ಸೇವಾ ನಿವೃತ್ತಿ ಬಳಿಕವೂ ನೌಕರರ ಸಮಸ್ಯೆಗೆ ಸ್ಪಂದಿಸಬೇಕು

KannadaprabhaNewsNetwork |  
Published : Oct 10, 2026, 02:00 AM IST
ಹಿರೇಕೆರೂರ ಪಟ್ಟಣದ ಗುರುಭವನದಲ್ಲಿ ಗುರುವಾರ ತಾಲೂಕಿನ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಜಿ. ಸಿರಿಗೌಡರ ಮಾತನಾಡಿದರು, | Kannada Prabha

ಸಾರಾಂಶ

ಹಿರೇಕೆರೂರ ಪಟ್ಟಣದ ಗುರುಭವನದಲ್ಲಿ ಗುರುವಾರ ತಾಲೂಕಿನ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಜಿ. ಸಿರಿಗೌಡರ ಮಾತನಾಡಿದರು,

ಹಿರೇಕೆರೂರು: ನಿವೃತ್ತ ನೌಕರರು ತಮ್ಮ ಸೇವಾವಧಿಯಲ್ಲಿ ಸರ್ಕಾರ ಹಾಗೂ ಸಮಾಜದ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ. ನಿವೃತ್ತಿಯ ನಂತರವೂ ಸಂಘಟನೆಯ ಮೂಲಕ ನಿವೃತ್ತ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅವರ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಜಿ. ಸಿರಿಗೌಡರ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕಿನ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದ ಕಾರ್ಯದರ್ಶಿ ಜೆ.ಬಿ. ಮರಿಗೌಡರ ಮಾತನಾಡಿ, ನಿವೃತ್ತ ನೌಕರರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳು, ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಂಘ ನಿರಂತರವಾಗಿ ಧ್ವನಿ ಎತ್ತುತ್ತಿದೆ. ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಸಂಘದ ವಾರ್ಷಿಕ ಚಟುವಟಿಕೆಗಳು, ಸದಸ್ಯರ ಸಮಸ್ಯೆಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಚರ್ಚೆ ನಡೆಯಿತು.

70 ವರ್ಷ ಪೂರೈಸಿದ ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ನಿವೃತ್ತ ನೌಕರರ ಸೇವೆಯನ್ನು ಸ್ಮರಿಸಿ, ಅವರ ಅನುಭವ ಹಾಗೂ ಮಾರ್ಗದರ್ಶನ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಗಣ್ಯರು ಶುಭ ಹಾರೈಸಿದರು,

ಈ ವೇಳೆ ಸಿಇಎಸ್ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್ ವೀರಭದ್ರಯ್ಯ, ಜಿ.ಎಚ್. ಅಗಸಿಬಾಗಿಲು, ಎಂ.ಸಿ. ಮುದಿಗೌಡ್ರ, ಎಚ್.ಬಿ. ಹನುಮಗೌಡ್ರ, ಎನ್.ಎಸ್. ಚಿಕ್ಕನಗೌಡ್ರ,ಆರ್.ಎಫ್. ಹುಲ್ಲತ್ತಿ, ವಿ.ಎಸ್. ಪುರದ,ಪಿ.ಬಿ. ನಿಂಗನಗೌಡ್ರ, ಆರ್.ಬಿ. ಹಿರೇಕೆರೂರ, ಆರ್ ಎಲ್. ತೆಂಬದ, ಎಂ.ಬಿ. ಸಾವಜ್ಜಿಯವರ, ಆರ್.ಎಚ್. ಹುಲ್ಲತ್ತಿ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನಿವೃತ್ತ ಸರ್ಕಾರಿ ನೌಕರರು ಉಪಸ್ಥಿತರಿದ್ದರು ಇದ್ದರು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟೆಂಡರ್ ನೆಪದಲ್ಲಿ ಮೀನುಗಾರರಿಗೆ ಎನ್‌ಒಸಿಗೆ ತೊಂದರೆ: ಹೋರಾಟದ ಎಚ್ಚರಿಕೆ
ಸಂಕನೂರ ಪರ ರೂಪಾಲಿ ನಾಯ್ಕ ಮತಯಾಚನೆ