ಕಟ್ಟಕಡೆಯ ಮನುಷ್ಯನ ಸಬಲೀಕರಣವೇ ದೀನ್‌ದಯಾಳ್ ಚಿಂತನೆಯ ಆಶಯ: ಸಿ.ಟಿ.ರವಿ

KannadaprabhaNewsNetwork |  
Published : Sep 27, 2026, 02:00 AM IST
ಪೋಟೋ | Kannada Prabha

ಸಾರಾಂಶ

ಚಿಕ್ಕಮಗಳೂರುಸಮಾಜದ ಕಟ್ಟಕಡೆ ವ್ಯಕ್ತಿಗೆ ಅಧಿಕಾರ ಹಾಗೂ ಸೌಲಭ್ಯಗಳ ಪ್ರಯೋಜನ ತಲುಪಿಸಿ ಅವರನ್ನು ಸಬಲರಾಗಿಸುವುದೇ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಅಂತ್ಯೋದಯದ ಚಿಂತನೆ ಆಶಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿ ‘ಪಾಂಚಜನ್ಯ’ದಲ್ಲಿ ದೀನ್‌ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಮಾಜದ ಕಟ್ಟಕಡೆ ವ್ಯಕ್ತಿಗೆ ಅಧಿಕಾರ ಹಾಗೂ ಸೌಲಭ್ಯಗಳ ಪ್ರಯೋಜನ ತಲುಪಿಸಿ ಅವರನ್ನು ಸಬಲರಾಗಿಸುವುದೇ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಅಂತ್ಯೋದಯದ ಚಿಂತನೆ ಆಶಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿ ‘ಪಾಂಚಜನ್ಯ’ದಲ್ಲಿ ಶುಕ್ರವಾರ ನಡೆದ ದೀನ್‌ದಯಾಳ್ ಉಪಾಧ್ಯಾಯರ 110ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ ಬಿಜೆಪಿ ಇಂದು ದೇಶದ ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದ ಹಿಂದೆ ದೀನ್‌ದಯಾಳ್ ಉಪಾಧ್ಯಾಯರ ಸೈದ್ಧಾಂತಿಕ ಹಾಗೂ ಸಂಘಟನಾ ಬುನಾದಿ ಪ್ರಮುಖ ಕಾರಣ ಎಂದರು.

ಪಕ್ಷದ ಆರಂಭಿಕ ದಿನಗಳಲ್ಲಿ ಸ್ವಂತ ಕಚೇರಿ ಹಾಗೂ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ದೀನ್‌ದಯಾಳ್ ಉಪಾಧ್ಯಾಯರು ಕಠಿಣ ಪರಿಶ್ರಮದಿಂದ ಸಂಘಟನೆ ಕಟ್ಟಿದರು. ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ಚಿಂತನೆ ನಡುವೆ ಭಾರತೀಯ ಮೂಲದ ಪರ್ಯಾಯ ದೃಷ್ಟಿಕೋನವಾಗಿ ಅವರು ಏಕಾತ್ಮ ಮಾನವ ದರ್ಶನ ಪ್ರತಿಪಾದಿಸಿದರು ಎಂದರು.ವ್ಯಕ್ತಿ, ಕುಟುಂಬ, ಸಮಾಜ, ರಾಷ್ಟ್ರ ಹಾಗೂ ವಿಶ್ವ ಪರಸ್ಪರ ಸಂಬಂಧ ಹೊಂದಿದ್ದು, ಮನುಷ್ಯ ಪ್ರಕೃತಿ ಒಂದು ಭಾಗ ಎಂಬ ಸಮಗ್ರ ಚಿಂತನೆಯೇ ಏಕಾತ್ಮ ಮಾನವ ದರ್ಶನದ ಮೂಲ ಆಶಯ. ಸಮಾಜದ ಕಟ್ಟಕಡೆ ವ್ಯಕ್ತಿಗೆ ಅವಕಾಶ ಮತ್ತು ಶಕ್ತಿ ಒದಗಿಸಿ ಸಬಲರಾಗಿಸುವುದು ಅಂತ್ಯೋದಯದ ಪರಿಕಲ್ಪನೆ ಎಂದರು.ದೀನ್‌ದಯಾಳ್ ಉಪಾಧ್ಯಾಯರ ನಿಧನ ಇಂದಿಗೂ ನಿಗೂಢ. ಅವರು ಪ್ರತಿಪಾದಿಸಿದ ವಿಚಾರಧಾರೆ, ಹಾಕಿಕೊಟ್ಟ ಸೈದ್ಧಾಂತಿಕ ಬುನಾದಿ ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದು ಸಿ.ಟಿ.ರವಿ ಹೇಳಿದರು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಧನ್, ದೀನ್‌ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಹಾಗೂ ಉಜ್ವಲ ಸೇರಿದಂತೆ ವಿವಿಧ ಯೋಜನೆಗಳು ಕಟ್ಟಕಡೆ ಜನರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲ್ಪಟ್ಟಿವೆ ಎಂದು ವಿವರಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಈಶ್ವರಹಳ್ಳಿ ಮಹೇಶ್, ಬಿ.ಜಿ. ಸೋಮಶೇಖರ್, ವೀಣಾ ಶೆಟ್ಟಿ, ಕಲ್ಮರುಡಪ್ಪ, ಸೀತಾರಾಮ ಭರಣ್ಯ, ಪುಷ್ಪರಾಜ್, ಎಚ್.ಎಸ್. ಪುಟ್ಟಸ್ವಾಮಿ, ಕೋಟೆ ರಂಗನಾಥ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೀಟ, ರೋಗ, ಕಳೆ ನಿಯಂತ್ರಣಕ್ಕೆ ಆರ್ಕಿವೋ ಅಸ್ತ್ರ!
ಕಲೆ, ಸಂಸ್ಕೃತಿ, ಪರಂಪರೆಗೆ ಹವ್ಯಕರ ಕೊಡುಗೆ ಅಪಾರ