ವಸ್ತುನಿಷ್ಠ, ನೈಜ ವರದಿಗಳಿಗೆ ಒತ್ತು ನೀಡಿ

KannadaprabhaNewsNetwork | Published : Nov 24, 2024 1:48 AM

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕು ಅಂಗಗಳಲ್ಲಿ ಒಂದಾಗಿರುವ ಪತ್ರಿಕಾರಂಗದ ಮೇಲೆ ಸಾಮಾಜಿಕ ಜವಾಬ್ದಾರಿ ಬಹಳಷ್ಟಿದೆ. ಹಾಗಾಗಿ ಪತ್ರಿಕೆಗಳಲ್ಲಿ ಬರೆಯುವ ಒಂದೊಂದು ಅಕ್ಷರವೂ ಸಮಾಜದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಇದನ್ನು ಅರಿತು ಪತ್ರಕರ್ತರು ವಸ್ತುನಿಷ್ಠ, ಸತ್ಯ ವರದಿಗಳನ್ನು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕು ಅಂಗಗಳಲ್ಲಿ ಒಂದಾಗಿರುವ ಪತ್ರಿಕಾರಂಗದ ಮೇಲೆ ಸಾಮಾಜಿಕ ಜವಾಬ್ದಾರಿ ಬಹಳಷ್ಟಿದೆ. ಹಾಗಾಗಿ ಪತ್ರಿಕೆಗಳಲ್ಲಿ ಬರೆಯುವ ಒಂದೊಂದು ಅಕ್ಷರವೂ ಸಮಾಜದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಇದನ್ನು ಅರಿತು ಪತ್ರಕರ್ತರು ವಸ್ತುನಿಷ್ಠ, ಸತ್ಯ ವರದಿಗಳನ್ನು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಲಹೆ ನೀಡಿದರು. ನಗರದ ಹೊರಪೇಟೆಯ ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕು ಅಂಗಗಳಾಗಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗದ ಪೈಕಿ ತುಂಬಾ ಸ್ವಾತಂತ್ರ್ಯ ಇರುವ ಅಂಗಗಳೆಂದರೆ ನ್ಯಾಯಾಂಗ ಮತ್ತು ಪತ್ರಿಕಾರಂಗ. ಪತ್ರಿಕಾರಂಗಕ್ಕೆ ಸ್ವಾತಂತ್ರ್ಯದಷ್ಟೇ ಜವಾಬ್ದಾರಿಯೂ ಇದೆ. ಇದನ್ನು ಅರಿತು ಪತ್ರಕರ್ತರು ನೈಜ ಸುದ್ದಿಗಳಿಗೆ ಒತ್ತು ನೀಡಬೇಕು ಎಂದರು.ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಗೆ ಶುಭಕೋರಿ, ಸ್ಥಳೀಯ ಪತ್ರಿಕೆಗಳು ಮತ್ತಷ್ಟು ಜಿಲ್ಲಾ ಮಟ್ಟದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಹ ಸುದ್ದಿಗಳಿಗೆ ಒತ್ತು ನೀಡಬೇಕು ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಪತ್ರಿಕೆಗಳು ಯಾವುದೇ ಜಾತಿ, ಪಕ್ಷ, ಭೇದ ಇಲ್ಲದೆ ಸುದ್ದಿಗಳನ್ನು ಪ್ರಕಟಿಸಬೇಕು. ಸ್ಥಳೀಯ ಪತ್ರಿಕೆಗಳು ಜಿಲ್ಲಾ ಮಟ್ಟದ ಸಮಸ್ಯೆಗಳ ಅನಾವರಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು. ಉದ್ಯಮಿ ಡಾ. ಎಚ್.