ದಾಬಸ್‍ಪೇಟೆ: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ಬಲಪಡಿಸುತ್ತಿದ್ದು, ಇದಕ್ಕಾಗಿ ಕಾರ್ಯಕರ್ತರನ್ನು ನೇಮಿಸಲಾಗುತ್ತಿದೆ ಎಂದು ತ್ಯಾಮಗೊಂಡ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತೇಗೌಡ ತಿಳಿಸಿದರು.
ಪಕ್ಷದ ಬಲವರ್ಧನೆಯನ್ನು ಬೂತ್ ಮಟ್ಟದಿಂದಲೇ ಪ್ರಾರಂಭ ಮಾಡಬೇಕು. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯಾದರೆ ಯಾವ ಚುನಾವಣೆಯನ್ನು ಬೇಕಾದರೂ ನಾವು ಎದುರಿಸಬಹುದು. ಪಂಚಾಯತಿ ಮಟ್ಟದಲ್ಲಿ ಒಂದು ಬ್ಲಾಕ್ ಕಮಿಟಿಯನ್ನು ರಚಿಸಿ. ಇದರ ಮೂಲಕ ಪಕ್ಷದ ಸಂಘಟನೆಗೆ ಒತ್ತು ನೀಡಲಾಗುತ್ತದೆ ಎಂದರು.
ಕಳೆದ ಎರಡೂವರೆ ವರ್ಷ ಅವಧಿಯಲ್ಲಿ ಶಾಸಕ ಎನ್.ಶ್ರೀನಿವಾಸ್ ಅವರು ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಗ್ಯಾರಂಟಿ ಯೋಜನೆಗಳು, ಅದರ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿ, ನಮ್ಮ ಜನಪರ ಆಡಳಿತವನ್ನು ಪರಿಚಯಿಸುವ ಕಾರ್ಯವನ್ನು ಪ್ರತಿ ಬೂತ್ ಮಟ್ಟದಲ್ಲಿ ನಡೆಯಬೇಕು ಎಂದರು.ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ : ತ್ಯಾಮಗೊಂಡ್ಲು ಹೋಬಳಿ ವ್ಯಾಪ್ತಿಯಲ್ಲಿನ ಮಣ್ಣೆ, ದೊಡ್ಡಬೆಲೆ, ಹಸಿರುವಳ್ಳಿ, ಕೋಡಿಗೇಹಳ್ಳಿ, ಕಳಲುಘಟ್ಟ, ಅರೆಬೊಮ್ಮನಹಳ್ಳಿ, ಕುಲುವನಹಳ್ಳಿ, ಮರಳಕುಂಟೆ ಹಾಗೂ ತ್ಯಾಮಗೊಂಡ್ಲು ಗ್ರಾಮ ಪಂಚಾಯತಿಯಲ್ಲಿನ ಪ್ರತಿ ಬೂತ್‍ಗಳಿಗೂ ಅಧ್ಯಕ್ಷ ಹಾಗೂ ಕಮಿಟಿಯನ್ನು ರಚಿಸಲಾಯಿತು.
ಪೋಟೋ 4 :ತ್ಯಾಮಗೊಂಡ್ಲು ಹೋಬಳಿಯ ಖಾಸಗಿ ರೆಸಾರ್ಟ್‍ನಲ್ಲಿ ತ್ಯಾಮಗೊಂಡ್ಲು ಬ್ಲಾಕ್ ಕಮಿಟಿ ವತಿಯಿಂದ ಆಯೋಜಿಸಿದ್ದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ತ್ಯಾಮಗೊಂಡ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತೇಗೌಡ ಹಾಗೂ ಪದಾಧಿಕಾರಿಗಳು ಭಾಗವಹಿಸಿರುವುದು