ಕಿಂಗ್‌ಪಿನ್‌’ ಕನ್ನಾಳೆ ಆಪ್ತರ ಮನೆಗೆ ಸಿಐಡಿ ಲಗ್ಗೆ

KannadaprabhaNewsNetwork |  
Published : Sep 04, 2026, 01:45 AM IST
ಚಿತ್ರ 3ಬಿಡಿಆರ್‌2ಬಸವರಾಜ ಕನ್ನಾಳೆಯ ಅತ್ಯಂತ ಆಪ್ತ ಸ್ನೇಹಿತ ಪವನ್‌ ರೆಡ್ಡಿ ಎಂಬುವವರ ಮನ್ನಾಎಖ್ಖೆಳ್ಳಿಯ ಮನೆಗೆ ಸಿಐಡಿ ಅಧಿಕಾರಿಗಳು ತೆರಳಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.  | Kannada Prabha

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪರೀಕ್ಷಾ ಅಕ್ರಮ ಪ್ರಕಣದ ಪ್ರಮುಖ ರೂವಾರಿ (ಕಿಂಗ್‌ಪಿನ್‌) ಬಸವರಾಜ ಕನ್ನಾಳೆ ಸುತ್ತ ಸಿಐಡಿ (CID) ತನಿಖಾ ಜಾಲ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಆರೋಪಿಯ ಜಾಡು ಹಿಡಿದು ಹೊರಟಿರುವ ಅಧಿಕಾರಿಗಳ ಪಡೆಯೀಗ ಆತನ ನಿಕಟವರ್ತಿಗಳು ಹಾಗೂ ಆಪ್ತ ಸ್ನೇಹಿತರ ನೆಲೆಗಳ ಮೇಲೆ ದಿಢೀರ್‌ ದಾಳಿ ನಡೆಸುವ ಮೂಲಕ ಬಲೆ ಬೀಸಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪರೀಕ್ಷಾ ಅಕ್ರಮ ಪ್ರಕಣದ ಪ್ರಮುಖ ರೂವಾರಿ (ಕಿಂಗ್‌ಪಿನ್‌) ಬಸವರಾಜ ಕನ್ನಾಳೆ ಸುತ್ತ ಸಿಐಡಿ (CID) ತನಿಖಾ ಜಾಲ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಆರೋಪಿಯ ಜಾಡು ಹಿಡಿದು ಹೊರಟಿರುವ ಅಧಿಕಾರಿಗಳ ಪಡೆಯೀಗ ಆತನ ನಿಕಟವರ್ತಿಗಳು ಹಾಗೂ ಆಪ್ತ ಸ್ನೇಹಿತರ ನೆಲೆಗಳ ಮೇಲೆ ದಿಢೀರ್‌ ದಾಳಿ ನಡೆಸುವ ಮೂಲಕ ಬಲೆ ಬೀಸಿದೆ.ಮನ್ನಾಎಖ್ಖಿಳ್ಳಿಯಲ್ಲಿ ಸಿಐಡಿ ಭೇಟಿ, ಆಪ್ತನಿಗೆ ಶಾಕ್‌: ತನಿಖೆಯ ಭಾಗವಾಗಿ ಬೀದರ್‌ ಜಿಲ್ಲೆಯ ಮನ್ನಾಎಖೇಳ್ಳಿ ನಿವಾಸಿ, ಕನ್ನಾಳೆಯ ಅತ್ಯಂತ ಆಪ್ತ ಸ್ನೇಹಿತ ಪವನ್‌ ರೆಡ್ಡಿ ಎಂಬಾತನ ಮನೆ ಮೇಲೆ ಸಿಐಡಿ ತಂಡ ಮಂಗಳವಾರ ದಿಢೀರ್‌ ದಾಳಿ ನಡೆಸಿದೆ. ತನಿಖಾಧಿಕಾರಿಗಳು ಪವನ್‌ ರೆಡ್ಡಿಗೆ ಸೇರಿದ ನಿವಾಸ ಮತ್ತು ಕಚೇರಿಗಳ ಮೇಲೆ ಪರಿಶೀಲನೆ ನಡೆಸಿದ್ದು, ಕನ್ನಾಳೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಹಾಗೂ ಅಕ್ರಮ ಹಣದ ವಹಿವಾಟಿನ ಸಾಕ್ಷ್ಯಗಳಿಗಾಗಿ ಜಾಲಾಡಿದ್ದಾರೆ.