ನೌಕರರು ಕರ್ತವ್ಯದಲ್ಲಿ ಜನರ ವಿಶ್ವಾಸ ಗಳಿಸಿ

KannadaprabhaNewsNetwork |  
Published : Sep 14, 2025, 01:06 AM IST
13ಐಎನ್‌ಡಿ2, ಇಂಡಿ ಪಟ್ಟಣದಲ್ಲಿ ಸರ್ಕಾರಿ ನೌಕರರ ಸಂಘದ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಸಂವಿಧಾನದ ಮೂಲ ಆಶಯದಂತೆ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ, ಪತ್ರಿಕಾರಂಗ ತಮ್ಮ ಕಾರ್ಯವನ್ನು ಪ್ರಾಮಾಣಿಕತೆ, ಶ್ರದ್ದೆಯಿಂದ ನಿರ್ವಹಿಸಿದರೆ ಪ್ರಪಂಚದಲ್ಲಿ ದೇಶ ಉನ್ನತ ಸ್ಥಾನದಲ್ಲಿ ಸಾಗುತ್ತದೆ. ಯಾವುದಾದರೂ ಒಂದು ಅಂಗ ವಿಫಲವಾದರೆ ದೇಶ, ಸಮುದಾಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನೌಕರರು ಜನರ ವಿಶ್ವಾಸವನ್ನು ಗಳಿಸಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಸಂವಿಧಾನದ ಮೂಲ ಆಶಯದಂತೆ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ, ಪತ್ರಿಕಾರಂಗ ತಮ್ಮ ಕಾರ್ಯವನ್ನು ಪ್ರಾಮಾಣಿಕತೆ, ಶ್ರದ್ದೆಯಿಂದ ನಿರ್ವಹಿಸಿದರೆ ಪ್ರಪಂಚದಲ್ಲಿ ದೇಶ ಉನ್ನತ ಸ್ಥಾನದಲ್ಲಿ ಸಾಗುತ್ತದೆ. ಯಾವುದಾದರೂ ಒಂದು ಅಂಗ ವಿಫಲವಾದರೆ ದೇಶ, ಸಮುದಾಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನೌಕರರು ಜನರ ವಿಶ್ವಾಸವನ್ನು ಗಳಿಸಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಗುರುಭವನದಲ್ಲಿ ಇಂಡಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಅನುಪಮಾ ಸೇವಾ ಪ್ರಶಸ್ತಿ ಪ್ರದಾನ ಮತ್ತು ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರವು ಬಡವರಿಗೆ ಮತ್ತು ಜನಸಾಮಾನ್ಯರಿಗೆ ರೂಪಿಸುವ ಯೋಜನೆಗಳು ಜನ ಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಸರ್ಕಾರಿ ನೌಕರರ ಮೇಲಿದೆ. ಜನರ ಮನಸ್ಸನ್ನು ಗೆದ್ದು ಸರ್ಕಾರಿ ನೌಕರರು ಕೆಲಸ ಮಾಡುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.ಕರ್ತವ್ಯ ಪ್ರಜ್ಞೆಯಿಟ್ಟುಕೊಂಡು ಮನುಷ್ಯ ಧರ್ಮದಿಂದ ಕೆಲಸ ಮಾಡಬೇಕಾಗಿದೆ. ಯಾರಿಗೂ ಶೋಷಣೆ ಮಾಡದೇ ಪಾರದರ್ಶಕತೆಯಿಂದ ಕೆಲಸ ಮಾಡಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು. ಕಾಂಗ್ರೆಸ್‌ ಸರ್ಕಾರ ನೀಡಿರುವ ರಾಜ್ಯದ ಜನರಿಗೆ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ರಾಜ್ಯ ಸರ್ಕಾರಿ ನೌಕರರ ಮೇಲಿದೆ. ಸರ್ಕಾರಿ ನೌಕರರ ಒಪಿಎಸ್ ಕುರಿತು ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮತ್ತು ವಿಧಾನಸಭೆಯಲ್ಲಿ ಗಮನ ಸೆಳೆಯುವುದಾಗಿ ಅವರು ಭರವಸೆ ನೀಡಿದರು. ರಾಜ್ಯ ಸರಕಾರಿ ನೌಕರರಿಗೆ 6 ನೇ ಮತ್ತು 7 ನೇ ವೇತನ ಆಯೋಗ ಕಾಂಗ್ರೆಸ್ ಸರ್ಕಾರ ನೀಡಿದೆ. ಹೀಗಾಗಿ ಸರ್ಕಾರಿ ನೌಕರರು ಜನರ ಮನಸ್ಸು ಗೆಲ್ಲುವುದಕ್ಕಾಗಿ ಶ್ರದ್ದೆಯಿಂದ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ಮಾತನಾಡಿ, ಸರಕಾರಿ ನೌಕರರಿಗೆ ಒಪಿಎಸ್‌ ಜಾರಿ ಮಾಡಲು ಸರಕಾರದ ಗಮನ ಸೆಳೆಯಲು ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಮನವಿ ಮಾಡಿಕೊಂಡರು.

