ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ಬೆನಮನಹಳ್ಳಿ ಗ್ರಾಮದ ಶ್ರೀಕೋಡಿ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೆಂಪೇಗೌಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯಿಂದ ಜನಪದ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಜನಪದ ನಮ್ಮ ನೆಲದ ಸಂಸ್ಕೃತಿ. ಜೀವನಾನುಭವದಿಂದ ಬೆಳೆದುಬಂದಿರುವ ಕಲೆಯನ್ನು ಉಳಿಸುವುದು ಅಗತ್ಯವಿದೆ. ಜನಪದದ ಮಹತ್ವವನ್ನು ಹೊಸ ತಲೆಮಾರಿಗೆ ತಿಳಿಸುವ ಮೂಲಕ ಅವರಲ್ಲೂ ಜನಪದದ ಬಗ್ಗೆ ಅಭಿರುಚಿ ಬೆಳೆಸಬೇಕಿದೆ ಎಂದು ನುಡಿದರು.ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪುಟ್ಟರಾಮು ಮಾತನಾಡಿ, ಆಧುನಿಕ ಯುಗದಲ್ಲಿ ಜನಪದ ಸಂಸ್ಕೃತಿಯನ್ನು ಎಲ್ಲರೂ ಮರೆಯುತ್ತಿದ್ದಾರೆ. ಅದನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ. ಅದಕ್ಕಾಗಿ ಎಲ್ಲರೂ ಜನಪದ ಕಲೆಗಳನ್ನು ಪ್ರೋತ್ಸಾಹಿಸಿ ಸಂಸ್ಕೃತಿಯನ್ನು ಜೀವಂತವಾಗಿಡುವುದಕ್ಕೆ ಸಂಕಲ್ಪ ಮಾಡುವಂತೆ ತಿಳಿಸಿದರು.
ಮಲ್ಲೇಶ್ ಮತ್ತು ತಂಡದಿಂದ ತಮಟೆ ವಾದನ, ಪ್ರಸಾದ ಮತ್ತು ತಂಡ ಬನ್ನೂರು ಇವರಿಂದ ಪೂಜಾ ಕುಣಿತ, ಮಂಜುನಾಥ್ ಮತ್ತು ತಂಡ ಮಂಡ್ಯದವರಿಂದ ವೀರಗಾಸೆ ಕುಣಿತ, ಶ್ರೀಧರ್ ಮತ್ತು ತಂಡದ ರಿಂದ ಪಟದ ಕುಣಿತ, ಹರ್ಷ ಮತ್ತು ತಂಡಗಳಿಂದ ಸಮೂಹ ನೃತ್ಯ, ಚೇತು ಮತ್ತು ತಂಡದಿಂದ ಡೊಳ್ಳು ಕುಣಿತ, ಶಿವು ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಟ್ರಸ್ಟಿನ ಅಧ್ಯಕ್ಷರಾದ ಗಂಗಾಧರ್, ಅಂತಾರಾಷ್ಟ್ರೀಯ ಮಟ್ಟದ ಗಾಯಕರು ಹಾಗೂ ಸಾಹಿತಿಗಳು ಆದ ಬಿ.ಆರ್. ಶಿವಕುಮಾರ್, ಲಿಂಗಪಟ್ಟಣ ಗ್ರಾಪಂ ಅಧ್ಯಕ್ಷೆ ಸುಕನ್ಯ, ನಿಟ್ಟೂರು ಗ್ರಾಪಂ ಅಧ್ಯಕ್ಷೆ ಶಿವಮ್ಮ, ಮರಿಸ್ವಾಮಿ ,ರಮೇಶ್, ಕುಮಾರ್, ಎಚ್.ವಿ.ರಾಜು, ದೊರೆಸ್ವಾಮಿ, ಮಂಜು, ಎಂ.ಕೆ.ಮಾದೇವ, ಶಿವಕುಮಾರ್, ಶಿವಪ್ಪ ಇತರರಿದ್ದರು.