ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ರಂಗಭೂಮಿ ಶ್ರೀಮಂತವಾಗಿ ಬೆಳೆದು ಬಂದಿದೆ. ಗ್ರಾಮೀಣ ಪ್ರದೇಶದ ರಂಗ ಕಲಾವಿದರು ದೊಡ್ಡಾಟಗಳಲ್ಲಿ ಪೌರಾಣಿಕ ಸನ್ನಿವೇಶಗಳನ್ನು ಅಭಿನಯಿಸಿ ನಮ್ಮ ಪ್ರಾಚೀನ ಸಂಗತಿಗಳನ್ನು ಇಂದಿನ ತಲೆಮಾರಿಗೆ ತಿಳಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ ಎಂದು ಕಲಾವಿಕಾಸ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಸಿ.ಕೆ.ಎಚ್.ಶಾಸ್ತ್ರೀ (ಕಡಣಿ) ಹೇಳಿದರು.
ಇಂದಿನ ಪೀಳಿಗೆಗೆ ಈ ಕಲೆ ವರ್ಗಾಯಿಸುವ ಕಾರ್ಯ ಕಲಾ ಸಂಸ್ಥೆಗಳನ್ನು ಮಾಡಬೇಕು. ಸರ್ಕಾರ ಈ ದಿಸೆಯಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಹಿತ್ಯದ ಪ್ರಕಾರಗಳಲ್ಲಿ ನಾಟಕವೇ ರಮ್ಯವಾದದ್ದು. ಇಲ್ಲಿ ನವರಸ ಕಾಣಬಹುದು. ಕಲಾವಿದರು ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದರೂ ಕಲೆಯ ಮೇಲಿನ ಆರಾಧನೆಯಿಂದ ಪ್ರವೃತ್ತಿಯಲ್ಲಿ ತೊಡಗಿದ್ದಾರೆ. ಬೆಟಗೇರಿಯ ಹೊಸಗರಡಿ ಜಾನಪದ ಕಲಾಮೇಳದವರು ಕಳೆದ ಐವತ್ತು ವರ್ಷಗಳಿಂದ ಈ ಕಲೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುವದು ಸಂತಸದ ಸಂಗತಿಯಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಶೋಕ ಸುತಾರ ಮಾತನಾಡಿ, ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆ ಪ್ರಯತ್ನಿಸಬೇಕು ಎಂದರು.
ಬರಹಗಾರ್ತಿ ಶಾರದಾ ಬಾಣದ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶ್ರೀಕಾಂತ ಬಡ್ಡೂರ ನಿರೂಪಿಸಿದರು. ಶಶಿಕಾಂತ ಕೊರ್ಲಹಳ್ಳಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು. ಡಾ. ಜಿ.ಬಿ. ಪಾಟೀಲ, ಕೆ.ಎಚ್. ಬೇಲೂರ, ಸುರೇಶ ಕುಂಬಾರ, ಸಿ.ಎಂ. ಮಾರನಬಸರಿ, ಎಸ್.ಎಂ. ಕಾತರಕಿ, ರತ್ನಕ್ಕ ಪಾಟೀಲ, ಅಶೋಕ ಸತರಡ್ಡಿ, ಡಾ. ಬಿ.ಬಿ.ಹೊಳಗುಂದಿ, ಬಿ.ಎಸ್.ಹಿಂಡಿ, ಸತೀಶಕುಮಾರ ಚನ್ನಪ್ಪಗೌಡರ, ಡಿ.ಎಸ್. ಬಾಪುರಿ, ಎಸ್.ಎಫ್. ಬೆಣಕಣ್ಣವರ, ರತ್ನಕ್ಕ ಘಾರ್ಗಿ, ಎಸ್.ವಿ. ಬಳ್ಳಿ, ರತ್ನಾ ಪುರಂತರ, ಎಲ್.ಎಂ. ನಿಡವಣಿ, ಶೈಲಜಾ ಗಿಡ್ನಂದಿ, ಆರ್.ಡಿ. ಕಪ್ಪಲಿ, ಬಸವರಾಜ ಗಣಪ್ಪನವರ, ತಿಪ್ಪಾ ನಾಯ್ಕ ಎಲ್.ಗಂಗಾಧರ ಬಾರಾಟಕ್ಕೆ, ಪರಶುರಾಮ ಬೈಲಪ್ಪನವರ, ಗಣೇಶ ಪಾಟೀಲ, ಅಂದಯ್ಯ ಅರವಟಗಿಮಠ, ಭಾಗ್ಯಶ್ರೀ ಹುರಕಡ್ಲಿ, ಶೈಲಜಾ ಕಪ್ಪರದ, ಪದ್ಮಾ ಕಬಾಡಿ, ರಶ್ಮಿ ಅಂಗಡಿ, ಎಸ್.ವಿ.ಗುತ್ತಿ, ನಿರ್ಮಲಾ ತರವಾಡೆ, ವಿಜಯಲಕ್ಸ್ಮಿ ಅಸುಂಡಿ, ಅಜಿತ ಘೋರ್ಪಡೆ, ಮೌನೇಶ ಬಡಿಗೇರ, ವಿಶ್ವನಾಥ ಕಮ್ಮಾರ, ಎನ್.ಎಚ್. ಹಿರೇಸಕ್ಕರಗೌಡರ, ಎಚ್.ಟಿ. ಸಂಜಿವಸ್ವಾಮಿ, ಕೆ.ಎಸ್. ಗುಗ್ಗರಿ, ಡಾ. ಅಶೋಕ ಮತ್ತಿಗಟ್ಟಿ, ಡಾ. ಎಂ.ಎ.ಮತ್ತಿಗಟ್ಟಿ, ಬಸವರಾಜ ನೇಲಜೇರಿ, ಅಕ್ಕಮ್ಮ ಪಾರ್ವತಿಮಠ, ಉಮಾ ಪಾರ್ವತಿಮಠ, ಶಶಿಕಲಾ ಸಿಂಧೂರ, ರಾಜಶೇಖರ ಕರಡಿ. ಡಾ. ರಾಜೇಂದ್ರ ಗಡಾದ, ಬಿ.ಎಲ್. ಚವ್ಹಾಣ, ಸಿದ್ಧಲಿಂಗೇಶ ಸಜ್ಜನಶೆಟ್ಟರ, ಬಸವರಾಜ ಮನಗೂಳಿ. ಬಿ.ಎಸ್. ಬಣಕಾರ, ಮಧುಸ್ವಾಮಿ ರಾಯಬಾಗ, ಶ್ರೀಕಾಂತ ಬಗಾಡೆ, ಬಿ.ಎಫ್. ಆನಂದರಭಾವಿ, ಶೇಕಣ್ಣ ಕಳಸಾಪೂರಶೆಟ್ಟರ ಮೊದಲಾದವರು ಉಪಸ್ಥಿತರಿದ್ದರು.