- ಹರಪನಹಳ್ಳಿ ಪ್ರಚಾರ ವೇಳೆ ಪಕ್ಷೇತರ ಅಭ್ಯರ್ಥಿ ವಿನಯಕುಮಾರ ಮನವಿ
ನನ್ನದು ಸ್ವಾಭಿಮಾನದ ಹೋರಾಟ. ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದವನು. ಬಡಕುಟುಂಬದ ಹಿನ್ನೆಲೆಯಿಂದ ಬಂದವನು. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಇಡೀ ದೇಶವೇ ಇತ್ತ ತಿರುಗಿ ನೋಡುವಂತೆ ಮಾಡುವ ಕನಸು ಕಂಡಿದ್ದೇನೆ. ನನ್ನ ಗೆಲುವು ಸ್ವಾಭಿಮಾನದ ಗೆಲುವಾಗಲಿದ್ದು, ನಿಮ್ಮ ಗೆಲುವು ಆಗಲಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಕಕ್ಕರಗೊಳ್ಳ ಹೇಳಿದರು.
ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಓಕಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ದಾವಣಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಮನೆ ಮುಂದೆ ಹಿಂದೆಯೂ ಕಾದಿದ್ದೀರಾ, ಮುಂದೆಯೂ ಕಾಯುವಂಥ ಪರಿಸ್ಥಿತಿ ಬರುತ್ತದೆ. ನಾನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ನಿಮ್ಮ ಸೇವೆ ಮಾಡುವುದಕ್ಕೋಸ್ಕರ ಬಂದಿದ್ದೇನೆ. ನನಗೆ ಮತ ನೀಡಿ ಎಂದರು.
ದುಗ್ಗಾವತಿ ಗ್ರಾಮದ ಎಲ್ಲ ಸಮಾಜಗಳ ಮುಖಂಡರು, ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ವಿನಯಕುಮಾರ್ ಅವರಿಗೆ ಬೆಂಬಲ ನೀಡಿದರು.
- - - -19ಕೆಡಿವಿಜಿ40,41ಃ:ಹರಪನಹಳ್ಳಿ ತಾಲೂಕು ದುಗ್ಗಾವತಿ ಗ್ರಾಮದ ಆಂಜನೇಯಸ್ವಾಮಿ ರಥೋತ್ಸವದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಪಾಲ್ಗೊಂಡರು.