ಅರಕಲಗೂಡಲ್ಲಿ ನೌಕರರ ದಸರಾ

KannadaprabhaNewsNetwork |  
Published : Oct 06, 2024, 01:23 AM IST
5ಎಚ್ಎಸ್ಎನ್7 : ಅರಕಲಗೂಡು ಪಟ್ಟಣದ ಕೊತ್ತಲು ಗಣಪತಿ ಉದ್ಯಾನದಲ್ಲಿ ಶನಿವಾರ ನಡೆದ ನೌಕರರ ದಸರಾ ಕಾರ್ಯಕ್ರಮವನ್ನು ಶಾಸಕ ಎ. ಮಂಜು ಉದ್ಘಾಟಿಸಿದರು. | Kannada Prabha

ಸಾರಾಂಶ

ಕೊತ್ತಲು ಗಣಪತಿ ಉದ್ಯಾನದಲ್ಲಿ ಶನಿವಾರ ನಡೆದ ನೌಕರರ ದಸರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಸರಾ ಉತ್ಸವದ 7 ದಿನಗಳು ವಿವಿಧ ಇಲಾಖೆಗಳ ಮೂಲಕ ವಿವಿಧ ದಸರಾವನ್ನು ವಿಭಿನ್ನ ರೀತಿಯಲ್ಲಿ ನಡೆಸಲಾಗುತ್ತಿದೆ. ನೌಕರರಿಗಾಗಿಯೇ ದಸರಾ ಆಯೋಜಿಸಿದ್ದರೂ ಸರ್ಕಾರಿ ನೌಕರರು ಪಾಲ್ಗೊಳ್ಳದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿ, ಈ ಕುರಿತು ನೌಕರರ ಸಂಘ ಎಚ್ಚರ ವಹಿಸಬೇಕು ಎಂದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ. ಕೃಷ್ಣೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

18 ಕೋಮಿನ ಜನರು ಒಟ್ಟಾಗಿ ಆಚರಿಸುತ್ತಿರುವ ದಸರಾ ಉತ್ಸವ ಸೌಹಾರ್ದತೆಯ ಸಂಕೇತವಾಗಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.

ಪಟ್ಟಣದ ಕೊತ್ತಲು ಗಣಪತಿ ಉದ್ಯಾನದಲ್ಲಿ ಶನಿವಾರ ನಡೆದ ನೌಕರರ ದಸರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಸರಾ ಉತ್ಸವದ 7 ದಿನಗಳು ವಿವಿಧ ಇಲಾಖೆಗಳ ಮೂಲಕ ವಿವಿಧ ದಸರಾವನ್ನು ವಿಭಿನ್ನ ರೀತಿಯಲ್ಲಿ ನಡೆಸಲಾಗುತ್ತಿದೆ. ನೌಕರರಿಗಾಗಿಯೇ ದಸರಾ ಆಯೋಜಿಸಿದ್ದರೂ ಸರ್ಕಾರಿ ನೌಕರರು ಪಾಲ್ಗೊಳ್ಳದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿ, ಈ ಕುರಿತು ನೌಕರರ ಸಂಘ ಎಚ್ಚರ ವಹಿಸಬೇಕು ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ. ಕೃಷ್ಣೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರ ಮೇಲೆ ಹೆಚ್ಚುತ್ತಿರುವ ಒತ್ತಡ ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ಸರ್ಕಾರಿ ನೌಕರರ ನೇಮಕಾತಿಯಾಗಿಲ್ಲ. ಇರುವ ನೌಕರರು ಎಲ್ಲ ಕೆಲಸಗಳನ್ನು ನಿಭಾಯಿಸ ಬೇಕಿರುವ ಕಾರಣ ಒತ್ತಡ ಹೆಚ್ಚಾಗುತ್ತಿದೆ. ಈ ಕುರಿತು ಸರ್ಕಾರ ಗಮನ ಹರಿಸಬೇಕು ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಪಿ.ಶಿವಶಂಕರ್‌, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಶಿವಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಸಮಾಜ ಸೇವಕ ಗಾಂದಿನಗರ ದಿವಾಕರ್, ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ಎಸ್. ವೈ. ರವಿಕುಮಾರ್ ಮಾತನಾಡಿದರು.

ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತಹಶೀಲ್ದಾರ್‌ ಕೆ.ಸಿ. ಸೌಮ್ಯ, ಪಪಂ ಉಪಾಧ್ಯಕ್ಷ ಸುಬಾನ್ ಷರೀಫ್‌, ಸದಸ್ಯ ನಿಖಿಲ್ ಕುಮಾರ್, ದಸರಾ ಸಮಿತಿ ಸದಸ್ಯರಾದ ಕಿಶೋರ್, ಗೋಪಾಲ್, ಮುತಾಹಿರ್ ಪಾಶ, ವಲಯ ಅರಣ್ಯಾಧಿಕಾರಿಗಳಾದ ಯಶ್ಮ ಮಾಚಮ್ಮ, ಶಿವಾನಂದ್, ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಎಸ್. ಕೆ. ತಾರಾನಾಥ್, ಉಪಾಧ್ಯಕ್ಷ ಜಿ.ಎಚ್. ಪ್ರಕಾಶ್, ಕಾರ್ಯದರ್ಶಿ ಚಂದ್ರೇಗೌಡ, ರಾಜ್ಯ ಪರಿಷತ್ ಸದಸ್ಯ ಭರತೇಶ್, ಮಾಜಿ ಅಧ್ಯಕ್ಷ ಬಿ.ಎನ್. ಮಹೇಶ್ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