ಏ.1ರಿಂದ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭ

KannadaprabhaNewsNetwork | Published : Mar 30, 2025 3:04 AM

ಸಾರಾಂಶ

ಬರಗಾಲವಿದೆ ಎಂದು ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ಕೆಲಸ ಸಿಗದು ಎಂಬ ಭಯಬೇಡ, ಏ.1ರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಕೆಲಸ ಆರಂಭವಾಗುತ್ತಿದ್ದು, ಯೋಜನೆ ಅಡಿ ಅನೇಕ ಕಾಮಗಾರಿ ಕೈಗೊಳ್ಳುವ ಅಗಶ್ಯವಿದೆ. ಗ್ರಾಮೀಣ ಪ್ರದೇಶಗಳ ಕಡು ಬಡವರಿಗೂ ಯೋಜನೇಯ ಸದುಪಯೋಗ ದೊರಕುವಂತಾಗಬೇಕೆಂದು ತಾಪಂ ಇಒ ಮಾಣಿರಾವ್‌ ಪಾಟೀಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ಬರಗಾಲವಿದೆ ಎಂದು ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ಕೆಲಸ ಸಿಗದು ಎಂಬ ಭಯಬೇಡ, ಏ.1ರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಕೆಲಸ ಆರಂಭವಾಗುತ್ತಿದ್ದು, ಯೋಜನೆ ಅಡಿ ಅನೇಕ ಕಾಮಗಾರಿ ಕೈಗೊಳ್ಳುವ ಅಗಶ್ಯವಿದೆ. ಗ್ರಾಮೀಣ ಪ್ರದೇಶಗಳ ಕಡು ಬಡವರಿಗೂ ಯೋಜನೇಯ ಸದುಪಯೋಗ ದೊರಕುವಂತಾಗಬೇಕೆಂದು ತಾಪಂ ಇಒ ಮಾಣಿರಾವ್‌ ಪಾಟೀಲ್‌ ಹೇಳಿದರು.ಖಾತ್ರಿ ಕೆಲಸ ಕೊಡುತ್ತಿರುವುದು ಗ್ರಾಮೀಣ ಪ್ರದೇಶದ ಜನರ ಗುಳೇ ತಪ್ಪಿಸುವ ಕೆಲಸವಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸಿದೆ. ಯೋಜನೆ ಅಡಿ ವಾರ್ಷಿಕವಾಗಿ 100 ದಿನಗಳವರೆಗೆ ಗ್ರಾಮಿಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗುವಂತಾಗಬೇಕು. ಆ ಮೂಲಕ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ನರೇಗಾ ವರದಾನವಾಗಲಿದೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯತ್‌ಗಳ ಕಾಯಕ ಬಂಧುಗಳು ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ತಾಲೂಕು ಪಂಚಾಯತ್‌ ಸಹಾಯಕ ನಿರ್ದೇಶಕ ಹಣಮಮತರಾವ್‌ ಕೌಟಗೆ ಮಾತನಾಡಿ, 2025-26ನೇ ಸಾಲಿನ ನರೇಗಾ ಯೋಜನೆಯಲ್ಲಿ ಏ.1 ಸಮುದಾಯ ಕಾಮಗಾರಿ ಪ್ರಾರಂಭವಾಗುತ್ತಿದೆ. ಕೂಲಿ ಕಾರರಿಗೆ ದಿನಕ್ಕೆ 349 ಗರಿಷ್ಟ ಕೂಲಿ ಪಾವತಿಸಲಾಗುತ್ತದೆ. ಕಾಯಕ ಬಂಧುಗಳು ಉದ್ಯೋಗ ಚೀಟಿಗಳನ್ನು ಪರಿಶೀಲಿಸಿ ನಮೂನೆ 6 ತುಂಬಿಕೊಡಬೇಕು. ಎನ್ಎಂಎಂಎಸ್‌ ಹಾಜರಿಯನ್ನು ಕಡ್ಡಾಯಗೊಳಿಸುವ ಜೊತೆಗೆ ಶೇ. 50ರಷ್ಟು ಮಹಿಳೆಯರಿಗೆ ಎನ್‌ಎಂಆರ್‌ ನೀಡಿ ಕೆಲಸಕ್ಕೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರಿಗೆ ಅಳತೆ ಪ್ರಮಾಣ ನೀಡಲಾಗುತ್ತದೆ. ಎನ್‌ಎಂಎಂಎಸ್‌ ತಂತ್ರಾಂಶವಿಲ್ಲದೆ ಯಾವುದೆ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲ. ಎರಡೂ ಬಾರಿ ಹಾಜರಿ ಕಡ್ಡಾಯ ಫಲಾನುಭವಿಗಳಿಗೆ ಆಧಾರ್‌ ಲಿಂಕ್‌ ಹೊಂದಿರುವ ಖಾತೆಗೆ ನೇರವಾಗಿ ಕೂಲಿ ಹಣ ಪಾವತಿಯಾಗುತ್ತದೆ ಎಂದು ಮಾಹಿತಿ ನೀಡಿದರು.

Share this article