ಮೌಲ್ಯಯುತ ಶಿಕ್ಷಣಕ್ಕೆಒತ್ತು ನೀಡಿ: ನಂಜಾವಧೂತ ಶ್ರೀ

KannadaprabhaNewsNetwork |  
Published : Jul 21, 2025, 01:30 AM IST
ಫೆÇೀಟೋ 3 : ದಾಬಸ್‍ಪೇಟೆ  ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಹೊಯ್ಸಳ ಹಾಗೂ ವಿದ್ಯಾಸ್ಪೂರ್ತಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ಸ್ವಾಗತ ಸಮಾರಂಭ ಪರಿಚಯ-2025 ಕಾರ್ಯಕ್ರಮವನ್ನು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು | Kannada Prabha

ಸಾರಾಂಶ

ದಾಬಸ್‍ಪೇಟೆ: ಮೌಲ್ಯಯುತ ಶಿಕ್ಷಣ ಹಾಗೂ ನಮ್ಮ ಸಂಸ್ಕøತಿ, ಪರಂಪರೆಯನ್ನು ಶಿಕ್ಷಣ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಲಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ತುಮಕೂರಿನ ಪಟ್ಟನಾಯಕನಹಳ್ಳಿ ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಅಭಿಪ್ರಾಯಪಟ್ಟರು.

ದಾಬಸ್‍ಪೇಟೆ: ಮೌಲ್ಯಯುತ ಶಿಕ್ಷಣ ಹಾಗೂ ನಮ್ಮ ಸಂಸ್ಕøತಿ, ಪರಂಪರೆಯನ್ನು ಶಿಕ್ಷಣ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಲಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ತುಮಕೂರಿನ ಪಟ್ಟನಾಯಕನಹಳ್ಳಿ ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಹೊಯ್ಸಳ ಹಾಗೂ ವಿದ್ಯಾಸ್ಪೂರ್ತಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ಸ್ವಾಗತ ಸಮಾರಂಭ ಪರಿಚಯ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿಸದೇ, ಮೌಲ್ಯಾತ್ಮಕ ಶಿಕ್ಷಣದ ಕಡೆ ಹೆಚ್ಚು ಗಮನಹರಿಸುವಂತೆ ಮಾಡಬೇಕು, ಕಾಲೇಜು ಶಿಕ್ಷಣ ಜೀವನದಲ್ಲಿ ಬದಲಾವಣೆಯ ಘಟ್ಟ, ಈ ಸಂದರ್ಭದಲ್ಲಿ ಕೇವಲ ಪಠ್ಯ ವಿಚಾರ ಕಲಿಯದೇ ದೇಶ, ಧರ್ಮ, ಸಂಸ್ಕೃತಿಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು, ಕೇವಲ ಹಣವೇ ಎಲ್ಲದಕ್ಕೂ ಮಾನದಂಡವಾಗಬಾರದು ಎಂದರು .

ಬಿಗ್ ಬಾಸ್ ಖ್ಯಾತಿಯ ಹಿನ್ನಲೆ ಧ್ವನಿ ಕಲಾವಿದ, ಬಡೆಕ್ಕಿಲ ಪ್ರದೀಪ್ ಮಾತನಾಡಿ, ಶ್ರೀಗಳು ಬದುಕುವ ಕಲೆಯನ್ನು ಹೇಳಿಕೊಟ್ಟರು, ಸೋಲೇ ಗೆಲುವಿನ ಮೆಟ್ಟಿಲು, ಗ್ರಾಮೀಣ ಪ್ರದೇಶದಲ್ಲಿ ಸುಸಂಸ್ಕೃತ ಸಮಾಜವಿರುತ್ತದೆ, ಕಾಲೇಜು ವಿದ್ಯಾರ್ಥಿಗಳು ತಮ್ಮ ಪೆÇೀಷಕರನ್ನು ಸದಾ ಸ್ಮರಿಸಿಕೊಂಡ ತನ್ನ ಗುರಿ ಮತ್ತು ಶಿಕ್ಷಣದ ಕಡೆಗೆ ಮನಸ್ಸು ಮಾಡಬೇಕು ಎಂದರು.

ಶ್ರೀ ಶಿರಡಿ ಸಾಯಿ ಶಿಕ್ಷಣ ದತ್ತಿ ಸಂಸ್ಥೆಯ ಅಧ್ಯಕ್ಷ ಡಾ.ಟಿ.ರಾಮಕೃಷ್ಣಪ್ಪ ಮಾತನಾಡಿ ನಮ್ಮ ಸಂಸ್ಥೆಗಳು ನೈತಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಮನೆ ಮಾತಾಗಿದೆ, ಸುಮಾರು ನೂರು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆ ಇದೀಗ ಎರಡು ಸಾವಿರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡುತ್ತಿದೆ ಎಂದರು

ಈ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿ ಶಿಕ್ಷಣ ದತ್ತಿ ಸಂಸ್ಥೆಯ ಅಧ್ಯಕ್ಷ ಡಾ.ಟಿ.ರಾಮಕೃಷ್ಣಪ್ಪ ವಿದ್ಯಾಸ್ಪೂರ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಉಮಾಶಂಕರ್, ಹೊಯ್ಸಳ ಕಾಲೇಜಿನ ಖಜಾಂಚಿ ಬಿ.ವಿ.ಸುರೇಶ್, ಕಾರ್ಯದರ್ಶಿ ಜ್ಯೋತಿ, ಎಸ್, ಟ್ರಸ್ಟಿ ಅನ್ನಪೂರ್ಣ,ಟಿ, ವಿದ್ಯಾಸ್ಪೂರ್ತಿ ಶಾಲೆಯ ಸಿಇಒ ವರುಣ್ ಕುಮಾರ್, ಆಡಳಿತಾಧಿಕಾರಿ ರಾಮಚಂದ್ರ.ಟಿ. ಕಾಲೇಜಿನ ಪ್ರಾಂಶುಪಾಲರುಗಳಾದ ಗೋಪಾಲ್.ಹೆಚ್.ಆರ್, ಕೆ.ವಿಗೌರಿಶಂಕರ್ ಹಾಗೂ ಜಾಲಪ್ಪ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

ಫೆÇೀಟೋ 3 :

ದಾಬಸ್‍ಪೇಟೆಯಲ್ಲಿ ಹೊಯ್ಸಳ ಹಾಗೂ ವಿದ್ಯಾಸ್ಪೂರ್ತಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ಸ್ವಾಗತ ಸಮಾರಂಭ ಪರಿಚಯ-2025 ಕಾರ್ಯಕ್ರಮವನ್ನು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!