ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಮಹಿಳೆಯರಿಗೆ ಕಾನೂನು ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಖಿ ಕೇಂದ್ರದ ಮುಖ್ಯಸ್ಥೆ ಶಂಕ್ರಮ್ಮ ಜಂಬನಕಟ್ಟಿ ಸಖಿ ಯೋಜನೆ ಕುರಿತು ತಿಳಿಸಿದರು. ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ಸಖಿ ಕೇಂದ್ರಕ್ಕೆ ಸಂಪರ್ಕಿಸಬೇಕೆಂದರು.
ಮಹಿಳಾ ಸಾಂತ್ವನ ಕೇಂದ್ರದ ಸವಿತಾ ಆಚಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಖಿ ಕೇಂದ್ರದ ಅಡ್ವೋಕೇಟ್ ವಿಶಾಲಾಕ್ಷಿ ಮಹಿಳಾ ಕಾನೂನುಗಳ ಕುರಿತು ತಿಳಿಸಿದರು. ಕಾಲೇಜು ಪ್ರಾಚಾರ್ಯೆ ಬಿ.ಬಿ. ಸುಗ್ಗಮದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಉಪನ್ಯಾಸ ಸಂಚಾಲಕ ಎಸ್.ಎಸ್. ಪಾಟೀಲ, ಎನ್ನೆಸ್ಸೆಸ್ ಅಧಿಕಾರಿ ಎಂ.ಎನ್. ಗೌಡರ, ಸ್ಕೌಟ್ಸ್ - ಗೈಡ್ಸ್ ಅಧಿಕಾರಿ ಎಸ್.ಆರ್. ಕಲ್ಯಾಣಶೆಟ್ಟಿ, ಐ.ಕ್ಯೂ.ಎ.ಸಿ ಅಧಿಕಾರಿ ಪಿ.ಆರ್. ಪಾಟೀಲ, ಒಕ್ಕೂಟ ಚೇರಮನ್ನರಾದ ಟಿ.ಎಂ. ಕುಲಕರ್ಣಿ ಉಪಸ್ಥಿತರಿದ್ದರು. ಸಹನಾ ಕೊಪ್ಪರದ ಪ್ರಾರ್ಥಿಸಿದರು. ದೇವಿ ಬಡಿಗೇರ ನಿರೂಪಿಸಿದರು.