ಮತ್ತೆ ಆತಂಕ ಮೂಡಿಸಿದ ಚಿರತೆ ಹೆಜ್ಜೆ!

KannadaprabhaNewsNetwork |  
Published : Feb 20, 2026, 01:45 AM IST
ಮತ್ತೆ ಆತಂಕ ಮೂಡಿಸಿದ ಚಿರತೆ | Kannada Prabha

ಸಾರಾಂಶ

ತಾಲೂಕಿನ ಕೆಸ್ತೂರು ಗ್ರಾಮದ ಹೊರವಲಯದಲ್ಲರುವ ಮಲ್ಲಿಗೆಹಳ್ಳಿ ಮಾಳದ ಕೆಲ ಜಮೀನುಗಳಲ್ಲಿ ಬುಧವಾರವೂ ಚಿರತೆ ಹೆಜ್ಜೆ ಗುರುತು ಕಂಡು ಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಬುಧವಾರವೂ ಕೂಂಬಿಂಗ್ ನಡೆಸಿದೆ.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಕೆಸ್ತೂರು ಗ್ರಾಮದ ಹೊರವಲಯದಲ್ಲರುವ ಮಲ್ಲಿಗೆಹಳ್ಳಿ ಮಾಳದ ಕೆಲ ಜಮೀನುಗಳಲ್ಲಿ ಬುಧವಾರವೂ ಚಿರತೆ ಹೆಜ್ಜೆ ಗುರುತು ಕಂಡು ಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಬುಧವಾರವೂ ಕೂಂಬಿಂಗ್ ನಡೆಸಿದೆ.

ಸೋಮವಾರ ರಾತ್ರಿ ಚಿರತೆಯು ಗ್ರಾಮದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಮಂಗಳವಾರ ಅರಣ್ಯ ಇಲಾಖೆಯು ಇದರ ಇರುವಿಕೆಯನ್ನು ಹೆಜ್ಜೆ ಗುರುತುಗಳ ಮೂಲಕ ಪತ್ತೆ ಹಚ್ಚಿ ಮೊದಲ ಸುತ್ತಿನ ಕೂಂಬಿಂಗ್ ನಡೆಸಿದ್ದರು, ಪತ್ತೆಯಾಗಿರಲಿಲ್ಲ. ಬುಧವಾರ ಬೆಳ್ಳಂಬೆಳಿಗ್ಗೆ ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ಮತ್ತೆ ಚಿರತೆಯ ಹೆಜ್ಜೆ ಗುರುತುಗಳು ಮೂಡಿವೆ. ಇದರಿಂದ ವಿಚಲಿತರಾಗಿರುವ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇಲಾಖೆಯ ಸಿಬ್ಬಂದಿ, ಚಿರತೆ ಹೆಜ್ಜೆ ಗುರುತುಗಳನ್ನು ಹಿಡಿದು ಇದರ ಇರುವಿಕೆಯನ್ನು ದೃಢಪಡಿಸಿದ್ದಾರೆ.

------೧೯ ವೈಎಲ್‌ಡಿ ಚಿತ್ರ೦೧

ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಜಮೀನಿನಲ್ಲಿ ಮೂಡಿರುವ ಚಿರತೆಯ ಹೆಜ್ಜೆ ಗುರುತು.

---

The leopard footsteps caused concern again!

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣ ದೇಶದ ಅಭಿವೃದ್ಧಿಗೆ ಅಡಿಪಾಯ: ಡಾ. ಪ್ರಾನ್ಸಿಸ್ ಮರಿಯಾ
ಶ್ರೀಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ಅದ್ಧೂರಿ ತೆಪ್ಪೋತ್ಸವ