ಸೋಮವಾರ ಕಡೂರು ಕ್ಷೇತ್ರದ ಯಗಟಿ ಪುರ ಸಮೀಪದ ಚನ್ನಾಪುರ- ಗಿರಿಬೊಮ್ಮನಹಳ್ಳಿಯಲ್ಲಿ ಸೇತುವೆ,ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ
ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳ ನಿರ್ಮಾಣದ ಜೊತೆಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಸೋಮವಾರ ಕಡೂರು ಕ್ಷೇತ್ರದ ಯಗಟಿ ಪುರ ಸಮೀಪದ ಚನ್ನಾಪುರ- ಗಿರಿಬೊಮ್ಮನಹಳ್ಳಿಯ ಬರಹಳ್ಳಕ್ಕೆ ಪ್ರಾಂಸರಿ ಯೋಜನೆಯಲ್ಲಿ ₹495 ಲಕ್ಷ ವೆಚ್ಚದ ಸೇತುವೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸಾಕಷ್ಟು ಅಫಘಾತಗಳು ಈ ಸೇತುವೆ ಬಳಿ ನಡೆದಿರುವುದನ್ನು ಮನಗಂಡು ₹495 ಲಕ್ಷನಲ್ಲಿ ಈ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. 2.ಕಿ.ಮೀ. ರಸ್ತೆಕೂಡ ಮಾಡಲಾಗುವುದು. ಜನರು ಕೇಳದೇ ಇದ್ದರೂ ಕೂಡ ನಾನೇ ಈ ಸೇತುವೆ ನಿರ್ಮಾಣಕ್ಕೆ ಅದ್ಯತೆ ನೀಡಿ ಚಾಲನೆ ನೀಡಲಾಗುತ್ತಿದೆ ಎಂದರು.ಶಾಸಕರ ನಿಧಿಯಿಂದ ಗ್ರಾಮದ ಒಳಗಿನ ರಸ್ತೆಗಳನ್ನೂ ಮಾಡುವ ಜೊತೆಗೆ ಗ್ರಾಮೀಣ ಸಂಪರ್ಕರಸ್ತೆಗಳಿಗೂ ಒತ್ತು ನೀಡಲಾಗುತ್ತಿದೆ. 9ನೇ ಮೈಲಿ ಕಲ್ಲಿನಿಂದ ಸಿಂಗಟಗೆರೆವರೆಗೆ ರಸ್ತೆ ಆಗಬೇಕಿದೆ. ಏಕಕಾಲದಲ್ಲಿ ಒಂದೇ ರಸ್ತೆಗೆ ಮೊದಲ ಭಾರಿ ₹22 ಕೋಟಿ ಹಾಕುವ ಮೂಲಕ ಪಂಚನಹಳ್ಳಿ- ಸಿಂಗಟಗೆರೆ ರಸ್ತೆ ಮಾಡುತ್ತಿದ್ದೇವೆ. ಅಲ್ಲದೆ ದೊಣ್ಣೆಕೋರನ ಹಳ್ಳಿಯಿಂದ ಚೌಳಹಿರಿ ಯೂರಿನವರೆಗೆ ರಸ್ತೆ ಆಗಲಿದೆ. ಉತ್ತಮ ರಸ್ತೆಗಳ ಅಭಿವೃದ್ಧಿಗೆ ಶಾಸಕನಿಗೆ ಇರುವ ಬದ್ಧತೆ ಆಗಿದೆ ಎಂದರೆ ತಪ್ಪಾಗಲಾರದು ಎಂದರು.
ಬಿಜೆಪಿ ಸರರ್ಕಾದ 5 ವರ್ಷಗಳ ಅವಧಿಯಲ್ಲಿ ಹಿಂದುತ್ವವನ್ನು ಹೇಳಿತೇ ಹೊರತು ಅನುದಾನ ನೀಡಲಿಲ್ಲ. ಆದರೆ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಕೇವಲ 2 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಅನುದಾನ ನೀಡಲಾಗಿದೆ ಎಂದರು.
