ಕನ್ನಡಪ್ರಭ ವಾರ್ತೆ ಕೋಲಾರಮಾನವನ ಆರೋಗ್ಯವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡವಾಗಿದ್ದಾಗ ಮಾತ್ರ ಸಮಾಜದಲ್ಲಿ ಸ್ವಸ್ಥ ಜೀವನ ನಡೆಸಲು ಸಾಧ್ಯ ಎಂದು ಕಾನೂನು ಮತ್ತು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸುನಿಲ್ ಹೊಸಮನಿ ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತರಬೇತಿ ಕೇಂದ್ರದಲ್ಲಿ ವಿಶ್ವ ಶ್ರವಣ ದಿನಾಚರಣೆ, ಮಾದಕ ಹಾಗೂ ಮಾಧ್ಯಪಾನ ದ್ರವ್ಯಗಳ ದುಷ್ಟಪರಿಣಾಮಗಳ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಇಂದ್ರಿಯಗಳ ರಕ್ಷಣೆಗೆ ಒತ್ತು
ಮಧ್ಯಪಾನ, ಮಾದಕ ವಸ್ತುಗಳ ಸೇವನೆ, ಧೂಮಪಾನ ಮುಂತಾದ ನಶೆಯ ಮತ್ತಿನಿಂದ ಮಾನಸಿಕ ಸೀಮಮಿತ, ಪ್ರಜ್ಞೆ ಕಳೆದು ಕೊಂಡು ದುಷ್ಕೃತ್ಯಗಳನ್ನು ಮಾಡುವುದು ಸಮಾಜಕ್ಕೆ ಮಾರಕವಾಗಿದೆ ಹಾಗಾಗಿ ಎಲ್ಲರೂ ಕೋಲಾರ ಜಿಲ್ಲೆಯನ್ನು ವ್ಯಸನ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಧೃಡವಾದ ಸಂಕಲ್ಪ ಮಾಡ ಬೇಕು ಎಂದು ಕರೆ ನೀಡಿದರು.
ಡಿಎಚ್‌ಓ ಜಿ.ಶ್ರೀನಿವಾಸ್ ಮಾತನಾಡಿ ವಿಶ್ವ ಶ್ರವಣ ದಿನಾಚರಣೆ ಕುರಿತು ನಿರ್ಲಕ್ಷತೆ ಬೇಡ ಈ ಬಗ್ಗೆ ಪ್ರಾರಂಭದಲ್ಲಿ ಚಿಕಿತ್ಸೆ ಪಡೆದು ಗುಣಪಡಿಸಬಹುದು. ಕೆಲವೊಂದು ಹುಟ್ಟಿನಿಂದ ಇರುತ್ತದೆ. ವಂಶ ಪರಂಪರಿಕಾವಾಗಿ ಬರುತ್ತದೆ. ಇನ್ನು ಕೆಲವರಿಗೆ ಅತಿಹೆಚ್ಚು ಮಾತ್ರೆ ಸೇವನೆ, ಶುಗರ್, ಬಿಪಿ ಇದ್ದವರಿಗೆ ಬರುತ್ತದೆ. ಈ ದೋಷ ಹೇಳಿಕೊಳ್ಳಲು ಬಹುತೇಕ ಮಂದಿ ಮುಜುಗರ ಹೊಂದಿ ಹಾಗೆ ರಹಸ್ಯವಾಗಿಟ್ಟುಕೊಂಡು ಕೊನೆಗೆ ಪಶ್ಚಾತಪ ಪಡುವಂತಾಗುತ್ತದೆ ಎಂದು ಹೇಳಿದರು.ಡಾ.ಚಂದನ್, ಡಾ.ಎನ್.ಸಿ.ನಾರಾಯಣಸ್ವಾಮಿ, ಸಾರ್ವಜನಿಕ ಸಂರ್ಪಕ ಇಲಾಖೆಯ ವಾರ್ತಾಧಿಕಾರಿ ಮಂಜೇಶ್ ಇದ್ದರು. ಪ್ರೇಮ ಸ್ವಾಗತಿಸಿ ನಿರೂಪಿಸಿದರು.