ನಾಡಿನ ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಒತ್ತು

KannadaprabhaNewsNetwork |  
Published : Nov 02, 2023, 01:01 AM IST
1ಕೆಡಿವಿಜಿ4-ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪತ್ರಕರ್ತ, ಪತ್ರಿಕ ವಿತರಕರು ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಶಾಸಕ ಕೆ.ಎಸ್.ಬಸವಂತಪ್ಪ ಸನ್ಮಾನಿಸಿದರು. ..............1ಕೆಡಿವಿಜಿ5-ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ. ..............1ಕೆಡಿವಿಜಿ6, 7-ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ ಪರೇಡ್ ವೀಕ್ಷಿಸಿದರು..............1ಕೆಡಿವಿಜಿ8-ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಪಥ ಸಂಚಲನ ವೀಕ್ಷಿಸಿದ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ, ಶಾಸಕ ಕೆ.ಎಸ್‌.ಬಸವಂತಪ್ಪ ಇತರರು. | Kannada Prabha

ಸಾರಾಂಶ

68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಭರವಸೆ

68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಭರವಸೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ. ಈ ನಾಡಿನ ಭವ್ಯ ಸಂಸ್ಕೃತಿ, ಪರಂಪರೆಯ ಯುವ ಜನತೆಗೆ ಮನನ ಮಾಡಿಕೊಡುವ ಅಗತ್ಯವಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಪಾಲಿಕೆಯಿಂದ ಹಮ್ಮಿಕೊಂಡಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ತಾಯಿ ಶ್ರೀ ಭುವನೇಶ್ವರಿಗೆ ಪುಷ್ಪನಮನ ಅರ್ಪಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದ ನಂತರ ರಾಜ್ಯೋತ್ಸವ ಸಂದೇಶ ನೀಡಿ, ಕರ್ನಾಟಕ ಎಂಬುದಾಗಿ ನಾಮಕರಣ ಹೊಂದಿ, 5 ದಶಕವಾಗುತ್ತಿದ್ದು, ನಮ್ಮ ನಾಡು, ನುಡಿ, ನೆಲದ ಭ‍ವ್ಯ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಯುವಜನರಿಗೆ ಮನನ ಮಾಡಿಕೊಡಬೇಕಿದೆ ಎಂದರು.

ರಾಜ್ಯೋತ್ಸವವೆಂದರೆ ಇದು ಕನ್ನಡಿಗರ ಹಬ್ಬ. ಇದನ್ನು ನಮ್ಮ ನಾಡು, ನುಡಿಯ ಹಿರಿಮೆ, ಗರಿಮೆಗಳನ್ನು ಮನನ ಮಾಡಿಕೊಳ್ಳಬೇಕಿದೆ. ಇತಿಹಾಸ ಅರಿತವನು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ. ನಮ್ಮ ಕನ್ನಡ ಭಾಷೆ, ನಾಡಿನ ಉಗಮದ ಇತಿಹಾಸದತ್ತ ಕಣ್ಣು ಹಾಯಿಸಿದರೆ, ಸುಮಾರು 2,500 ವರ್ಷಗಳ ಭವ್ಯ ಇತಿಹಾಸವಿದೆ. ಕ್ರಿ.ಪೂ.3ನೇ ಶತಮಾನದಲ್ಲಿ ಸಾಮ್ರಾಟ ಅಶೋಕನ ಶಿಲಾ ಶಾಸನಗಳಲ್ಲಿ ಕನ್ನಡ ಪದಗಳ ಬಳಕೆ ಕಾಣಿಸುತ್ತದೆ. ನಂತರ ಶಾತವಾಹನರ ಆಳ್ವಿಕೆಯಲ್ಲೂ ಕನ್ನಡ ಭಾಷೆ ಬಳಕೆ ಕಾಣಬಹುದು ಎಂದು ತಿಳಿಸಿದರು.

ಕಲಾವಿದರ ಬೆಳವಣಿಗೆಗೆ ಆದ್ಯತೆ:

