ಮಾಗಡಿ: ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಜೆಡಿಎಸ್ ನವರು ಪಾದಯಾತ್ರೆ ಮಾಡಲಿಕ್ಕಲ್ಲ, ಜಾಲಿ ಟ್ರಿಪ್ ಮಾಡಲು ಬಂದಿದ್ದರು ಎಂದು ಸಚಿವ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು

ಮಾಗಡಿ: ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಜೆಡಿಎಸ್ ನವರು ಪಾದಯಾತ್ರೆ ಮಾಡಲಿಕ್ಕಲ್ಲ, ಜಾಲಿ ಟ್ರಿಪ್ ಮಾಡಲು ಬಂದಿದ್ದರು ಎಂದು ಸಚಿವ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.ಮಾಗಡಿ ತಾಲೂಕಿನ ಕರಮಂಗಲ ಗ್ರಾಮದಲ್ಲಿ ಬರ ಅಧ್ಯಯನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ನವರು ಸುಮ್ನೆ ಡೌ ಮಾಡೋಕೆ ಬಂದಿದ್ದರು. ಇದು ರೈತರಿಗಾಗಿ ನಡೆದ ಪಾದಯಾತ್ರೆಯಲ್ಲ, ಪಟ್ಟಾಭಿಷೇಕದ ಪಾದಯಾತ್ರೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಪಟ್ಟಾಭಿಷೇಕ ಮಾಡಿ ಹೋಗಿದ್ದಾರೆ ಎಂದು ಟೀಕಿಸಿದರು.

ಪಾದಯಾತ್ರೆ ಮುಗಿಸಿ ನಿಖಿಲ್ ಕುಮಾರಸ್ವಾಮಿ ರಾತ್ರಿ ಎಲ್ಲಿ ಮಲಗಿದ್ದರು. ಕಾರ್ಯಕರ್ತರ ಜೊತೆ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಮಾಡಲಿಲ್ಲ. ಬಿಜೆಪಿಯವರು ಯಾರೂ ಬರಲಿಲ್ಲ. ಕಾಟಾಚಾರಕ್ಕೆ ಅಶೋಕಣ್ಣ ಬಂದು ಹೋದರು. ಜಾಹೀರಾತು ಕೊಟ್ಟಿರುವ ಬಗ್ಗೆ ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ಕುಮಾರಸ್ವಾಮಿ ಅವರೇ ಈ ಯೋಜನೆ ನನ್ನ ಕನಸಿನ ಕೂಸು ಅಂತ ಹೇಳಿದ್ದಾರೆ. ಒಬ್ಬ ರಾಜಕಾರಣಿಗೆ ನಡೆ ನುಡಿ ಒಂದೇ ಇರಬೇಕು. ಬಾಲಿಷ ಹೇಳಿಕೆ ನಿಲ್ಲಿಸಬೇಕು. ಪಾದಯಾತ್ರೆಗೆ ಕಾಸು ಕೊಟ್ಟು ಬಸ್ಸಿನಲ್ಲಿ ಜನರನ್ನು ಕರೆತಂದಿದ್ದರು ಎಂದು ಆರೋಪಿಸಿದರು.

ಟೌನ್ ಶಿಪ್ ಮಾಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ, ಇದ್ದರೆ ಶ್ವೇತ ಪತ್ರ ಹೊರಡಿಸುವಂತೆ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದ್ದಕ್ಕೆ ಪ್ರತಿಕ್ರಿಯಿಸಿ, ಅಲ್ಲಿ ಅನಿತಾ ಕುಮಾರಸ್ವಾಮಿ ಅವರ 31 ಎಕರೆ ಮತ್ತು ನಿಖಿಲ್ ಅವರ 4 ಎಕರೆ ಜಮೀನು ಇದೆ. ಒಪ್ಪಿಗೆ ಕೊಟ್ಟರೆ ಒಂದು ದಿನದಲ್ಲಿ ಅಕೌಂಟ್‌ಗೆ ಹಣ ಕಳುಹಿಸುತ್ತೇವೆ ಎಂದರು.

ಬಾಕ್ಸ್‌....

ಕಾವೇರಿ ವಿವಾದಕ್ಕೆ ಮೇಕಾದಾಟು ಪರಿಹಾರ

ರಾಮನಗರ: ಕಾವೇರಿ ನದಿ ನೀರಿನ ವಿವಾದಕ್ಕೆ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಒಂದೇ ಪರಿಹಾರ. ಕೇಂದ್ರ ಸಚಿವರು ಕರ್ನಾಟಕದ ಬಗ್ಗೆ ಆಸಕ್ತಿ ವಹಿಸಿ ಪರಿಸರ ಇಲಾಖೆ ಅನುಮತಿ ಕೊಡಿಸಲಿ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸಿಡಬ್ಲ್ಯೂಆರ್‌ಸಿ ಆದೇಶ ಕುರಿತು ಈಗಾಗಲೇ ಕೇಂದ್ರ ಸರ್ಕಾರದ ಸಚಿವರು ಡ್ಯಾಂ ಕಟ್ಟಲು ಯಾರ ಅನುಮತಿ ಬೇಡ ಅಂತ ಹೇಳಿದ್ದಾರೆ. ಹಾಗಾಗಿ ಮಾಜಿ ಮುಖ್ಯಮಂತ್ರಿ ಈಗ ಕೇಂದ್ರ ಸಚಿವರಾಗಿದ್ದಾರೆ. ರಾಜ್ಯಕ್ಕೆ ಡ್ಯಾಂ ಕಟ್ಟಲು ಅವಕಾಶ ಮತ್ತು ಅನುದಾನ ಕೊಡಿಸಿದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದ ಅವರು, ಸಿಡಬ್ಲ್ಯೂಆರ್‌ಸಿ ಆದೇಶ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದರು.

ಕೋಟ್..........

ಎಲ್ಲ ಡ್ಯಾಮ್ ಗಳು ತುಂಬುತ್ತಿದ್ದು, ಏನು ತೊಂದರೆ ಆಗುವುದಿಲ್ಲ. ವಾಟಾಳ್ ನಾಗರಾಜ್ ಸಾಹೇಬ್ರಿಗೆ ನಾವು ಕೈಜೋಡಿಸಿ ಮನವಿ ಮಾಡ್ತೀವಿ. ಬಂದ್ ವಾಪಸ್ ತಗೋಬೇಕು. ಸಂದರ್ಭ ಬಂದಾಗ ನಿಮ್ಮ ಜೊತೆ ನಾವು ಕೂಡ ಕೈಜೋಡಿಸುತ್ತೇವೆ. ಕೇಂದ್ರ ಸರ್ಕಾರದಿಂದ ಅನ್ಯಾಯವಾದಾಗ ನಮ್ಮ ಸರ್ಕಾರ ಕೂಡ ಕೈಜೋಡಿಸುತ್ತದೆ.

-ಎಚ್.ಸಿ.ಬಾಲಕೃಷ್ಣ, ಸಚಿವರು

11ಕೆಆರ್ ಎಂಎನ್ 7.ಜೆಪಿಜಿ

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸಚಿವ ಎಚ್.ಸಿ.ಬಾಲಕೃಷ್ಣರವರು ಬರ ಅಧ್ಯಯನ ನಡೆಸಿದರು.