ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಚಿಲಿಂಬಿ

KannadaprabhaNewsNetwork |  
Published : Nov 24, 2024, 01:48 AM IST
ರವಿ ಚಿಲಿಂಬಿ | Kannada Prabha

ಸಾರಾಂಶ

ಕಂಕನಾಡಿ ಗರಡಿ ಅಧ್ಯಕ್ಷ ಕೆ. ಚಿತ್ತರಂಜನ್ ಮತ್ತು ಮಾಜಿ ಅಧ್ಯಕ್ಷ ಜಯಂತ್ ನಡುಬೈಲ್ ಮಾರ್ಗದರ್ಶನದಲ್ಲಿ ಆಯ್ಕೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ರವಿ ಪೂಜಾರಿ ಚಿಲಿಂಬಿ ಆಯ್ಕೆಯಾಗಿದ್ದಾರೆ.ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿಯ ವಾರ್ಷಿಕ ಮಹಾಸಭೆಯು ದಿ. ವಸಂತ ಬಂಗೇರ ವೇದಿಕೆಯಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, ವಿಶ್ವ ಬಿಲ್ಲವರು ಸೇರಿ ನಿರ್ಮಿಸಿದ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನವಾದ ಶ್ರೀಕ್ಷೇತ್ರ ಗೆಜ್ಜೆಗಿರಿಯು ವಿಶ್ವ ಪ್ರಸಿದ್ಧಿಯಾಗಿ ಭಕ್ತರ ಕಷ್ಟ ಕಾರ್ಪಣ್ಯವನ್ನು ನೀಗುವ ಧಾರ್ಮಿಕ ಕೇಂದ್ರವಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಸ್ವಾಗತಿಸಿದರು ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಲೆಕ್ಕಪತ್ರ ಮಂಡಿಸಿದರು.

ಇದೇ ಸಂದರ್ಭ ಕ್ಷೇತ್ರಾಡಳಿತ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪೀತಾಂಬರ ಹೆರಾಜೆ, ಅಧ್ಯಕ್ಷರಾಗಿ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ರಾಜಾರಾಂ ಉಪ್ಪಿನಂಗಡಿ, ಉಪಾಧ್ಯಕ್ಷರಾಗಿ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್ ಗುರುಪುರ, ಕೋಶಾಧಿಕಾರಿ ಮೋಹನ್ ದಾಸ್ ಬಂಗೇರ ವಾಮಂಜೂರು, ಜತೆ ಕಾರ್ಯದರ್ಶಿಗಳಾಗಿ ಜಯವಿಕ್ರಂ ಕಲ್ಲಾಪು, ಹರೀಶ್ ಕೆ. ಪೂಜಾರಿ, ಗಲ್ಫ್ ರಾಷ್ಟ್ರಗಳ ಸಂಚಾಲಕರಾಗಿ ಸತೀಶ್ ಪೂಜಾರಿ ಬೆಳಪು ದುಬೈ, ಮುಂಬೈ ಸಂಚಾಲಕರಾಗಿ ನಿತ್ಯಾನಂದ ಕೋಟ್ಯಾನ್, ಮಹಿಳಾ ಸಂಚಾಲಕರಾಗಿ ಸುಜಿತ ವಿ ಬಂಗೇರ ಬೆಳ್ತಂಗಡಿ, ಹೊರರಾಜ್ಯಗಳ ಸಂಚಾಲಕರಾಗಿ ಚಂದ್ರಹಾಸ್ ಅಮೀನ್ ಗೋವಾ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.

ಕಂಕನಾಡಿ ಗರಡಿ ಅಧ್ಯಕ್ಷ ಕೆ. ಚಿತ್ತರಂಜನ್ ಮತ್ತು ಮಾಜಿ ಅಧ್ಯಕ್ಷ ಜಯಂತ್ ನಡುಬೈಲ್ ಮಾರ್ಗದರ್ಶನದಲ್ಲಿ ಆಯ್ಕೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೇಮಕಾತಿ ಪ್ರಕ್ರಿಯೆ ಇನ್ನು ಸುಗಮ-ಒಳಮೀಸಲು ಬಿಲ್‌ಗೆ ಕೊನೆಗೂ ಗೌರ್ನರ್‌ ಗೆಹಲೋತ್‌ ಅಂಕಿತ
ಡಿಕೆಶಿ ಬಣದ 18 ಶಾಸಕರು, ಸಚಿವರಿಂದ ಡಿನ್ನರ್‌ ಪಾರ್ಟಿ