ರಾಮನಗರ: ಜಾನಪದ ಲೋಕ ಸ್ಥಾಪನೆಯಾದ ನಂತರ ಖ್ಯಾತ ಹಾಗೂ ಪ್ರತಿಭಾವಂತ ಜನಪದ ಕಲಾವಿದರನ್ನು ಆಹ್ವಾನಿಸಿ, ಅವರ ಕಲೆಯನ್ನು ಗೌರವಿಸಿ, ಸನ್ಮಾನಿಸುವ ಕೆಲಸವನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ನಾಡೋಜಾ ಎಚ್.ಎಲ್.ನಾಗೇಗೌಡರ ಆಶಯವನ್ನು ಸಾಕಾರಗೊಳಿಸುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ಲೋಕಸಿರಿ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಗೊಂದಲಿಗರ ಕಲಾವಿದರಾದ ಹನುಮಂತಪ್ಪ ವೆಂಕಪ್ಪ ಸುಗತೇಕರ ಅವರನ್ನು ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ಕಲಾವಿದರಾದ ಹನುಮಂತ ವೆಂಕಪ್ಪ ಸುಗತೇಕರ ಮತ್ತು ತಂಡದವರು ಗೊಂದಲಿಗರ ಪಾಪಪುಣ್ಯದ ಕಥೆ, ತಂಗಿ ಹೋಗುವ ಬಾರಮ್ಮ, ಅಂಬಾ ಭವಾನಿ ಪ್ರಸಂಗಗಳನ್ನು ಪ್ರಸ್ತುತಪಡಿಸಿದರು. ತಮ್ಮ ಕುಟುಂಬದ ಕುಡಿಗಳಾದ ಅಂಬಾಜಿ, ಅಕ್ಷಯ್, ಚೇತನ್, ರಾಹುಲ್ ಸಂಬಾಳ ಮತ್ತು ತಾಳ ನುಡಿಸಿ ದನಿಗೂಡಿಸಿದರು. ತಂದೆಯ ಕಲೆಯಿಂದ ಜಾನಪದ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ, ಕೇಂದ್ರ ಸರ್ಕಾರದ ಪದ್ಮಶ್ರಿ ಪ್ರಶಸ್ತಿ ಪಡೆದ ಕುಟುಂಬ ನನ್ನದು ಎಂದು ಹೇಳಿಕೊಳ್ಳುವುದು ನನಗೆ ಹೆಮ್ಮೆ ಎನಿಸುತ್ತದೆ ಎಂದು ಅವರು ಸಂವಾದದಲ್ಲಿ ಗೊಂದಲಿಗರ ಸಂಪ್ರದಾಯ ಮತ್ತು ವಾದ್ಯಗಳ ಸ್ವಾರಸ್ಯಗಳನ್ನು ತಿಳಿಸಿದರು.ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸು.ತಾ.ರಾಮೇಗೌಡ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಬು ವಿ.ಕುಂಬಾಪುರ ಮಾತನಾಡಿದರು.
11ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಜಾನಪದ ಲೋಕದಲ್ಲಿ ನಡೆದ ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನ ಲೋಕಸಿರಿ-103 ಕಾರ್ಯಕ್ರಮದಲ್ಲಿ ಕಲಾವಿದ ಹನುಮಂತ ವೆಂಕಪ್ಪ ಸುಗತೇಕರ ಅವರನ್ನು ಗೌರವಿಸಲಾಯಿತು.