ಮಾದರ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ

KannadaprabhaNewsNetwork |  
Published : May 15, 2026, 01:30 AM IST
ಫೋಟೋ: 14 ಹೆಚ್‌ಎಸ್ ಕೆ 1ಹೊಸಕೋಟೆ ತಾಲೂಕು ಮಾದರ ಮಹಾಸಭಾದ ನೂತನ ಅದ್ಯಕ್ಷರಾಗಿ ನೇಮಕಗೊಂಡ ಗುಟ್ಟಳ್ಳಿ ವಿ ನಾಗರಾಜ್‌ರಿಗೆ ಜಿಲ್ಲಾದ್ಯಕ್ಷ ಡಾ.ಎಚ್‌ಎಂ ಸುಬ್ಬರಾಜ್ ಗೌರವಿಸಿ ಸನ್ಮಾನಿಸಿದರು | Kannada Prabha

ಸಾರಾಂಶ

ಹೊಸಕೋಟೆ: ಮಾದಿಗ ಸಮುದಾಯ ಹಿಂದುಳಿದ ಸಮುದಾಯ ಎಂಬ ಹಣೆಪಟ್ಟಿಯಿಂದ ಹೊರಬರಬೇಕಾದರೆ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕೆಂಬ ಉದ್ದೇಶದಿಂದ ಸಂಘಟನೆ ಸ್ಥಾಪಿಸಲಾಗಿದೆ ಎಂದು ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಡಾ ಎಚ್.ಎಂ.ಸುಬ್ಬರಾಜು ತಿಳಿಸಿದರು

ಹೊಸಕೋಟೆ: ಮಾದಿಗ ಸಮುದಾಯ ಹಿಂದುಳಿದ ಸಮುದಾಯ ಎಂಬ ಹಣೆಪಟ್ಟಿಯಿಂದ ಹೊರಬರಬೇಕಾದರೆ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕೆಂಬ ಉದ್ದೇಶದಿಂದ ಸಂಘಟನೆ ಸ್ಥಾಪಿಸಲಾಗಿದೆ ಎಂದು ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಡಾ ಎಚ್.ಎಂ.ಸುಬ್ಬರಾಜು ತಿಳಿಸಿದರು.

ನಗರದ ಖಾಸಗಿ ಸಭಾಂಗಣದಲ್ಲಿ ತಾಲೂಕು ಮಾದರ ಮಹಾಸಭಾದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯದ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಪಕ್ಷಾತೀತವಾಗಿ ಅನೇಕಲ್ ಸಿ. ನಾರಾಯಣಸ್ವಾಮಿ, ಪಾವಗಡ ತಿಮ್ಮರಾಯಪ್ಪ ಸೇರಿ ಸಂಘಟನೆ ಸ್ಥಾಪಿಸಲಾಗಿದ್ದು ಸಮುದಾಯದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅವಕಾಕ ಕಲ್ಪಿಸಿ, ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಬೇಕಿದೆ. ಸಮುದಾಯದ ಮಕ್ಕಳಿಗಾಗಿ ದೇವನಹಳ್ಳಿ ಭಾಗದಲ್ಲಿ 11.5 ಎಕರೆ ಪ್ರದೇಶದಲ್ಲಿ ವಸತಿ ಶಾಲೆ ನಿರ್ಮಿಸಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದರು.

ಜಿಲ್ಲಾ ವಿಶೇಷ ಆಹ್ವಾನಿತ ಸದಸ್ಯ ವಿಜಯ್ ಕುಮಾರ್ ಮಾತನಾಡಿ, ಕೇವಲ ಸಮುದಾಯದ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ನೀಡುವ ಏಕೈಕ ಉದ್ದೇಶದಿಂದ ಈ ಮಾದರ ಮಹಾಸಭೆಯನ್ನು ಹುಟ್ಟುಹಾಕಲಾಗಿದೆ. ಅದರಲ್ಲೂ ಪೌರಕಾರ್ಮಿಕರ ಮಕ್ಕಳಿಗೆ ವಿಶೇಷ ಗಮನ ಹರಿಸಲಾಗುವುದು. ಕಳೆದ 35, 40 ವರ್ಷಗಳ ಹೋರಾಟದ ಫಲವಾಗಿ ನಮ್ಮ ಸಮುದಾಯಕ್ಕೆ ಒಳಮೀಸಲಾತಿ ಭಾಗ್ಯ ಒದಗಿದ್ದು, ಇದರ ಸದ್ಬಳಕೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನೂತನ ಪದಾಧಿಕಾರಿಗಳು: ತಾಲೂಕು ಅಧ್ಯಕ್ಷ ಗುಟ್ಟಳ್ಳಿ ವಿ.ನಾಗರಾಜ, ಗೌರವಾಧ್ಯಕ್ಷ ಡಿ.ಎಂ.ಮುನಿರಾಜ್, ಯಲ್ಲಪ್ಪ ಹಾಗೂ ಎಂ ಗುರಪ್ಪ. ಉಪಾಧ್ಯಕ್ಷರಾಗಿ ಎಸ್.ವಿ.ಶ್ರೀನಿವಾಸ್, ದೇವರಾಜ್, ಕೆ.ಆರ್.ಬಿ.ಶಿವಾನಂದ, ಮಂಜು ಸೂರ್ಯ, ಕಾರ್ಯದರ್ಶಿ ಕೆ. ನರಸಿಂಹಯ್ಯ, ಖಜಾಂಚಿ ಸಿ.ನಾರಾಯಣಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ.ನರಸಿಂಹಯ್ಯ, ರಮೇಶ್, ಗೋಪಾಲ್, ರಮೇಶ್, ಗಣೇಶ್, ಸುಮಿತ್ರ, ಎಂ.ರವಿ. ವಿಶೇಷ ಆಹ್ವಾನಿತ ಸದಸ್ಯರಾಗಿ ಪೂಜಪ್ಪ, ಮೂರ್ತಿ, ಶಿವಾನಂದ್, ರಮೇಶ್, ನರಸಿಂಹಮೂರ್ತಿ. ಕಾನೂನು ಸಲಹೆಗಾರರಾಗಿ ಕೃಷ್ಣಪ್ಪ ಹಾಗೂ ಗಣೇಶ್‌ರನ್ನು ನೇಮಕ ಮಾಡಲಾಯಿತು.

ಫೋಟೋ: 14 ಹೆಚ್‌ಎಸ್ ಕೆ 1

ಹೊಸಕೋಟೆ ತಾಲೂಕು ಮಾದರ ಮಹಾಸಭಾದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಗುಟ್ಟಳ್ಳಿ ವಿ.ನಾಗರಾಜ್‌ರಿಗೆ ಜಿಲ್ಲಾಧ್ಯಕ್ಷ ಡಾ.ಎಚ್‌ಎಂ ಸುಬ್ಬರಾಜು ಗೌರವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಒಳಿತಿಗಾಗಿ ಪರ್ಜನ್ಯ ಹೋಮ: ವಿದ್ವಾನ್ ಪ್ರಸಾದ್
ನಾಳೆ ಜಾಗತಿಕ ಲಿಂಗಾಯುತ ಮಹಾಸಭಾ ಉದ್ಘಾಟನೆ