ಧಾರವಾಡ:
ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯಮಟ್ಟದ ‘ಮಕ್ಕಳ ಹಬ್ಬ’ ಉದ್ಘಾಟಿಸಿ, ಮಕ್ಕಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಬಾಲವಿಕಾಸ ಅಕಾಡೆಮಿ ರಾಜ್ಯಾದ್ಯಂತ ಮಕ್ಕಳನ್ನು ಹಾಗೂ ಅವಕಾಶ ವಂಚಿತ ಮಕ್ಕಳಿಗಾಗಿ ರೂಪಿಸಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಅಕಾಡೆಮಿಯು ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ. ಮಕ್ಕಳಿಗಾಗಿ ಕೇಂದ್ರ ಕಚೇರಿಯಲ್ಲಿ ಅತ್ಯಾಧುನಿಕವಾದ ಸುಸಜ್ಜಿತ ಮಕ್ಕಳ ಸ್ಟುಡಿಯೋ ನಿರ್ಮಿಸುತ್ತಿದ್ದು ಅದನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.ಯೋಜನಾಧಿಕಾರಿ ಅಕ್ಕಮಹಾದೇವಿ ಕೆ.ಎಚ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಡಾ. ಎಚ್.ಎಚ್. ಕುಕನೂರ, ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷ ಶಾಂತೇಶ ಕಳಸಗೊಂಡ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಬಸವರಾಜ, ಫಕೀರೇಶ ಮುಡಿಯಣ್ಣವರ, ನಾಗಪ್ಪ ಬೆಂತೂರ, ಅನ್ನಪೂರ್ಣ ಸಂಗಳದ, ಮೀನಾಕ್ಷಿ ಮೆಡ್ಲೇರಿ, ಪುಷ್ಪಾ ಹಂಜಗಿ ಸೇರಿದಂತೆ ಹಲವರಿದ್ದರು.