ಬಡವರ ಕಲ್ಯಾಣಕ್ಕಾಗಿ ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿ

KannadaprabhaNewsNetwork |  
Published : Apr 20, 2024, 01:02 AM IST
ಫೋಟೋ 19ಪಿವಿಡಿ1ತಾಲೂಕು ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನಿತರಾದ ಬ‍ಳಿಕ ಗೃಹ ಸಚಿವ ಡಾ.ಪರಮೇಶ್ವರ್‌ ಮಾತನಾಡಿದರು.ಫೋಟೋ 19ಪಿವಿಡಿ2ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕೈ ಅಭ್ಯರ್ಥಿ ಚಂದ್ರಪ್ಪರನ್ನು ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌   | Kannada Prabha

ಸಾರಾಂಶ

ರೈತ ಹಾಗೂ ಬಡವರ ಕಲ್ಯಾಣಕ್ಕಾಗಿ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕು. ಅದಕ್ಕಾಗಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ ರೈತ ಹಾಗೂ ಬಡವರ ಕಲ್ಯಾಣಕ್ಕಾಗಿ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕು. ಅದಕ್ಕಾಗಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಕರೆ ನೀಡಿದರು.

ಅವರು ಶುಕ್ರವಾರ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಗೆಲುವಿನ ಮೇಲೆ ನಿಮ್ಮ ಭವಿಷ್ಯ ನಿಂತಿದೆ. ಬಿಜೆಪಿ ಅವರು 400 ಅಲ್ಲ 200 ಸೀಟ್ ಕೂಡಾ ತಲುಪುವುದಿಲ್ಲ. ದೇಶದಲ್ಲಿ ಮತದಾರರ ಮನಸ್ಥಿತಿ ಬದಲಾಗಿದೆ. ಪಾನಕ, ಹೆಸರು ಬೇಳೆ ಮುಸ್ಲಿಂ ಏರಿಯಾದಲ್ಲಿ ನಾವು ಹಂಚಿದೆವು. ಆದರೆ ಬಿಜೆಪಿಯವರು ಪಾನಕ ಹೆಸರು ಬೆಳೆ ಹಂಚುವುದಾಗಲಿ ಕೇಸರಿ ಶಾಲು ಹಾಕಿಕೊಂಡು ಓಡಾಡದಾ ಗಲಿ ಎಲ್ಲಿಯೂ ಕಂಡು ಬರಲಿಲ್ಲ. ಇದರಿಂದ ತಿಳಿಯುತ್ತದೆ ದೇಶದಲ್ಲಿ ಜನರ ಮನಸ್ಥಿತಿ ಬದಲಾಗಿದೆ.

ಈ ಬಾರಿ ದೇಶದಲ್ಲಿ ಆಶ್ಚರ್ಯವಾದ ಫಲಿತಾಂಶ ಜೂನ್ ನಾಲ್ಕನೇ ತಾರೀಕು ಸಿಗಲಿದೆ. ಕಾಂಗ್ರೆಸ್ ಸರ್ಕಾರ ಈ ಬಾರಿ ಬರುತ್ತದೆ. ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ 20 ಸೀಟು ಗೆಲ್ಲುತ್ತದೆ. ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಚಂದ್ರಪ್ಪ ನೂರಕ್ಕೆ ನೂರು ಗೆಲ್ಲುವುದು ನಿಶ್ಚಿತ. ನೀವು ಮನಸ್ಸು ಮಾಡಿದರೆ ಜಯ ಇನ್ನು ಸುಲಭವಾಗಲಿದೆ. ಹೆಚ್ಚು ಅಂತರದಿಂದ ಚಂದ್ರಪ್ಪರನ್ನು ಗೆಲ್ಲಿಸಲು ಮನವಿ ಮಾಡಿದರು.

