ಜೈವಿಕ ಕೀಟನಾಶಕಗಳು ಸೂಕ್ಷ್ಮಜೀವಿಗಳು ಅಥವಾ ನೈಸರ್ಗಿಕ ಮೂಲಗಳಿಂದ ದೊರೆಯುವ ವಸ್ತುಗಳನ್ನು ಆಧರಿಸಿದ್ದು, ಬೆಳೆಗಳಲ್ಲಿನ ಕೀಟಗಳು ಮತ್ತು ರೋಗಕಾರಕಗಳನ್ನು ನಿಯಂತ್ರಿಸಲು ಬಳಸಬಹುದಾಗಿದೆ ಎಂದು ವಿದ್ಯಾರ್ಥಿಗಳು ವಿವರಿಸಿದರು. ಜೈವಿಕ ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಗೂ ಪರಿಸರವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯವಾಗುತ್ತದೆ. ರಾಸಾಯನಿಕ ಕೀಟನಾಶಕಗಳ ಅತಿಯಾದ ಮತ್ತು ಅಸಮರ್ಪಕ ಬಳಕೆಯಿಂದ ಉಂಟಾಗಬಹುದಾದ ಕೀಟಗಳ ಪ್ರತಿರೋಧ, ಪರಿಸರ ಮಾಲಿನ್ಯ ಹಾಗೂ ಆಹಾರದಲ್ಲಿ ಕೀಟನಾಶಕ ಅವಶೇ?ಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಜೈವಿಕ ವಿಧಾನಗಳು ಮಹತ್ವದ ಪಾತ್ರ ವಹಿಸಬಹುದು ಎಂದು ವಿದ್ಯಾರ್ಥಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಹಾಗೂ ಸುಸ್ಥಿರ ಬೆಳೆ ಸಂರಕ್ಷಣಾ ಕ್ರಮಗಳನ್ನು ಉತ್ತೇಜಿಸುವ ಉದ್ದೇಶದಿಂದ ದೊಡ್ಡಮತಿಘಟ್ಟ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ, ಹಾಸನದ ಅಂತಿಮ ವರ್ಷದ ಬಿ.ಎಸ್ಸಿ. ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಜೈವಿಕ ಕೀಟನಾಶಕಗಳು ಮತ್ತು ಅವುಗಳ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಸೌಮ್ಯ ಹಾಗೂ ಡಾ. ನಮ್ರತಾ ಅವರು ವಿದ್ಯಾರ್ಥಿಗಳು ರೈತರಿಗೆ ಜೈವಿಕ ಕೀಟನಾಶಕಗಳ ಮಹತ್ವ, ಅವುಗಳ ವಿಧಗಳು, ಬಳಕೆಯ ವಿಧಾನ ಹಾಗೂ ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆಯಲ್ಲಿ ಅವುಗಳ ಪಾತ್ರದ ಕುರಿತು ಮಾಹಿತಿ ನೀಡಿದರು. ಜೈವಿಕ ಕೀಟನಾಶಕಗಳು ಸೂಕ್ಷ್ಮಜೀವಿಗಳು ಅಥವಾ ನೈಸರ್ಗಿಕ ಮೂಲಗಳಿಂದ ದೊರೆಯುವ ವಸ್ತುಗಳನ್ನು ಆಧರಿಸಿದ್ದು, ಬೆಳೆಗಳಲ್ಲಿನ ಕೀಟಗಳು ಮತ್ತು ರೋಗಕಾರಕಗಳನ್ನು ನಿಯಂತ್ರಿಸಲು ಬಳಸಬಹುದಾಗಿದೆ ಎಂದು ವಿದ್ಯಾರ್ಥಿಗಳು ವಿವರಿಸಿದರು. ಜೈವಿಕ ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಗೂ ಪರಿಸರವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯವಾಗುತ್ತದೆ. ರಾಸಾಯನಿಕ ಕೀಟನಾಶಕಗಳ ಅತಿಯಾದ ಮತ್ತು ಅಸಮರ್ಪಕ ಬಳಕೆಯಿಂದ ಉಂಟಾಗಬಹುದಾದ ಕೀಟಗಳ ಪ್ರತಿರೋಧ, ಪರಿಸರ ಮಾಲಿನ್ಯ ಹಾಗೂ ಆಹಾರದಲ್ಲಿ ಕೀಟನಾಶಕ ಅವಶೇ?ಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಜೈವಿಕ ವಿಧಾನಗಳು ಮಹತ್ವದ ಪಾತ್ರ ವಹಿಸಬಹುದು ಎಂದು ವಿದ್ಯಾರ್ಥಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರೈಕೋಡರ್ಮಾ ಮುಂತಾದ ಜೈವಿಕ ನಿಯಂತ್ರಣಕಾರಕಗಳನ್ನು ಮಣ್ಣಿನಿಂದ ಹರಡುವ ರೋಗಗಳ ನಿರ್ವಹಣೆಯಲ್ಲಿ ಬಳಸುವ ಕುರಿತು ಮಾಹಿತಿ ನೀಡಲಾಯಿತು. ಹಾಗೆಯೇ ಶಿಲೀಂಧ್ರ ಆಧಾರಿತ ಜೈವಿಕ ಕೀಟನಾಶಕಗಳನ್ನು ವಿವಿಧ ಕೀಟಗಳ ನಿಯಂತ್ರಣದಲ್ಲಿ ಬಳಸಬಹುದಾಗಿದೆ ಎಂದು ವಿವರಿಸಲಾಯಿತು.