ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳಗಳು ವರದಾನ: ಶಿವಯ್ಯ ಮುಪ್ಪಯ್ಯನಮಠ

KannadaprabhaNewsNetwork |  
Published : Aug 04, 2024, 01:21 AM IST
3ಕೆಪಿಎಸ್ಎನ್ಡಿ2:  | Kannada Prabha

ಸಾರಾಂಶ

Employment Fairs for Unemployed Youth: Shivayya Muppayyana Math

-ಸಿಂಧನೂರಿನ ಸರ್ಕಾರಿ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮ

------

ಕನ್ನಡಪ್ರಭ ವಾರ್ತೆ ಸಿಂಧನೂರು: ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳಗಳು ವರದಾನವಾಗಿವೆ ಎಂದು ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಶಿವಯ್ಯ ಮುಪ್ಪಯ್ಯನಮಠ ಹೇಳಿದರು.

ಅವರು ಸರ್ಕಾರಿ ಮಹಾವಿದ್ಯಾಲಯದಲ್ಲಿ ಎಂಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ನಿರುದ್ಯೋಗಿ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಸ್ವಯಂ ಉದ್ಯೋಗ ಮಾಡಲು ಬಂಡವಾಳ ಕೊರತೆ ಕಾಡುತ್ತಿದೆ. ಸರ್ಕಾರಿ ಉದ್ಯೋಗಗಳು ಗಗನ ಕುಸುಮವಾಗಿವೆ. ಆದ್ದರಿಂದ, ಇಂತಹ ಉದ್ಯೋಗ ಮೇಳಗಳು ಪದವೀಧರರಿಗೆ ಸಹಾಯಕವಾಗುತ್ತವೆ ಎಂದರು.

438 ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು.

ಪ್ರತಿ ಸರ್ಕಾರಿ ಕಾಲೇಜುಗಳಲ್ಲಿ ಇಂತಹ ಮೇಳಗಳನ್ನು ಆಯೋಜಿಸುವುದರಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ಪದವಿಯ ಕೊನೆ ಹಂತದಲ್ಲಿರುವಾಗಲೇ ದೊರೆಯುತ್ತವೆ. ದೊಡ್ಡ ಕಂಪನಿಗಳಲ್ಲಿ ಉದ್ಯೋಗ ದೊರೆತರೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯ ರಾಜೇಂದ್ರಕುಮಾರ್ ನಹಾರ್ ಹೇಳಿದರು.

ಇಂಜಿನಿಯರ್ಸ್ ಕಂಪನಿಯ ಶ್ರೀನಿವಾಸ್, ಮ್ಯಾನ್ ಪವರ್ ಸಲ್ಯೂಷನ್‌ ಶಿವಕುಮಾರ್ ಮತ್ತು ವಿವಿಧ ಕಂಪನಿಗಳ ಎಚ್.ಆರ್.ಅಧಿಕಾರಿಗಳು ಭಾಗವಹಿಸಿದ್ದರು. ಸಂಚಾಲಕ ಬಸವರಾಜ ತಡಕಲ್, ಸಿಬ್ಬಂದಿ ಕಾರ್ಯದರ್ಶಿ ಡಾ.ಸಂಗನಗೌಡ, ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯರಾದ ಬಸವರಾಜ್, ಅಮರೇಶ್ ಮಾಡಸಿರವಾರ ಇದ್ದರು. ಉಪನ್ಯಾಸಕ ವೈಜನಾಥ್ ಸಗರಮಠ ನಿರೂಪಿಸಿದರು.

---------

ಫೋಟೊ:3ಕೆಪಿಎಸ್ಎನ್ಡಿ2: ಸಿಂಧನೂರಿನ ಸರ್ಕಾರಿ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳವನ್ನು ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಶಿವಯ್ಯ ಮುಪ್ಪಯ್ಯನಮಠ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಊದಿನಕಡ್ಡಿ ವಾಸನೆಗೆ ಹಣ ಕಳೆದುಕೊಂಡ ಜನ
ಸಾಹಿತ್ಯ - ಸಾಂಸ್ಕೃತಿಕ ಚಟುವಟಿಕೆಗಳಿಂದ ಉತ್ತಮ ಸಮಾಜ ನಿರ್ಮಾಣ: ಹನುಮಂತಯ್ಯ