ಬಡತನ ನಿರ್ಮೂಲನೆಗೆ ಬಿಜೆಪಿ ಯಾವುದೇ ಕೆಲಸ ಮಾಡಿಲ್ಲ. ಅವರ ಕಷ್ಟಕ್ಕೆ ಸ್ಪಂದಿಸಲು ನಾವು 5 ಗ್ಯಾರಂಟಿ ನೀಡಿದ್ದೇವೆ. ಕೇಂದ್ರದಲ್ಲಿ ಗ್ಯಾರಂಟಿ ಜಾರಿಗೆ ಬಂದರೆ ಪ್ರತಿ ತಿಂಗಳು 14 ಸಾವಿರಕ್ಕೂ ಹೆಚ್ಚು ಹಣ ಕುಟುಂಬಕ್ಕೆ ತಲುಪುತ್ತದೆ ಎಂದರು. ರೈತರ ಆತ್ಮಹತ್ಯೆ ನಡೆಯುತ್ತಿದ್ದರೂ ಸಾಲ ಮನ್ನಾ ಮಾಡಲಿಲ್ಲ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಕರ್ನಾಟಕ ದಿವಾಳಿಯಾಗುತ್ತೆ ಅಂತ ಹೇಳಿದ್ದರು. ಈಗ ನಾವು ಗ್ಯಾರಂಟಿಗಾಗಿ ₹58,000 ಕೋಟಿ ನೀಡಿದ್ದೇವೆ. ನಮ್ಮ ಸರ್ಕಾರ ದಿವಾಳಿಯಾಗಿಲ್ಲ. ಇತ್ತೀಚಿಗೆ ಕುಡಿಯುವ ನೀರಿಗೆ 85 ಲಕ್ಷ ರು.ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರದಲ್ಲಿ ಒಂದು ರು. ಸಹ ಬಿಡುಗಡೆ ಮಾಡಿಲ್ಲ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಿಲ್ಲ. ಒಂದು ವರ್ಷ ಪ್ರತಿಭಟನೆ ಮಾಡಿದರು ಬಿಜೆಪಿ ಸ್ವಾಮಿನಾಥನ್‌ ವರದಿ ಜಾರಿಗೆ ಮನ್ನಣೆ ನೀಡಲಿಲ್ಲ.ಕೇವಲ ದೇಶದ ಅಂಬಾನಿ, ಅದಾನಿಯವರ ಹಣ ದುಪ್ಪಟ್ಟು ಮಾಡಿದರೆ ವಿನಃ ರೈತರಿಗೆ ನೆರವಾಗಿಲ್ಲ ಎಂದರು.

ಈ ಬಾರಿ ಕರ್ನಾಟಕದಿಂದ 26 ಮಂದಿ ಸಂಸದರನ್ನು ನಾವು ಗೆಲ್ಲಿಸಿದ್ದೇವೆ. ಬರ ಪರಿಹಾರ ಕೊಟ್ಟಿಲ್ಲ. ಜಿಎಸ್‌ಟಿ ಕೊಟ್ಟಿಲ್ಲ. ಅಪ್ಪರ್ ಭದ್ರಾ ಯೋಜನೆ ಕೇಂದ್ರ ಯೋಜನೆಯಾಗಿ ಪರಿವರ್ತಿಸುತ್ತೇವೆ. 5000 ಕೋಟಿ ನೀಡುತ್ತೇವೆ ಎಂದು ಹೇಳಿದ್ದರೂ ಇಲ್ಲಿಯವರೆಗೂ ಒಂದು ನ್ಯಾಯ ಪೈಸೆ ನೀಡಿಲ್ಲ. ನೀಡಿದ್ದರೆ ಈಗಾಗಲೇ ಮಧುಗಿರಿ, ಪಾವಗಡ, ಶಿರಾಕ್ಕೆ ಭದ್ರಾ ನೀರು ಬರುತ್ತಿತ್ತು ಎಂದರು.

ಶಾಸಕ ಎಚ್‌ವಿ.ವೆಂಕಟೇಶ್ ಮಾತನಾಡಿ, ಮಾಜಿ ಸಚಿವ ವೆಂಕಟರಮಣಪ್ಪ, ನಿಕೇತ್ ರಾಜ್ ಮೌರ್ಯ, ಮುರಳೀಧರ ಹಾಲಪ್ಪ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರಗೌಡ, ತಾಲೂಕು ಕಾಂಗ್ರೆಸ್‌ ಅಧ್ಯಕ್ಷರಾದ ಸುದೇಶ್‌ಬಾಬು, ರಾಮಾಂಜಿನಪ್ಪ, ಫಜುಲುಲ್ಲಾಸಾಬ್‌ ಪ್ರಮೋದ್‌ಕುಮಾರ್‌, ಮುಖಂಡರಾದ ಶಂಕರರೆಡ್ಡಿ ವಕೀಲ ವೆಂಕಟರಾಮರೆಡ್ಡಿ ಮಾಜಿ ಜಿಪಂ ಸದಸ್ಯ ಕೆ.ಎಸ್‌.ಪಾಪಣ್ಣ, ರಾಜೇಶ್‌ ರವಿ, ನರಸಿಂಹರೆಡ್ಡಿ, ಷಾಬು, ರಿಜ್ವಾನ್‌, ಸುಜಿತ್‌, ಯುವ ಘಟಕದ ಪಾಪಣ್ಣ, ಸ್ಟುಡಿಯೋ ಅಮರ್‌ ಇತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