"ವಿಶ್ವ ವಿಶೇಷ ಚೇತನರ ದಿನ " ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಣ ಇಲಾಖೆ ವತಿಯಿಂದ ಆರೋಗ್ಯ ತಪಾಸಣೆ ಫಿಜಿಯೋಥೆರಫಿ, ವಿದ್ಯಾರ್ಥಿ ವೇತನ, ಮಕ್ಕಳಿಗೆ ಅಗತ್ಯ ಕಲಿಕೋಪಕರಣಗಳು, ಅಗತ್ಯ ಉಪಕರಣಗಳನ್ನು ಸಹ ನೀಡಲಾಗುತ್ತಿದ್ದು ಅನೇಕ ಮಕ್ಕಳು ಇತರ ಮಕ್ಕಳಂತೆ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ, ವಿಶೇಷ ಚೇತನ ಮಕ್ಕಳನ್ನು ಇತರ ಮಕ್ಕಳಂತೆ ಹೆಚ್ಚು ಪ್ರೀತಿಸುವ ಮತ್ತು ಅವರ ಅಭಿಲಾಷೆಗೆ ಸ್ಪಂದಿಸುವ ಮೂಲಕ ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಬೇಕು ಎಂದು ಹಾಸನ ಡಯಟ್ ಪ್ರಾಂಶುಪಾಲ ರಂಗಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ವಿಶೇಷ ಚೇತನ ಮಕ್ಕಳಿಗಾಗಿ ಸರಕಾರ ಮತ್ತು ಶಿಕ್ಷಣ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದ್ದು ಜಾರಿಗೊಳಿಸಲಾಗುತ್ತಿದೆ. ಇವುಗಳ ಸೌಲಭ್ಯವನ್ನು ತಮ್ಮ ಮಕ್ಕಳಿಗೆ ದೊರಕಿಸಿ ಕೊಡುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಹಾಸನ ಡಯಟ್ ಪ್ರಾಂಶುಪಾಲ ರಂಗಸ್ವಾಮಿ ಹೇಳಿದರು ಅವರು ನಗರದ ಸರ್ಕಾರಿ ಪೆಟ್ಟ ಹಿರಿಯ ಪ್ರಾಥಮಿಕ ಪಾಠಶಾಲಾ ಆಭರಣದಲ್ಲಿ ಆಯೋಜಿಸಿದ್ದ "ವಿಶ್ವ ವಿಶೇಷ ಚೇತನರ ದಿನ " ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಣ ಇಲಾಖೆ ವತಿಯಿಂದ ಆರೋಗ್ಯ ತಪಾಸಣೆ ಫಿಜಿಯೋಥೆರಫಿ, ವಿದ್ಯಾರ್ಥಿ ವೇತನ, ಮಕ್ಕಳಿಗೆ ಅಗತ್ಯ ಕಲಿಕೋಪಕರಣಗಳು, ಅಗತ್ಯ ಉಪಕರಣಗಳನ್ನು ಸಹ ನೀಡಲಾಗುತ್ತಿದ್ದು ಅನೇಕ ಮಕ್ಕಳು ಇತರ ಮಕ್ಕಳಂತೆ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ, ವಿಶೇಷ ಚೇತನ ಮಕ್ಕಳನ್ನು ಇತರ ಮಕ್ಕಳಂತೆ ಹೆಚ್ಚು ಪ್ರೀತಿಸುವ ಮತ್ತು ಅವರ ಅಭಿಲಾಷೆಗೆ ಸ್ಪಂದಿಸುವ ಮೂಲಕ ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಬೇಕು ಎಂದರು. ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ವಿಶೇಷ ಚೇತನ ಮಕ್ಕಳಿಗೆ ಅನುಕಂಪ ಅಥವಾ ಸಹಾನಭೂತಿ ಬೇಡ ಅವರನ್ನು ಪ್ರೀತಿಯಿಂದ ಕಾಣಿರಿ, ಈ ಮೊದಲು ಅವರುಗಳ ಗಳಿಗಾಗಿಯೇ ಪ್ರತ್ಯೇಕ ಶಾಲೆ ಇತ್ತು, ಇತರೆ ಮಕ್ಕಳೊಂದಿಗೆ ಅವರು ಬೆರೆಯಬೇಕು ಎಂಬ ಸದ್ದುದೇಶದಿಂದ ಈಗ ಶಾಲೆಗಳಲ್ಲಿ ಮಹಾಂತಹ ಮಕ್ಕಳೇನಾ ದಾಖಲಿಸಿಕೊಳ್ಳಲು ಅವಕಾಶವಿದ್ದು ಶಾಲೆಗಳಲ್ಲಿ ಮಕ್ಕಳು ಚಟುವಟಿಕೆಯಿಂದ ಇದ್ದಾರೆ. ನಮ್ಮ ಕೇಂದ್ರದಲ್ಲಿ ವಾರಕ್ಕೆ ಎರಡು ದಿನ ಫಿಜಿಯೋಥೆರಫಿ ಮಾಡಲಾಗುತ್ತಿದ್ದು, ಇದರಿಂದ ಮಕ್ಕಳ ದೈಹಿಕ ನ್ಯೂನತೆ ಸುಧಾರಿಸುತ್ತಿದೆ. ಇಲ್ಲಿ ಏನು ಸೂಚನೆಯನ್ನು ನೀಡುತ್ತಾರೆ ಅದನ್ನು ಮನೆಯಲ್ಲಿ ಪೋಷಕರು ಮಕ್ಕಳಿಗೆ ಮಾಡಿಸಬೇಕು ಎಂದರು. ಇತ್ತೀಚಿಗಷ್ಟೇ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು ನೂರಾರು ಮಕ್ಕಳು ಅದರಲ್ಲಿ ಪಾಲ್ಗೊಂಡಿದ್ದರು ಎಂದರು. ಶಿಕ್ಷಣ ಸಂಯೋಜಿಕ ಮಲ್ಲೇಶ್ ಮಾತನಾಡಿ, ವಿಶೇಷ ಚೇತನ ಮಕ್ಕಳಲ್ಲಿ ಪ್ರತಿಭೆಗಳು ಇರುತ್ತವೆ. ಅವುಗಳನ್ನು ಹೊರೆತರು ಅಂತಹ ಪ್ರಯತ್ನ ನಮ್ಮಿಂದ ಆಗಬೇಕು. ಅವರಲ್ಲಿ ಆತ್ಮಸ್ಥೈರ್ಯವನ್ನು ನಾವು ತುಂಬಬೇಕು ಹೆಚ್ಚು ಸಮಯವನ್ನು ತೆಗೆದುಕೊಳ್ಳಬಹುದು. ಪೋಷಕರಲ್ಲಿ ತಾಳ್ಮೆ ಇರಬೇಕು, ಯಾವುದೇ ಸಂದರ್ಭದಲ್ಲಿಯೂ ಕರೆ ಕೊಟ್ಟಾಗ ಮಕ್ಕಳನ್ನು ಪೋಷಕರು ಕರೆತರುತ್ತಿದ್ದಾರೆ ವಿಶೇಷ ಕಾಳಜಿ ವಹಿಸುತ್ತಿರುವುದು ನಮಗೂ ಸಂತೋಷ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ಮೂರ್ತಿ ಬಿಆರ್‌ಸಿ ಕೇಂದ್ರದಲ್ಲಿ ವಾರಕ್ಕೆ ಎರಡು ಬಾರಿ ಬಿಜೆಪಿ ಮಾಡಲಾಗುತ್ತಿದೆ ಇದು ಮಕ್ಕಳಲ್ಲಿ ಸುಧಾರಣೆ ಕಂಡು ಬರುತ್ತದೆ. ಶಾಲೆಗೆ ಬರುವ ವಿಶೇಷ ಚೇತನ ಮಕ್ಕಳಿಗೂ ಸಹ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಿ ಅವರಿಗೆ ಸ್ಪಂದಿಸುತ್ತಿದ್ದಾರೆ ಎಂದರು.
ಬಾಣವರದಿಂದ ಬಂದಿದ್ದ ಅಮೃತ ತಾಯಿ ತನ್ನ ಮಗಳು ಈ ಕೇಂದ್ರಕ್ಕೆ ಬರಲಾಗಿ ಅವಳ ನ್ಯೂನ್ಯತೆಯಲ್ಲಿ ಬಹಳಸುಧಾರಣೆಯಾಗುತ್ತಿದೆ, ಮಗಳು ದೈಹಿಕವಾಗಿ ಸುಧಾರಣೆ ಕಾಣುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿ ಮೂಡಿದೆ. ಇಲ್ಲಿನ ಎಲ್ಲಾ ಅಧಿಕಾರಿಗಳು ಸಿಬ್ಬಂದಿ ಮಕ್ಕಳಿಗೆ ಚೆನ್ನಾಗಿ ಸ್ಪಂದಿಸುತ್ತಾರೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.