ನಮ್ಮ ಭಾಷೆ, ಸಂಸ್ಕೃತಿಯ ರಕ್ಷಣೆಗೆ ನೈತಿಕ ಶಕ್ತಿ ತುಂಬಿ, ಕರ್ತವ್ಯ ನಿರ್ವಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳಿಗೆ ಉನ್ನತ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ, ಲಲಿತಕಲಾ, ಸಂಗೀತ ನೃತ್ಯ ಅಕಾಡೆಮಿ, ಬಯಲಾಟ ಅಕಾಡೆಮಿ ಸ್ಥಾಪಿಸಲಾಗಿದೆ. ಮೈಸೂರು, ಧಾರವಾಡ, ಕಲಬುರಗಿ, ಶಿವಮೊಗ್ಗ, ದಾವಣಗೆರೆ, ಕಾರ್ಕಳದಲ್ಲಿ ರಂಗಾಯಣ ಸ್ಥಾಪಿಸಿ, ನಾಡಿನ ಎಲ್ಲಾ ಭಾಗದ ಕಲಾವಿದರ ಬೆಳವಣಿಗೆ ಜೊತೆಗೆ ಸಾಹಿತ್ಯ, ಸಂಸ್ಕೃತಿ ಬೆಳೆಸಲು ಒತ್ತು ನೀಡಲಾಗಿದೆ ಎಂದು ಎಸ್ಸೆಸ್ ಮಲ್ಲಿಕಾರ್ಜುನ ವಿವರಿಸಿದರು.

ಮಾಯಕೊಂಡ ಶಾಸಕ ಕೆ.ಎಸ್‌.ಬಸವಂತಪ್ಪ, ಮೇಯರ್‌ ಬಿ.ಎಚ್‌.ವಿನಾಯಕ ಪೈಲ್ವಾನ್‌, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಪೂರ್ವ ವಲಯ ಐಜಿಪಿ ಕೆ.ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ್‌, ಪಾಲಿಕೆ ಸದಸ್ಯರಾದ ಜಿ.ಎಸ್‌.ಮಂಜುನಾಥ ಗಡಿಗುಡಾಳ, ಕೆ.ಚಮನ್ ಸಾಬ್‌, ದಿನೇಶ ಕೆ.ಶೆಟ್ಟಿ. ಬಿ.ವಾಮದೇವಪ್ಪ, ಕೆ.ಏಕಾಂತಪ್ಪ, ಇ.ಎಂ.ಮಂಜುನಾಥ ಇತರರಿದ್ದರು.

ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ:

ಒಟ್ಟು 14 ವಿವಿಧ ತುಕಡಿಗಳು ಆಕರ್ಷಕ ಪಥ ಸಂಚಲನ ನಡೆಸಿದವು. ಮಹೇಶ ಪಾಟೀಲ್ ನೇತೃತ್ವದ ಡಿಆರ್ ಪೊಲೀಸ್‌ ಪಾಟೀಲ್‌, ಸಾಗರ್ ನೇತೃತ್ವದಲ್ಲಿ ನಾಗರಿಕ ಪೂಲೀಸ್‌, ಅಂಬರೀಷ ಕಿರುವಾಡಿ ಗೃಹ ರಕ್ಷಕ ದಳ, ಎಸ್.ಎಚ್‌.ವೆಂಕಟೇಶ ಜಿಲ್ಲಾ ಅಗ್ನಿಶಾಮಕ ದಳ, ಎಚ್.ಎಸ್‌.ಅಂಜಿನಪ್ಪ ಅರಣ್ಯ ರಕ್ಷಕ ದಳ, ಡಿ.ಕೆ.ಷರ್ನಿಲ್‌ರ ಡಿಆರ್‌ಎಂ ಕಾಲೇಜು ಎನ್‌ಸಿಸಿ ತಂಡ, ಶಿವಕುಮಾರ ನೇತೃತ್ವದ ಜಿಎಫ್‌ಜಿಸಿ, ಕೆ.ಚಂಪಕ ಎವಿಕೆ ಎನ್‌ಸಿಸಿ ತಂಡ, ಗೌತಮಿ ಸೇಂಟ್ ಪೌಲ್ಸ್ ಸೆಂಟ್ರಲ್ ಶಾಲೆ, ಎಂ.ಎಸ್.ಪ್ರೇರಣಾ ಸ್ಕೌಟ್ಸ್ ಮತ್ತು ಗೈಡ್ಸ್‌, ರೆಹನಾಜಿಯಾ ಸೀತಮ್ಮ ಶಾಲೆ, ಪಿ.ಮನೀಶ್ ಸರ್ಟಿಫೈಡ್ ಶಾಲೆ, ಬಿ.ಎಸ್‌.ಖುಷಿ ಪುಷ್ಪಾ ಮಹಲಿಂಗಪ್ಪ ಶಾಲೆ, ಆರ್‌.ಬಿಂದು ನೇತೃತ್ವದ ಸೇವಾದಳ, ಡಿಎಆರ್‌ನ ಬ್ಯಾಂಡ್ ಮಾಸ್ಟರ್‌ ಹೊನ್ನೂರಪ್ಪ ನೇತೃತ್ವದ ವಾದ್ಯ ತಂಡ ಗಮನ ಸೆಳೆದವು.

.................

