ಮೋದಿ ಸರ್ಕಾರದಿಂದ ಮಹಿಳೆಯರ ಅಭಿವೃದ್ಧಿಗೆ ಒತ್ತು

KannadaprabhaNewsNetwork | Published : Mar 6, 2024 2:16 AM

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವ ಕೇಂದ್ರ ಸರ್ಕಾರದಿಂದ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ.

ಬೀದರ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವ ಕೇಂದ್ರ ಸರ್ಕಾರದಿಂದ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ಹೀಗಾಗಿ ಫೀರ್ ಏಕ್ ಬಾರ್ ಮೋದಿ ಸರ್ಕಾರ ಎಂಬ ಘೋಷಣೆಯೊಂದಿಗೆ ಬೀದರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾವತಿಯಿಂದ ಮಂಗಳವಾರ ನಗರದಲ್ಲಿ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.

ಪಾಪನಾಶ ದೇವಸ್ಥಾನದ ಮುಖ್ಯದ್ವಾರದಿಂದ ಬೈಕ್ ರ್‍ಯಾಲಿ ಆರಂಭಗೊಂಡು ತಾಯಿ ಮಗು ವೃತ್ತದವರೆಗೆ ನಡೆಸಲಾಯಿತು.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಲುಂಬಿನಿ ಗೌತಮ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ರಾಜಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಸ್ಥಾನ ನೀಡುವುದಕ್ಕೆ ವಿಧೇಯಕ ತರಲಾಗಿದೆ. ಇದೇ ತರಹ ಮಹಿಳೆಯರ ಸುರಕ್ಷತೆಗಾಗಿ ಹೊಸ ಕಾನೂನು ಜಾರಿ ಮಾಡಲಾಗಿದೆ. ಮಹಿಳೆಯರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಕೌಶಲ್ಯ ಅಭಿವೃದ್ಧಿ, ಮುದ್ರಾ ಯೋಜನೆ, ಬೇಟಿ ಬಚಾವ್ ಬೇಟಿ ಪಡಾವೊ ಯೋಜನೆ ಜಾರಿಗೆ ತಂದಿದೆ ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಮೋದಿ ಸರ್ಕಾರವನ್ನು ಆರಿಸಿ ತರಬೇಕೆಂಬ ಉದ್ದೇಶದಿಂದ ಈ ಬೈಕ್‌ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕಿನ ನಿರ್ದೇಶಕಿ ಶಕುಂತಲಾ ಬೆಲ್ದಾಳೆ, ಬಿಜೆಪಿ ಮಹಿಳಾ ಮೋರ್ಚಾ ಉಪಾದ್ಯಕ್ಷೆ ಪ್ರಸನ್ನ ಲಕ್ಷ್ಮಿ ದೇಶಪಾಂಡೆ, ಸಂಗೀತಾ ಅಡಕೆ, ಹೇಮ ತುಕ್ಕಾರೆಡ್ಡಿ, ಮಹಾನಂದ ಪಾಟೀಲ, ಶಶಿಕಲಾ, ಸರಸ್ವತಿ ನವೀನ, ಸಹಾನಾ ಪಾಟೀಲ, ಜಯಾ ಮಹಾದೇವ, ಡಾ.ಶ್ರೇಯಾ, ಡಾ.ಸುಜಾತಾ ಹೊಸಮನಿ, ಸುಜಾತಾ ಸಂತೋಷ ಪಾಟೀಲ, ಮಹಾನಂದಾ ಕೋಟೆ, ಆಶಾ ಕೋಟೆ,ಗೀತಾ ಕೋಟೆ, ಪೀರಪ್ಪ ಔರಾದೆ, ಉಪೇಂದ್ರ ದೇಶಪಾಂಡೆ, ಶ್ರೀನಿವಾಸ ಚೌಧರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this article