ಸಹಕಾರ ಸಚಿವಾಲಯದಿಂದ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಒತ್ತು

KannadaprabhaNewsNetwork |  
Published : Sep 04, 2026, 02:00 AM IST
3ಎಚ್ಎಸ್ಎನ್6 : ಹಗರೆ ಹೋಬಳಿ    ಮಲ್ಲಾಪುರ ಕೃಷಿ ಪತ್ತಿನ ಸಹಕಾರ ಸಂಘದ  ವಾರ್ಷಿಕ ಮಹಾ ಸಭೆಯನ್ನು  ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಸಹಕಾರ ಸಂಘಗಳಿಗೆ ಹೆಚ್ಚಿನ ಆದ್ಯತೆ ನೀಡುವ ದೃಷ್ಟಿಯಿಂದ ಸರ್ಕಾರಗಳು ಪ್ರತ್ಯೇಕ ಸಹಕಾರ ಸಚಿವಾಲಯ ಪ್ರಾರಂಭಿಸಿದೆ ಎಂದು ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ತಿಳಿಸಿದರು. ಎತ್ತಿನಹೊಳೆ ಯೋಜನೆಯಿಂದ ಪರಿಹಾರ ಧನ ಪಡೆದ ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೀಡುವಷ್ಟೇ ಬಡ್ಡಿದರ ನೀಡುತ್ತಿರುವ ಸ್ಥಳೀಯ ಸಹಕಾರ ಸಂಘಗಳಲ್ಲೇ ಠೇವಣಿ ಹೂಡುವಂತೆ ಮನವಿ ಮಾಡಿದರು. ಬ್ಯಾಂಕ್ ಮೇಲ್ವಿಚಾರಕ ಹರೀಶ್ ಎಂ.ಎಚ್., ಸಂಘದ ಅಧ್ಯಕ್ಷ ಶ್ರೀನಿವಾಸ್, ರೈತ ಪ್ರತಿನಿಧಿಗಳಾದ ಬಿ.ಜೆ. ಕುಮಾರ್‌, ಮರಳು ಸಿದ್ಧಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರು ಸಹಕಾರ ಸಂಘಗಳಿಗೆ ಹೆಚ್ಚಿನ ಆದ್ಯತೆ ನೀಡುವ ದೃಷ್ಟಿಯಿಂದ ಸರ್ಕಾರಗಳು ಪ್ರತ್ಯೇಕ ಸಹಕಾರ ಸಚಿವಾಲಯ ಪ್ರಾರಂಭಿಸಿದೆ ಎಂದು ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ತಿಳಿಸಿದರು. ಹಗರೆ ಹೋಬಳಿ ಮಲ್ಲಾಪುರ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಯಮದಂತೆ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು ಸೆಪ್ಟೆಂಬರ್ 25ರ ಒಳಗಾಗಿ ವಾರ್ಷಿಕ ಸಭೆ ನಡೆಸುವುದು ಕಡ್ಡಾಯವಾಗಿದೆ . ಬ್ಯಾಂಕ್ ಮೂಲಕ ಯಶಸ್ವಿನಿ, ಇತರೆ ಯೋಜನೆಗಳನ್ನು ರೈತರಿಗೆ ತಲುಪಿಸಲಾಗುತ್ತಿದೆ. ತಾವು ಅಧ್ಯಕ್ಷರಾದ ನಂತರ ಬೇಲೂರು ತಾಲೂಕಿನ ಸಾಲದ ಪ್ರಮಾಣವನ್ನು ₹50 ಕೋಟಿಯಿಂದ ₹150 ಕೋಟಿಗೆ ಹೆಚ್ಚಿಸಲಾಗಿದ್ದು, ಎಫ್‌ಐಡಿ ನೋಂದಣಿಯಾಗಿದ್ದು ಸಾಲದಿಂದ ವಂಚಿತರಾದ ರೈತರಿಗೆ ಹೈನುಗಾರಿಕೆಗಾಗಿ ಯಾವುದೇ ದಾಖಲೆಗಳಿಲ್ಲದೆ ₹1 ಲಕ್ಷದಿಂದ ₹1.50 ಲಕ್ಷದವರೆಗೆ ಸಾಲ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿ, ರೈತರು ಇದರ ಸದುಪಯೋಗ ಪಡೆದು ಸಕಾಲಕ್ಕೆ ಸಾಲ ಮರುಪಾವತಿಸುವಂತೆ ಕೋರಿದರು. ಎಚ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಎಂ.ಎ. ನಾಗರಾಜ್ ಮಾತನಾಡಿ , ಅರೆಮಲೆನಾಡು ಭಾಗಗಳಾದ ಹಳೇಬೀಡು ಮತ್ತು ಮಾದಿಹಳ್ಳಿ ಹೋಬಳಿಗಳ ರೈತರಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಜೊತೆಗೆ, ಎತ್ತಿನಹೊಳೆ ಯೋಜನೆಯಿಂದ ಪರಿಹಾರ ಧನ ಪಡೆದ ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೀಡುವಷ್ಟೇ ಬಡ್ಡಿದರ ನೀಡುತ್ತಿರುವ ಸ್ಥಳೀಯ ಸಹಕಾರ ಸಂಘಗಳಲ್ಲೇ ಠೇವಣಿ ಹೂಡುವಂತೆ ಮನವಿ ಮಾಡಿದರು. ಬ್ಯಾಂಕ್ ಮೇಲ್ವಿಚಾರಕ ಹರೀಶ್ ಎಂ.ಎಚ್., ಸಂಘದ ಅಧ್ಯಕ್ಷ ಶ್ರೀನಿವಾಸ್, ರೈತ ಪ್ರತಿನಿಧಿಗಳಾದ ಬಿ.ಜೆ. ಕುಮಾರ್‌, ಮರಳು ಸಿದ್ಧಪ್ಪ ಮಾತನಾಡಿದರು. ಸಂಘದ ಸಿಇಒ ಪುಟ್ಟಸ್ವಾಮಿ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕ ಗಣೇಶ್ ಎಲ್ಲರನ್ನು ಸ್ವಾಗತಿಸಿ, ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಬಿ.ಡಿ. ಗಣೇಶ್, ನಿರ್ದೇಶಕರಾದ ಚಂದ್ರೇಗೌಡ, ಗಣೇಶಮೂರ್ತಿ, ಚಂದ್ರಶೇಖರ್, ವಿರೂಪಾಕ್ಷ, ಕುಮಾರ್‌, ಹನುಮಂತ ಬೋವಿ, ಇಂದಿರಾ ರಾಣಿ, ಪ್ರೇಮಲತಾ ಸೇರಿದಂತೆ ಹೆಚ್ಚಿನ ಸಂಖ್ಯೆಯ ಶೇರುದಾರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ಕ ಸಮ್ಮೇಳನದಲ್ಲಿ ಕನ್ನಡದ ಸಾಧಕರ ಹೆಸರಲ್ಲಿ ವೇದಿಕೆ
ಶೂಟೌಟ್‌: ಘಟನಾ ಸ್ಥಳಕ್ಕೆ ಸಿಐಡಿ ಎಸ್‌ಪಿ