ಕನ್ನಡ ಪ್ರಭ ವಾರ್ತೆ ಮುಧೋಳ
ಸ್ಥಳೀಯ ಎಸ್.ಆರ್.ಕಂಠಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಮಂಗಳವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಭಾರತೀಯ ಸಂಪ್ರದಾಯದಲ್ಲಿ ಮಹಿಳೆಗೆ ವಿಶೇಷ ಮತ್ತು ಉನ್ನತ ಸ್ಥಾನ ಇದೆ. ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೊ ಅಲ್ಲಿ ದೈವತ್ವವು ಅರಳುತ್ತದೆ. ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನ ಮಹಿಳೆಯರಿದ್ದಾರೆ. ಶೇ.50 ರಷ್ಟು ಮಹಿಳೆಯರನ್ನು ಮುಖ್ಯ ವಾಹಿನಿಗೆ ತಂದರೆ ನಮ್ಮ ಭಾರತ ದೇಶವು ಎಷ್ಟು ಸಬಲವಾಗುತ್ತದೆ ಎಂಬುದನ್ನು ನಾವಿಂದು ಊಹಿಸಬಹುದು ಎಂದರು.
ಇಂದು ಮಹಿಳೆಯರು ಶಿಕ್ಷಣ, ವೈದ್ಯಕೀಯ, ರಾಜಕೀಯ, ಕ್ರೀಡೆ, ಸಾಮಾಜಿಕ, ಸಾಪ್ಟವೇರ್, ವಿಜ್ಞಾನ, ತಂತ್ರಜ್ಞಾನ, ಸಿನಿಮಾ, ಉದ್ಯಮ, ಸೇನೆ, ಬಾಹ್ಯಾಕಾಶ, ಕೃಷಿ, ಆಡಳಿತ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ತನ್ನ ಸಾಧನೆಯ ಹೆಜ್ಜೆ ಹಾಕಿರುವುದು ಹೆಮ್ಮೆ ಮತ್ತು ಅಭಿಮಾನ ಸಂಗತಿ. ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದು ಸಾಧಿಸಿ ತೋರಿಸಿದ್ದಾಳೆ, ತೋರಿಸುತ್ತಿದ್ದಾಳೆ ಎಂದರು.ಸ್ಥಳೀಯ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ರೇಖಾಮನಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡರೂ ಇನ್ನೂ ಸ್ವತಂತ್ರಳಾಗಿಲ್ಲ ಎಂಬುದು ಖೇದಕರ ಸಂಗತಿ. ಸಮಾಜದ ವ್ಯವಸ್ಥೆಯಲ್ಲಿ ಮಹಿಳೆಯರು ಬದುಕು ಸಾಗಿಸುವುದು ಕಷ್ಟಕರ. ಸಮಾಜವನ್ನು ಎದುರಿಸಿ ಮುನ್ನುಗ್ಗುವುದು ಅವಳಿಗೊಂದು ಸವಾಲು ಆಗಿದೆ ಎಂದರು.