ಕನಕಪುರ: ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಬೆಳೆ ನಾಶವಾಗಿದೆ. ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಜನರ ಕಷ್ಟ ನೋಡಲು ಬಂದ ಸಚಿವ ಎಚ್.ಸಿ.ಬಾಲಕೃಷ್ಣ ಅವರು ಕನಕಪುರದಲ್ಲಿ ಕಾಟಾಚಾರಕ್ಕೆ ಬಂದು ಬರ ವೀಕ್ಷಣೆ ಮಾಡಿ ಹೋಗಿದ್ದಾರೆ ಎಂದು ರೈತ ಮುಖಂಡ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಆರೋಪಿಸಿದರು
ಕನಕಪುರ: ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಬೆಳೆ ನಾಶವಾಗಿದೆ. ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಜನರ ಕಷ್ಟ ನೋಡಲು ಬಂದ ಸಚಿವ ಎಚ್.ಸಿ.ಬಾಲಕೃಷ್ಣ ಅವರು ಕನಕಪುರದಲ್ಲಿ ಕಾಟಾಚಾರಕ್ಕೆ ಬಂದು ಬರ ವೀಕ್ಷಣೆ ಮಾಡಿ ಹೋಗಿದ್ದಾರೆ ಎಂದು ರೈತ ಮುಖಂಡ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿ 500 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಒಮ್ಮೆ ಕೂಡ ಭೇಟಿ ಮಾಡಲಿಲ್ಲ, ಭೂಸ್ವಾಧೀನಕ್ಕೆ ವಿರೋಧಿಸಿ ರಸ್ತೆ ಬದಿಯಲ್ಲಿ ಕುಳಿತಿರುವ ರೈತರ ನೋವು ಇವರಿಗೆ ಕಾಣಲಿಲ್ಲ. ತಾಲೂಕಿನ ರೈತರ ಕಷ್ಟ ತಿಳಿಯಲು ಬರುವ ಸಚಿವರು ಕೇವಲ 20 ಕಿ.ಮೀ ದೂರದ ಬಿಡದಿಯಲ್ಲಿ 500 ದಿನಗಳಿಂದ ರೈತರು ಹೆಂಡತಿ ಮಕ್ಕಳೊಂದಿಗೆ ಧರಣಿ ಮಾಡುತ್ತಿದ್ದರೂ ಅಲ್ಲಿ ಹೋಗಿ ಅವರ ಸಮಸ್ಯೆ ಕೇಳುವ ಧೈರ್ಯ ಇವರಿಗಿಲ್ಲ. ಸಚಿವರೇ ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ ಅಂತ ಹೇಳಿದ್ದು, ರೈತರ ತೆರಿಗೆ ದುಡ್ಡು ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.ಕಾವೇರಿ ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕದಿಂದ ಪ್ರತಿದಿನ 12,500 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಬೇಕು ಎಂಬ ತೀರ್ಮಾನ ಅವೈಜ್ಞಾನಿಕ. ಸರ್ಕಾರ ಈ ತೀರ್ಮಾನವನ್ನ ತಿರಸ್ಕರಿಸಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ನೀರು ಕೊಡೋಕೆ ಸಾಧ್ಯವಿಲ್ಲ ಅಂತ ನಿರ್ಣಯ ತೆಗೆದುಕೊಳ್ಳಬೇಕು. ಸರ್ಕಾರ ರೈತರ ಹಿತ ಕಾಪಾಡದಿದ್ದರೆ ರಾಜ್ಯಾದ್ಯಂತ ಚಳವಳಿ ಮಾಡುವುದಾಗಿ ಎಚ್ಚರಿಸಿದರು.
ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಇದು ಕೇವಲ ಬಾಲಕೃಷ್ಣ ಅವರ ವೈಫಲ್ಯ ಅಲ್ಲ, ಇದು ಇಡೀ ರಾಜ್ಯಸರ್ಕಾರದ ವೈಫಲ್ಯ. ಕಾಟಾಚಾರದ ಬರ ವೀಕ್ಷಣೆ ನಮಗೆ ಬೇಡ. ರೈತರ ಕಣ್ಣೀರು ಒರೆಸುವ ಕೆಲಸ ಮಾಡಿ. ರಾಜ್ಯದಲ್ಲಿ ಬರ ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಕೆ ಕೆ ಪಿ ಸುದ್ದಿ 03:
ಕನಕಪುರದಲ್ಲಿ ರೈತ ಮುಖಂಡ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.