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಪತ್ರಕರ್ತ, ಸುವರ್ಣ ನ್ಯೂಸ್‌ ವಾಹಿನಿ ವರದಿಗಾರ ಡಾ.ಸಿ.ವರದರಾಜ, ಬಿ.ಎಂ.ಶಿವಕುಮಾರ, ರಂಗನಾಥ ರಾವ್, ಎ.ಫಕೃದ್ದೀನ್‌, ವಸಂತಕುಮಾರ, ಎಚ್‌.ಎನ್‌.ಪ್ರಕಾಶ, ಚನ್ನಗಿರಿ ವೀರೇಂದ್ರ ಪ್ರಸಾದ, ಮಂಗಳವಾದ್ಯದ ಎಲೆಬೇತೂರು ಕೃಷ್ಣಪ್ಪ, ಚಲವಾದಿ ಶಹನಾಯಿ ಶಾಬನೂರಿನ ಬಸವರಾಜಪ್ಪ, ಬಾತಿ ಕೆ.ರೇವಣಪ್ಪ, ಜಿ.ಮಂಜಮ್ಮ ರಂಗಭೂಮಿ, ಹರಿಹರ ಎಚ್.ಕೆ ಕೊಟ್ರಪ್ಪ, ಹೆದ್ನೆ ಮುರುಗೇಶಪ್ಪ, ಜಗಳೂರು ತಾ. ಬಿಳಿಚೋಡು ಕೆ.ಬಸವರಾಜಪ್ಪ, ಹನುಮಂತ ರಾವ್ ಪವಾರ್, ದೇವಪ್ಪ ಮಲಹಾಳ, ಹಳೆಬೀಡು ರಾಮಪ್ರಸಾದ, ವಿಜಯ.ಸಿ.ಅಕ್ಕಿ, ಬಿ.ಪರಮೇಶ್ವರಚಾರ್, ಡಾ.ಶಿವನಗೌಡ, ಜಗಳೂರು ಪಾಪಮ್ಮ, ವಿಜಯಲಕ್ಷ್ಮಿರಂಗಭೂಮಿ, ಡಾ. ಬಿ.ಎ ರಾಜಪ್ಪ ನಿಬಗೂರು, ಹರಿಹರದ ಎಂ. ಬಿ ನಾಗರಾಜ, ರವೀಂದ್ರ ಕಮ್ಮಾರ, ಜೆ.ಎನ್.ಕರಿಬಸಪ್ಪ, ಹೊನ್ನಾಳಿ ಶಾಂತಾದೇವಿ ಹಿರೇಕಲ್ಮಠ, ವೀಣಾ ಕೃಷ್ಣಮೂರ್ತಿ, ಎಂ.ರವಿ, ಎಸ್‌.ಪಿ.ಗೀತಾ, ನಿರಂಜನ ಮೂರ್ತಿ, ಮಲ್ಲಾಪುರ ಓ.ಚಂದ್ರಪ್ಪ, ಹರಿಹರ ಹನುಮಂತಾಚಾರಿ, ಹೊನ್ನಾಳಿ ಎಚ್‌.ಬಿ.ಬಸವರಾಜ, ಚಂದ್ರು ತಬಲಾ, ಕಾರಿಗನೂರು ಜಿ.ಎಸ್.ತಿಪ್ಪೇಸ್ವಾಮಿ, ಹನುಮಂತಪ್ಪ ಕೊಕ್ಕನೂರು, ಬುಳ್ಳಾಪುರ ಕ್ಯಾಂಪ್ ಸುರೇಶ್, ಗಂಗಾಧರ ಬಿ.ಎಲ್ ನಿಟ್ಟೂರು, ಚಿರಡೋಣಿ ಸಿ.ಎಂ.ನರೇಂದ್ರ, ದೀಪಾ ಎನ್ ರಾವ್, ಆವರಗೆರೆಯ ಜಿ.ಕರಿಬಸಪ್ಪ, ಪತ್ರಿಕಾ ವಿತರಕ ಎಚ್.ಚಂದ್ರು, ಟಿ.ಕೆ ದಿನೇಶ್ ಬಾಬುರಂಗ, ಆರ್.ರವಿಕುಮಾರ, ಆವರಗೆರೆ ಕೆ ಬಾನಪ್ಪ, ಕೆ.ವಿಜಯಕುಮಾರಿ, ಕಂದಗಲ್ಲು ಈಶ್ವರಪ್ಪ, ಚನ್ನಗಿರಿ ಎಚ್.ಬಿ.ಅಲ್ಲಮಪ್ರಭುಸ್ವಾಮಿರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಿ, ಗೌರವಿಸಲಾಯಿತು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