ಉತ್ತಮ ಶಿಕ್ಷಣದಿಂದ ಮಾತ್ರ ಸಬಲೀಕರಣ ಸಾಧ್ಯ :ಪ್ರೊ. ಶೇಖರ್‌

KannadaprabhaNewsNetwork |  
Published : Jan 03, 2024, 01:45 AM IST
ಪದವಿ ಪ್ರದಾನ ಸಮಾರಂಭ | Kannada Prabha

ಸಾರಾಂಶ

ಪ್ರತಿಯೊಬ್ಬ ವಿದ್ಯಾರ್ಥಿಯೂ ಅತ್ಯುತ್ತಮ ಶಿಕ್ಷಣ ಕಲಿಕಾ ಪ್ರಕ್ರಿಯೆಯಿಂದ ಜೀವನವನ್ನು ಸದೃಢ ಹಾಗೂ ಸಬಲೀಕರಣಗೊಳಿಸಿಕೊಳ್ಳಲು ಜ್ಞಾನ ಅವಶ್ಯಕವಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಡೀನ್‌ ಪ್ರೊ.ಬಿ. ಶೇಖರ್‌ ಅಭಿಪ್ರಾಯಪಟ್ಟರು.

ಸಿದ್ಧಾರ್ಥ ಕಾಲೇಜಿನ ವಾಣಿಜ್ಯ ವಿಭಾಗದಿಂದ ಪದವಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ತುಮಕೂರು

ಪ್ರತಿಯೊಬ್ಬ ವಿದ್ಯಾರ್ಥಿಯೂ ಅತ್ಯುತ್ತಮ ಶಿಕ್ಷಣ ಕಲಿಕಾ ಪ್ರಕ್ರಿಯೆಯಿಂದ ಜೀವನವನ್ನು ಸದೃಢ ಹಾಗೂ ಸಬಲೀಕರಣಗೊಳಿಸಿಕೊಳ್ಳಲು ಜ್ಞಾನ ಅವಶ್ಯಕವಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಡೀನ್‌ ಪ್ರೊ.ಬಿ. ಶೇಖರ್‌ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಕಾಂ ವಾಣಿಜ್ಯ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಮನುಷ್ಯನನ್ನು ಉತ್ತಮ ನಾಗರಿಕನನ್ನಾಗಿ ಹಾಗೂ ಯೋಗ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಅವಕಾಶ ಮಾಡಿಕೊಡುತ್ತದೆ. ಶಿಕ್ಷಣವೇ ಇಲ್ಲದಿದ್ದರೆ ಬದುಕೇ ಶೂನ್ಯವಾಗುತ್ತದೆ. ಆಧುನಿಕ ಜಗತ್ತಿನಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಹಾಗೂ ಆರ್ಥಿಕವಾಗಿ ಸಧೃಢಗೊಳ್ಳಲು ಶಿಕ್ಷಣ ಅತ್ಯಂತ ಅವಶ್ಯಕ ಸಾಧನವಾಗಿದೆ ಎಂದು ನುಡಿದರು.

ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಕರ್ತವ್ಯದ ಜೊತೆಗೆ ಧನಾತ್ಮಕ ಋಣಾತ್ಮಕ ಆಲೋಚನೆಯನ್ನು ಆಲಿಸಿ ಸರಿಯಾದ ಮಾರ್ಗದಲ್ಲಿ ಗುರಿ ತಲುಪಬೇಕು. ವಿದ್ಯಾರ್ಥಿಯ ಜೀವನವನ್ನು ಸದೃಢಗೊಳಿಸುವಲ್ಲಿ ಎಲ್ಲಾ ರೀತಿಯಲ್ಲೂ ಶಿಕ್ಷಣ ಸಹಕಾರಿಯಾಗಿದೆ. ನಾಯಕತ್ವದ ಗುಣ, ನಿರ್ಧಾರ ತೆಗೆದುಕೊಳ್ಳುವ ಕಲೆ, ವ್ಯವಹಾರಕ್ಕೆಅವಶ್ಯವಿರುವ ಎಲ್ಲಾ ಕೌಶಲ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.

ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ಕುಲಾಧಿಪತಿಗಳ ಸಲಹೆಗಾರ ವಿವೇಕ್ ವೀರಯ್ಯ ಮಾತನಾಡಿ, ಶಿಕ್ಷಕರಿಗೆ ಬೋಧನೆ ಒಂದು ಹವ್ಯಾಸ ಮತ್ತು ಶಕ್ತಿಯುತ ಸಾಧನ. ಯಾವುದೇ ಜಾತಿ ,ಧರ್ಮ, ಉದ್ಯೋಗ ಸ್ಥಾನದ ಭೇದವಿಲ್ಲದೆ ಮನುಷ್ಯನನ್ನು ಗೌರವಿಸಬೇಕು. ಆಗ ಪದವಿಗೆ ಬೆಲೆ ಎಂದರು.

ಕಾಲೇಜಿನ ಪ್ರಾಂಶುಪಾಲರು ಡಾ.ಹೇಮಲತ.ಪಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು, ಕಳೆದ ಸಾಲಿನಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತಾಧಿಕಾರಿ ಖಲಂದರ್ ಪಾಷ, ಪ್ರಾಧ್ಯಾಪಕ ಪ್ರೊ. ಹನುಮಂತರಾಯಪ್ಪ ,ಸೈಯದ್ ಬಾಬು, ವಿನಯ್‌ಕುಮಾರ್ ಎಂ. ಹಾಗೂ ವಿವಿಧ ವಿಭಾಗದ ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

ಫೋಟೊಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಕಾಂ ವಾಣಿಜ್ಯ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಪ್ರೊ. ಶೇಖರ್‌ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