ಧಾರ್ಮಿಕ ಕಾರ್ಯಗಳಿಗೂ ಉತ್ತೇಜನ: ವಿಮಲಾ

KannadaprabhaNewsNetwork |  
Published : Aug 26, 2025, 01:03 AM IST
ವಿಜೆಪಿ ೨೪ವಿಜಯಪುರ ಪಟ್ಟಣದ ಶ್ರೀನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ನ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು  ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರ ಎನ್ ರುದ್ರಮೂರ್ತಿ ಉಧ್ಘಾಟಿಸಿದರು. | Kannada Prabha

ಸಾರಾಂಶ

ವಿಜಯಪುರ: 8 ವರ್ಷಗಳ ಹಿಂದೆ ೧೧ ಲಕ್ಷ ಬಂಡವಾಳದೊಂದಿಗೆ ಪ್ರಾರಂಭಿಸಲ್ಪಟ್ಟ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇಂದು 3 ಕೋಟಿ ರು.ಗಳಿಗೂ ಹೆಚ್ಚು ವ್ಯವಹಾರ ನಡೆಸಿದ್ದು ೨೪,೫೪,೧೯೯ ಲಾಭ ಗಳಿಸಿದೆ ಎಂದು ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್. ರುದ್ರಮೂರ್ತಿ ತಿಳಿಸಿದರು.

ವಿಜಯಪುರ: 8 ವರ್ಷಗಳ ಹಿಂದೆ ೧೧ ಲಕ್ಷ ಬಂಡವಾಳದೊಂದಿಗೆ ಪ್ರಾರಂಭಿಸಲ್ಪಟ್ಟ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇಂದು 3 ಕೋಟಿ ರು.ಗಳಿಗೂ ಹೆಚ್ಚು ವ್ಯವಹಾರ ನಡೆಸಿದ್ದು ೨೪,೫೪,೧೯೯ ಲಾಭ ಗಳಿಸಿದೆ ಎಂದು ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್. ರುದ್ರಮೂರ್ತಿ ತಿಳಿಸಿದರು.

ಇಲ್ಲಿನ ಶ್ರೀನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಏರ್ಪಡಿಸಿದ್ದ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಸೊಸೈಟಿ ಸಿಇಒ ಎಸ್.ವಿಮಲಾ ಮಾತನಾಡಿ, ಸೊಸೈಟಿಯಲ್ಲಿ ಕೇವಲ ಹಣಕಾಸಿನ ವ್ಯವಹಾರವಷ್ಟೇ ಅಲ್ಲದೆ, ಧಾರ್ಮಿಕ ಕಾರ್ಯಕ್ರಮಗಳು, ಸೇವಾಕಾರ್‍ಯಗಳು, ಷೇರುದಾರರ ಮಕ್ಕಳ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು. ಇದೇ ವೇಳೆ ಸೊಸೈಟಿಯ ಹಿರಿಯ ಷೇರುದಾರರಾದ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ್‌ರಾವ್ ಹಾಗೂ ನಾಗರಾಜ್ ರಾವ್ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಬಿ.ಸಿ.ಸಿದ್ದರಾಜು, ನಿರ್ದೇಶಕರಾದ ಎಸ್.ರುದ್ರಮೂರ್ತಿ, ಎಸ್ ಮಂಜುನಾಥ್, ಬಿ.ನರೇಂದ್ರ ಕುಮಾರ್, ಎಸ್‌. ಮನೋಹರ್ ಬಾಬು, ಎಸ್ ಪುನೀತ್ ಕುಮಾರ್, ಎನ್ ನಾರಾಯಣಸ್ವಾಮಿ, ಜೆ ನಂಜಣ್ಣ, ಕೆಸಿ ಭಾರತಿ, ಶೀಲರಾಣಿ, ಕಚೇರಿ ವ್ಯವಸ್ಥಾಪಕ ಎಸ್ ಪ್ರೀತಿ, ನಿವೃತ್ತ ಪೌರಾಯುಕ್ತ ವಿ ಶಿವಕುಮಾರ್, ದೀಪಾ, ವೀಣಾ, ಅನ್ನಪೂರ್ಣ, ಚಂದ್ರರಾಜು, ಚಂದ್ರಕಲಾ, ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!