ಜಿ. ಚಂದ್ರಶೇಖರ್ ಮಾತನಾಡಿ, ಯಾವುದೇ ಉದ್ಯಮ ಬೆಳೆಯಬೇಕಾದರೆ ಬಳಕೆದಾರರ ನಂಬಿಕೆ ಅತಿ ಮುಖ್ಯ. ಹಾಗಾಗಿ ಪತ್ರಿಕೆಗಳು ಸಹ ಓದುಗರ ನಂಬಿಕೆ ಗಳಿಸಿಕೊಳ್ಳಬೇಕು. ಆಗ ಮಾತ್ರ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್‌ಕುಮಾರ್, ಸಿದ್ದಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಸ್. ಪರಮೇಶ್ ಮಾತನಾಡಿ, ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್. ಜಯಕುಮಾರ್ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಕರುಣಾಕರ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು, ಹಿರಿಯ ಸಂಪಾದಕರಾದ ಗದಗದ ಮಂಜುನಾಥ್ ಬಸಪ್ಪ ಅಜ್ಜಿಗೇರಿ, ಮಾಜಿ ಶಾಸಕ ವಿ. ಗಂಗಹನುಮಯ್ಯ, ತೊ.ಗ. ಅಡವೀಶಪ್ಪ, ಟಿ.ಎಸ್. ಗಟ್ಟಿ, ಶಂಕರ್ ಕೋಡ್ಲ, ಕಲ್ಯಾಣರಾವ ಕೇಶವರಾವ ಕುಲಕರ್ಣಿ, ಎಚ್.ಜಿ. ಚಂದ್ರಶೇಖರ್, ಎನ್.ಬಿ. ಪ್ರದೀಪ್‌ಕುಮಾರ್, ಮಂಜುನಾಥ್‌ಗೌಡ, ಎಂ. ರಮೇಶ್, ವೆಂಕಟಾಚಲ, ಸಿ.ಟಿ. ಮೋಹನರಾವ್, ಮಲ್ಲಿಕಾರ್ಜುನ, ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ. ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ, ಬೆಸ್ಕಾಂ ಪ್ರಶಾಂತ್ ಕೂಡ್ಲಗಿ, ತ್ಯಾಗರಾಜ್, ವಾರ್ತಾ ಇಲಾಖೆಯ ರೂಪಕಲಾ, ಸತೀಶ್ ಸುವರ್ಣ, ಸಿ. ರಂಗನಾಥ್, ಕುಚ್ಚಂಗಿ ಪ್ರಸನ್ನ, ಪಿ.ಎಸ್. ಮಲ್ಲಿಕಾರ್ಜುನ ಸ್ವಾಮಿ, ಮಂಜುನಾಥ ಗೌಡ, ಎಂ. ಕಂಬಣ್ಣ, ಸಿ.ಎನ್. ಮಹೇಶ್‌ಕುಮಾರ್, ಸಿ. ಜಯಣ್ಣ, ಮಾರುತಿ ಗಂಗಹನುಮಯ್ಯ, ಬಸವರಾಜು, ಆರ್. ನಾಗರಾಜು, ಸಿದ್ದರಾಜಯ್ಯ, ಎಂ.ಎಸ್. ಅಭಿಷೇಕ್, ಅಕ್ಷಯ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.ಸಮಾರಂಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ. ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ, ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಪ್ರಶಾಂತ್ ಕೂಡ್ಲಗಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್, ವಾರ್ತಾ ಇಲಾಖೆಯ ರೂಪಕಲಾ, ಧರ್ಮಸ್ಥಳ ಸಂಸ್ಥೆಯ ಸತೀಶ್ ಸುವರ್ಣ, ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ಸಿ. ರಂಗನಾಥ್, ಕಾರ್ಯಕಾರಣಿ ಸಮಿತಿ ಸದಸ್ಯ ಕುಚ್ಚಂಗಿ ಪ್ರಸನ್ನ, ಜಿಲ್ಲಾ ಸಂಘದ ಉಪಾಧ್ಯಕ್ಷ ಪಿ.ಎಸ್. ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಗೌಡ, ಎಂ. ಕಂಬಣ್ಣ, ಸಿ.ಎನ್. ಮಹೇಶ್‌ಕುಮಾರ್, ಸಿ. ಜಯಣ್ಣ, ಮಾರುತಿ ಗಂಗಹನುಮಯ್ಯ, ಬಸವರಾಜು, ಆರ್. ನಾಗರಾಜು, ಸಿದ್ದರಾಜಯ್ಯ, ಎಂ.ಎಸ್. ಅಭಿಷೇಕ್, ಅಕ್ಷಯ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.

Share this article