ಎನುಮರೇಶನ್ ಫಾರಂ ವಾಪಸ್ ಅವಧಿ17ರವರೆಗೆ ವಿಸ್ತರಣೆ । ಜಿಲ್ಲಾ ಚುನಾವಣಾ ವಿಭಾಗದ ಎಎಸ್‌ಡಿಡಿಒ ಮರು ಪರಿಶೀಲನೆ
ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ರಾಜ್ಯದಲ್ಲಿ 7 ಸ್ಥಾನದಲ್ಲಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಎಎಸ್‌ಡಿಡಿಒ (ಗೈರು, ಸ್ಥಳಾಂತರ, ಸಾವು, ಡ್ಯುಪ್ಲಿಕೆಟ್ ಹಾಗೂ ಇತರೆ) ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಗೊಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ.
ಎನುಮರೇಶನ್ ಫಾರಂ ವಾಪಾಸ್ ಸಲ್ಲಿಸುವುದಕ್ಕೆ ನಿಗದಿ ಪಡಿಸಿದ ಅವಧಿಯನ್ನು ಆ.17ಕ್ಕೆ ವಿಸ್ತರಣೆ ಮಾಡಿ ಬೆನ್ನಲ್ಲಿ ಜಿಲ್ಲಾ ಚುನಾವಣಾ ವಿಭಾಗದ ಎಎಸ್‌ಡಿಡಿಒ ಮರು ಪರಿಶೀಲನೆ ಮುಂದಾಗಿದೆ. ಈ ಅವಧಿಯಲ್ಲಿ ವಾಪಾಸ್ ಬರದೇ ಇರುವ ಎನುಮರೇಶನ್ ಫಾರಂ ಸಂಗ್ರಹಿಸುವುದಕ್ಕೆ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮತ್ತೆ ಬಿಎಲ್‌ಒಗಳು ಕಾರ್ಯಾಚರಣೆ ಪರಿಶೀಲನೆಗೆ ಮುಂದಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 9,60,231 ಮತದಾರರಿದ್ದು, ಈಗಾಗಲೇ ಎಲ್ಲ ಮತದಾರರಿಗೆ ಎಸ್‌ಐಆರ್ ನ ಎನುಮರೇಶನ್ ಫಾರಂ ವಿತರಿಸಿ ವಾಪಸ್ ಪಡೆಯುವ ಕೆಲಸ ಸಹ ಬಹುತೇಕ ಪೂರ್ಣಗೊಂಡಿದೆ. ಆ.9 ರ ವರೆಗೆ ಜಿಲ್ಲೆಯಲ್ಲಿ 8,63,163 ಮತದಾರರ ಎನುಮರೇಶನ್ ಫಾರಂ ಡಿಜಿಟಲೀಕರಣ ಆಗಿದೆ.
ಎಎಸ್‌ಡಿಡಿಒ ಶೇ.10ಕ್ಕಿಂತ ಕಡಿಮೆಗೊಳಿಸುವುದು:
ಈ ಪೈಕಿ ಲಭ್ಯವಾಗದವರನ್ನು ಪತ್ತೆ ಮಾಡಿ ಅವರಿಂದ ಎನುಮರೇಶನ್ ಫಾರಂ ಪಡೆದು ಮತದಾರ ಪಟ್ಟಿಗೆ ಸೇರಿಸುವ ಮೂಲಕ ಶೇ.10ಕ್ಕಿಂತ ಕಡಿಮೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಅದಕ್ಕೆ ಇನ್ನೂ 1200ಕ್ಕೂ ಅಧಿಕ ಫಾರಂ ಡಿಜಿಟಲೀಕರಣ ಆಗಬೇಕಾಗಿದೆ.
ಈವರಗೆ ಲಭ್ಯವಾಗಿಲ್ಲ ಎಂದು ಎಎಸ್‌ಡಿಡಿಒಗೆ ಸೇರಿಸಿದ ಮತದಾರರ ಮನೆಗೆ ಪುನಃ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಖಾತ್ರಿ ಪಡಿಸಿಕೊಳ್ಳುವುದು. ಒಂದು ವೇಳೆ ಮತದಾರರು ಲಭ್ಯವಾದರೆ ಅವರಿಂದ ಎನುಮರೇಶನ್ ಫಾರಂ ಪಡೆಯುವುದಕ್ಕೆ ಜಿಲ್ಲಾಧಿಕಾರಿ ಭನ್ಚರ್ ಸಿಂಗ್ ಮೀನಾ ಎಲ್ಲ ಬಿಎಲ್‌ಒಗಳಿಗೆ ನಿರ್ದೇಶಿಸಿದ್ದಾರೆ.
-- ಬಾಕ್ಸ್--
ಎನುಮರೇಶನ್ ಫಾರಂ ಹಂಚಿಕೆಯನ್ನು ಬಿಎಲ್‌ಒಗಳೇ ಮಾಡಬೇಕು. ಆದರೆ, ಭರ್ತಿ ಮಾಡಿದ ಎನುಮರೇಶನ್ ಸಂಗ್ರಹಿ ಸು ವುದಕ್ಕೆ ರಾಜಕೀಯ ಪಕ್ಷದ ಏಜೆಂಟ್‌ಗಳಿಗೆ ಅವಕಾಶ ನೀಡಲಾಗಿದೆ. ಪ್ರತಿ ರಾಜಕೀಯ ಪಕ್ಷದಿಂದ ನೇಮಕಗೊಂಡ ಏಜೆಂಟ್ ದಿನಕ್ಕೆ ಗರಿಷ್ಠ 50 ಭರ್ತಿ ಮಾಡಿದ ಫಾರಂಗಳನ್ನು ಮತದಾರರಿಂದ ಸಂಗ್ರಹಿಸಿ, ಬಿಎಲ್‌ಒಗಳಿಗೆ ಸಲ್ಲಿಸಬಹು ದಾಗಿದೆ. ಈ ಅವಕಾಶ ಬಳಕೆ ಮಾಡಿಕೊಂಡು ಇದೀಗ, ವಾಪಾಸ್ ಬರದಿರುವ ಫಾರಂಗಳನ್ನು ಸಂಗ್ರಹಿಸುವುದಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಭನ್ವಿರ್ ಸಿಂಗ್ ಮೀನಾ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.-- ಕೋಟ್--
-ಭನ್ವಿರ್ ಸಿಂಗ್ ಮೀನಾ, ಜಿಲ್ಲಾ ಚುನಾವಣಾಧಿಕಾರಿ, ಚಿಕ್ಕಮಗಳೂರು---ಬಾಕ್ಸ್---
ಎನುಮರೇಶನ್ ಫಾರಂ ವಿವರವಿಧಾನಸಭಾ ಕ್ಷೇತ್ರಒಟ್ಟು ಮತದಾರರುಡಿಜಿಟಲಿಕರಣ ಫಾರಂ ಸಂಖ್ಯೆಎಎಸ್‌ಡಿಡಿಒ ಸಂಖ್ಯೆಶೃಂಗೇರಿ1,67,1711,57,03510,136
ಮೂಡಿಗೆರೆ1,67,299 1,53,42813,871ಚಿಕ್ಕಮಗಳೂರು 2,26,9341.92,47734,457ತರೀಕೆರೆ 1,92,089 1,72,24419,843ಕಡೂರು 2,06,7401,87,97918,761
ಒಟ್ಟು 9,60,231 8,63,16397,068