ಗೋಕರ್ಣ: ಮಾದಕ ಪದಾರ್ಥಗಳ ಬಳಕೆಯಿಂದಾಗುವ ದುಷ್ಪರಿಣಾಮ, ತಿಳಿವಳಿಕೆ ಹಾಗೂ ಜಾಗ್ರತೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಪುಣ್ಯ ಕ್ಷೇತ್ರದ ಪಾವಿತ್ರ್ಯ ಕಾಪಾಡಿಕೊಳ್ಳಲು ಶ್ರಮಿಸಬೇಕು ಎಂದು ಅಂಕೋಲಾದ ವಕೀಲ ಹಾಗೂ ಸಮಾಜ ಸೇವಕ ಸುಭಾಷ ನಾರ್ವೇಕರ ಹೇಳಿದರು.
ಲಯನ್ಸ್ ಜಿಲ್ಲಾ ಉಪ ಗವರ್ನರ್ ಗೋವಾದ ಸುದೇಶ ಬೋರ್ಕರ್ ಪ್ರತಿಜ್ಞಾವಿಧಿ ಬೋಧಿಸಿದರು. ಆನಂತರ ಮಾತನಾಡಿದ ಅವರು, ಆಯಾ ವರ್ಷದಲ್ಲಿ ಲಯನ್ಸ್‌ನಿಂದ ನಡೆಯುವ ಸಾಮಾಜಿಕ ಕಾರ್ಯದ ಪರಿಶೀಲನೆ ನಡೆದು, ಅಗತ್ಯವಿರುವ ಕಡೆ ತಲುಪಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ವರ್ಷದ ಚಟುವಟಿಕೆ ನಡೆಯಲಿ ಎಂದು ಆಶಿಸಿದರು.
ಲಯನ್ಸ್ ಸಂಸ್ಥಾಪಕ ಅಧ್ಯಕ್ಷ ಡಾ. ವಿನಾಯಕ ಮಲ್ಲನ್, ಜಿಲ್ಲಾ ಮಾಜಿ ಗವರ್ನರ್ ಪಿ.ಎಂ.ಇ.ಎಫ್. ಗಣಪತಿ ನಾಯಕ ಅವರು ಲಯನ್ಸ್ ಕ್ಲಬ್ ಗೋಕರ್ಣದಲ್ಲಿ ಸಾಮಾಜಿಕ ಕಾರ್ಯಚಟುವಟಿಕೆ ಮೂಲಕ ಸುದೀರ್ಘವಾಗಿ ನಡೆದು ಬಂದ ಹಾದಿ ವಿವರಿಸಿದರು.ಹಿಂದಿನ ಅಧ್ಯಕ್ಷ ರವೀಂದ್ರ ಕೊಡ್ಲೆಕೆರೆ ಅವರು ಒಂದು ವರ್ಷದ ಅವಧಿಯಲ್ಲಿ ನಡೆದ ಕಾರ್ಯಚಟುವಟಿಕೆ ವಿವರಿಸಿದರು. ನೂತನ ಅಧ್ಯಕ್ಷ ನಾಗರಾಜ ಹನೇಹಳ್ಳಿ ಅವರು ಈ ವರ್ಷ ಹಮ್ಮಿಕೊಳ್ಳುವ ಕಾರ್ಯಕ್ರಮ ವಿವರಿಸಿದರು.
ಲಯನ್ಸ್ ವಲಯ ಅಧ್ಯಕ್ಷ ಅನಿಲ ಶೇಟ್, ಲಯನ್ಸ್ ಮಾಜಿ ಪ್ರಾಂತೀಯ ಅಧ್ಯಕ್ಷ ಆರ್.ಎಚ್. ನಾಯಕ, ಲಯನ್ಸ್‌ನ ಬೀರಣ್ಣ ನಾಯಕ, ಗುರುಪ್ರಕಾಶ ಹೆಗಡೆ, ಮಂಜುನಾಥ ಜನ್ನು, ಶಶಾಂಕ ಶೆಟ್ಟಿ, ಡಾ. ಜಗದೀಶ ನಾಯ್ಕ, ಮಹೇಶ ನಾಯಕ, ಪ್ರೇಮಾ ನಾಯಕ, ಅಹಲ್ಯಾ ನಾಯಕ, ಭಾರತಿ ಲಮಾಣಿ, ಜ್ಯೋತಿ ಶೇಟ್, ಎನ್.ಎಸ್. ಲಮಾಣಿ, ಗಣೇಶ ಶೇಟ್, ಶೈಲಜಾ ನಾಯಕ ಉಪಸ್ಥಿತರಿದ್ದರು.ಲಯನ್ಸ್ ನೂತನ ಕಾರ್ಯದರ್ಶಿ ಡಾ. ರಾಮಚಂದ್ರ ಮಲ್ಲನ್ ಪರಿಚಯ ಹಾಗೂ ವಂದನಾರ್ಪಣೆಗೈದರು. ನೂತನ ಖಜಾಂಚಿ ಅಮಿತ್ ಗೋಕರ್ಣ ವರದಿ ವಾಚಿಸಿದರು. ರಾಮಮೂರ್ತಿ ನಾಯಕ, ಸತೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.