ತಾಲೂಕಾ ಘಟಕದ ಸಂಘದ ಅಧ್ಯಕ್ಷ ಬಸವರಾಜ ರಾವೂರ ಮಾತನಾಡಿ, ಸರಕಾರಿ ನೌಕರರ ಸಂಘದ ಖಾತೆಯಲ್ಲಿ ಒಟ್ಟು ₹ 6 ಲಕ್ಷ ನಿವ್ವಳ ಲಾಭ ಇದ್ದು, ₹ 1.66 ಲಕ್ಷ ಬ್ಯಾಂಕಿನಲ್ಲಿ ಉಳಿದಿದೆ. ಅದಲ್ಲದೆ ಸೇವೆ ಮಾಡುವ ಕೈಗಳು ಶ್ರೇಷ್ಠ ಎಂಬ ಭಾವನೆಯಲ್ಲಿ ನೌಕರರು ಕೆಲಸ ಮಾಡುತ್ತಿದ್ದು, ತಾಲೂಕಿನ ಪ್ರಗತಿಗೆ ಪೂರಕ ಕೆಲಸ ಮಾಡುವ ಜವಾಬ್ದಾರಿ ಸರಕಾರಿ ನೌಕರರ ಮೇಲಿದೆ ಎಂದು ತಿಳಿಸಿದರು.ಲಕ್ಷ್ಮೀಕಾಂತ ಮೇತ್ರಿ, ಆರ್.ಪಿ.ಗಿಣ್ಣಿ, ಧನರಾಜ ಮುಜಗೊಂಡ ಮಾತನಾಡಿದರು. ನೌಕರರಾದ ಮಹಾದೇವಪ್ಪ ಏವೂರ, ಗೀತಾ ಗುತ್ತರಗಿಮಠ, ಉಮೇಶ ಲಮಾಣಿ, ಸಿ.ಪಿ.ಚವ್ಹಾಣ, ಎಸ್.ವಿ.ರಾಗಣ್ಣನವರ, ಎಸ್.ಆರ್.ನಡಗಡ್ಡಿ, ಎಂ.ಎಂ.ಸಂಜವಾಡ, ಶೃತಿ ಖೇಡಗಿ, ಎಸ್.ಎಸ್.ಮೋದಿ, ಡಬ್ಲೂ ಐ ಇಂಡಿಕರ ಮತ್ತಿತರನ್ನು ಅನುಪಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯ ಮೇಲೆ ತಾಪಂ ಇಒ ಬಿ.ಎಚ್.ಕನ್ನೂರ, ಶಿವರಾಜ ಬಿರಾದಾರ, ಶಿವಾನಂದ ಮಂಗಾನವರ, ವಿಜಯಕುಮಾರ ಕ್ಷತ್ರಿ ಮತ್ತಿತರಿದ್ದರು. ನಂತರ ಸರಕಾರಿ ನೌಕರರಿಗೆ ಸ್ಪಂದನಾ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