ಕಾಗಿ ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ ತಾಲೂಕಿನಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಯಳಂದೂರು, ಚಾಮರಾಜನಗರ ತಾಲೂಕಿನಲ್ಲೂ ಪೂರ್ವಭಾವಿ ನಡೆಸಿ, ಮಂಗಳವಾರ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಾಹಿತಿ ಕೋಡಿಉಗನೆ ಮಂಜುನಾಥ ಪ್ರಸನ್ನ ಮಾತನಾಡಿ, ನಮ್ಮ ಹೋರಾಟ ಯಾವುದೇ ಸಮಾಜದ ವಿರುದ್ಧವೂ ಅಲ್ಲ. ನಮ್ಮ ಸಮಾಜಕ್ಕೆ ಸರ್ಕಾರ ಅನ್ಯಾಯ ಮಾಡಿದೆ. ಅದನ್ನು ಸರಿಪಡಿಸುವಂತೆ ಸಮಾಜ ಒತ್ತಾಯ ಮಾಡುತ್ತಿದೆ. ಸರ್ಕಾರ ಹಿಂದೆ ಬಾಕಿಯಿರುವ ಬ್ಲಾಕ್ ಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಹೊಸದಾಗಿ ಒಳ ಮೀಸಲಾತಿ ರೋಸ್ಟರ್
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಉಪಾಧ್ಯಕ್ಷ ಶಿವಸ್ವಾಮಿ, ರಂಗಸ್ವಾಮಿ, ರೇಚಂಬಳ್ಳಿಕುಮಾರ್, ಎಸ್.ಪಿ.ಮಹೇಶ್, ಶಿವರಾಜ್ ಸಿದ್ದಯ್ಯನಪುರ ಹಾಜರಿದ್ದರು.
ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾದ ಕಾರ್ಯಾಧ್ಯಕ್ಷ ಸಿ.ಕೆ.ಮಂಜುನಾಥ್ ಮಾತನಾಡಿದರು.