ಇನ್ನು ಬಹು ದಿನಗಳ ಬೇಡಿಕೆಯಾಗಿರುವ ಕರೇಕಲ್ಲಿನಿಂದ- ಸೀತಾಪುರ ತಾಂಡ್ಯ ಮತ್ತು ಪರ್ವತನಹಳ್ಲಿ ಗೇಟಿನವರೆಗೆ ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.ಮಾಜಿ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಡಿ.ಎಸ್. ಉಮೇಶ್ ಮಾತನಾಡಿ, ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸೇತುವೆ ನಿರ್ಮಾಣಕ್ಕೆ ನಮ್ಮ ಶಾಸಕ ಕೆ.ಎಸ್. ಆನಂದ್ ಈ ಭಾಗದ ರೈತರಿಗೆ ಬೇಕಾಗಿದ್ದ ಬರಹಳ್ಳದ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ನಮಗೆ ಸಂತಸದ ಸಂಗತಿ . ಈ ಭಾಗದಿಂದ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುತಿದ್ದಾರೆ ಅವರಿಗೆ ಈ ಭಾಗದ ಜನರ ಪರವಾಗಿ ಅಬಿನಂದಿಸುತ್ತೇನೆ ಎಂದರು.
ಲೋಕೋಪಯೋಗಿ ಇಲಾಖೆ ಎಇಇ ಬಸವರಾಜ್ ನಾಯ್ಕ ಮಾತನಾಡಿ, ಹಿಂದೆ ಈ ಜಾಗದಲ್ಲಿ ಅನೇಕ ಅಫಘಾತಗಳು ಸಂಭವಿಸಿ ಅನೇಕರು ಸಾವನ್ನಪ್ಪಿರುವುದನ್ನು ಅರಿತಿರುವ ಶಾಸಕರು ಆಸಕ್ತಿ ವಹಿಸಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ. ಈ ನೂತನ ಸೇತುವೆಯನ್ನು 40 ಮೀಟರ್ ವಿಸ್ತರಿಸುವುದರಿಂದ ಈ ಭಾಗದ ರೈತರು ಮತ್ತು ಜನರಿಗೆ ಸಂಚರಿಸಲು ಅನುಕೂಲ ವಾಗಲಿದೆ ಎಂದು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಪುರ ಗ್ರಾಪಂ ಅಧ್ಯಕ್ಷೆ ಸುಮಾ ಮಹೇಶ್, ಯಗಟಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ಈಶ್ವರಪ್ಪ, ಹಾಲಪ್ಪ , ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಗುರುಮೂರ್ತಿ, ಸಿದ್ಪಪ್ಪ, ಗೋವಿಂದಪ್ಪ, ರವಿ ಎರೆಬಳ್ಳಪ್ಪ, ಈಶ್ವರಪ್ಪ, ಸಿದ್ದಪ್ಪಪ, ಶಿವಣ್ಣ ಸೇರಿದಂತೆ ಪುರ ,ಯಗಟಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಜನರು ಹಾಜರಿದ್ದರು.
7ಕೆಕೆಡಿಯು1.ಕಡೂರು ಕ್ಷೇ್ತ್ರದ ಯಗಟಿ ಪುರ ಸಮೀಪದ ಚನ್ನಾಪುರ- ಗಿರಿಬೊಮ್ಮನಹಳ್ಳಿಯ ಬರಹಳ್ಳಕ್ಕೆ ಪ್ರಾಂಸರಿ ಯೋಜನೆಯಲ್ಲಿ 495 ಲಕ್ಷರೂ ವೆಚ್ಚದ ಸೇತುವೆ ಮತ್ತು ರಸ್ತೆ ನಿರ್ಮಾಣದ ಕಾಮಗಾರಿಗೆ ಶಾಸಕ ಕೆ.ಎಸ್. ಆನಂದ್ ರವರು ಚಾಲನೆ ನೀಡಿದರು.