ಬ್ಯಾಂಕ್‌ ಖಾತೆ, ಕಾಲ್‌ ಡಿಟೇಲ್ಸ್‌ ಪರಿಶೀಲನೆ: ಕೇವಲ ಭೌತಿಕ ದಾಳಿಗಷ್ಟೇ ಸೀಮಿತವಾಗದೆ, ಬಸವರಾಜ ಕನ್ನಾಳೆ ಹಾಗೂ ಆತನ ಆಪ್ತರ ಬ್ಯಾಂಕ್‌ ಖಾತೆಗಳು, ಯುಪಿಐ ವಹಿವಾಟುಗಳು ಮತ್ತು ಇತ್ತೀಚಿನ ಮೊಬೈಲ್ ಕರೆಗಳ ದಾಖಲೆಗಳನ್ನು ಸಿಐಡಿ ಅಧಿಕಾರಿಗಳು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ಈ ಪರಿಶೀಲನೆಯ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಭಾರಿ ಪ್ರಮಾಣದ ಅಕ್ರಮ ಹಣಕಾಸು ವಹಿವಾಟು ನಡೆದಿರುವುದು ಪತ್ತೆಯಾಗಿದೆ ಎಂಬುವದು ಮೂಲಗಳಿಂದ ತಿಳಿದುಬಂದಿದೆ. ಕೆಪಿಎಸ್ಸಿ ಪರೀಕ್ಷಾರ್ಥಿಗಳಿಂದ ಪಡೆದಿದ್ದ ಅಕ್ರಮ ಹಣವನ್ನು ಈ ಖಾತೆಗಳ ಮೂಲಕ ರವಾನಿಸಿರುವ ಶಂಕೆ ವ್ಯಕ್ತವಾಗಿದೆ.ಭಾಲ್ಕಿ ಬಳಿ 9 ಎಕರೆ ವಿಸ್ತೀರ್ಣದ ಹೈನುಗಾರಿಕೆ ಘಟಕ: ಕನ್ನಾಳೆ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಅಪಾರ ಹಣ ಹೂಡಿಕೆ ಮಾಡಿರುವುದು ಕಂಡುಬಂದಿದೆ. ಜಿಲ್ಲೆಯ ಬಾಲ್ಕಿ ನಗರದ ಹೊರವಲಯದಲ್ಲಿ ಬಸವರಾಜ ಕನ್ನಾಳೆ ಭಾರಿ ಮೌಲ್ಯದ ಹೈನುಗಾರಿಕಾ ಘಟಕವನ್ನು (Dairy Farm) ನಿರ್ಮಿಸಿದ್ದಾನೆ. ಸುಮಾರು 9 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಹೈಟೆಕ್‌ ಘಟಕವು ಇತ್ತೀಚೆಗಷ್ಟೇ ಪೂರ್ಣಗೊಂಡು ಬಳಕೆಗೆ ಬಂದಿದೆ. ಅಕ್ರಮ ಹಣವನ್ನು ಸಕ್ರಮಗೊಳಿಸಲು (Money Laundering) ಈ ರೀತಿ ಬೃಹತ್ ಹೂಡಿಕೆ ಮಾಡಲಾಗಿದೆಯೇ ಎಂಬ ಕೋನದಲ್ಲಿಯೂ ತನಿಖೆ ಮುಂದುವರಿದಿದೆ.ಮುಂದುವರಿದ ಶೋಧ ಕಾರ್ಯ: ಕೆಪಿಎಸ್ಸಿ ಹುದ್ದೆಗಳ ಮಾರಾಟ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಸೂತ್ರಧಾರಿಯಾಗಿರುವ ಆರೋಪ ಹೊತ್ತಿರುವ ಕನ್ನಾಳೆಗೆ ಆಶ್ರಯ ನೀಡುತ್ತಿರುವವರು ಹಾಗೂ ಆರ್ಥಿಕ ನೆರವು ನೀಡಿರುವ ಮತ್ತು ನೀಡುತ್ತಿರುವವರ ಮೇಲೆಯೂ ಸಿಐಡಿ ಕಣ್ಣಿಟ್ಟಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡಮತಿಘಟ್ಟದಲ್ಲಿ ಜೈವಿಕ ಕೀಟನಾಶಕಗಳ ಬಳಕೆ ಕುರಿತು ಜಾಗೃತಿ
ಮಹಿಳೆಯರ ಸಬಲೀಕರಣಕ್ಕೆ ವಿಐಎಸ್‌ಎಲ್ ಸದಾ ಬದ್ಧ: ಅನೂಪ್ ಕುಮಾರ್