ಚಿಕ್ಕಮಗಳೂರುಜಾನಪದ ಸೊಗಡು ನಾಡಿನ ಹೆಗ್ಗಳಿಕೆಗೆ ಪಾತ್ರವಾದ ಕಲೆಗಳು. ತೊಗಲುಗೊಂಬೆ, ವೀರಗಾಸೆ ಹಾಗೂ ಡೊಳ್ಳು ಕುಣಿತ ತಂಡಗಳಿಗೆ ಆಧುನಿಕ ಜಗತ್ತಿನಲ್ಲಿ ಹೆಚ್ಚು ಪ್ರೋತ್ಸಾಹಿಸಬೇಕು ಎಂದು ಆಶ್ರಯ ಪೌಂಢೇಷನ್ ಸಂಸ್ಥಾಪಕಿ ಡಾ.ವರ್ಷ ಹೇಳಿದರು.
ಕೋಟೆ ಅಗ್ರಹಾರ ಜಾನಪದ ಪರಿಷತ್ತು ಆಯೋಜಿಸಿದ್ಧ ಜಾನಪದ ಕಲಾತಂಡಗಳಿಗೆ ಅಭಿನಂದನಾ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಜಾನಪದ ಸೊಗಡು ನಾಡಿನ ಹೆಗ್ಗಳಿಕೆಗೆ ಪಾತ್ರವಾದ ಕಲೆಗಳು. ತೊಗಲುಗೊಂಬೆ, ವೀರಗಾಸೆ ಹಾಗೂ ಡೊಳ್ಳು ಕುಣಿತ ತಂಡಗಳಿಗೆ ಆಧುನಿಕ ಜಗತ್ತಿನಲ್ಲಿ ಹೆಚ್ಚು ಪ್ರೋತ್ಸಾಹಿಸಬೇಕು ಎಂದು ಆಶ್ರಯ ಪೌಂಢೇಷನ್ ಸಂಸ್ಥಾಪಕಿ ಡಾ.ವರ್ಷ ಹೇಳಿದರು.ನಗರದ ಕೋಟೆ ಅಗ್ರಹಾರ ಸಮೀಪ ಮಂಗಳವಾರ ಸಂಜೆ ಜಾನಪದ ಪರಿಷತ್ತು ತಾಲೂಕು ಘಟಕ ದಿಂದ ಆಯೋಜಿಸಿದ್ದ ಜಾನಪದ ಕಲಾತಂಡಗಳಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಧುನಿಕತೆ ಭರದಲ್ಲಿ ಯುವಜನತೆ ಅರ್ಥವಿಲ್ಲದ ಸಿನಿಮಾ ಗೀತೆಗಳಿಗೆ ಮಾರು ಹೋಗುತ್ತಿದ್ದಾರೆ. ಪೂರ್ವಿಕರ ಕಟ್ಟಿಬೆಳೆಸಿದ ಜಾನಪದದಲ್ಲಿ ಜೀವನದ ಸಂತಸ, ಬದುಕು ಹಾಗೂ ಬಾಂಧವ್ಯವನ್ನು ಎಳೆ ಎಳೆಯಾಗಿ ತೆರೆದಿಟ್ಟಿವೆ. ಈ ಜಾನಪದ ಕಲೆಗೆ ಮನ್ನಣೆ ನೀಡಿ, ಅಪ್ಪಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದರು.ಜಿಲ್ಲೆಯಲ್ಲಿ ಜಾನಪದ ಕಲೆ ಪ್ರತಿಬಿಂಬಿಸುವ ಕಲಾತಂಡ, ಕಲಾವಿದರಿರುವುದು ಹೆಮ್ಮೆಯ ಸಂಗತಿ. ಮುಂದಿನ ಪೀಳಿಗೆಗೆ ಈ ಸಂಸ್ಕೃತಿ ಕೊಂಡೊಯ್ಯಬೇಕು. ಆ ನಿಟ್ಟಿನಲ್ಲಿ ಪಾಲಕರು ಬಾಲ್ಯದಿಂದಲೇ ಮಕ್ಕಳಿಗೆ ಜಾನಪದ ಹಿನ್ನೆಲೆ ಪರಿಚಯಿಸಬೇಕು ಎಂದು ಸಲಹೆ ಮಾಡಿದರು.ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಸಚಿನ್ಸಿಂಗ್ ಮಾತನಾಡಿ, ಮೊನ್ನೆ ನಡೆದ ಜಾನಪದ ಸಂಭ್ರಮದಲ್ಲಿ ಅನೇಕ ಕಲಾತಂಡಗಳು ಫಲಾಪೇಕ್ಷೆಯಿಲ್ಲದೇ ಭಾಗವಹಿಸಿ ಪ್ರದರ್ಶನ ನೀಡಿತ್ತು. ಆ ತಂಡಗಳಿಗೆ ಗೌರವಿಸುವ ಸಲುವಾಗಿ ಅಭಿನಂದನಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.ಉಪನ್ಯಾಸಕ ನಂಜೇಶ್ ಬೆಣ್ಣೂರು. ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಕಸಾಪ ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾ ನಂದ್, ಕಜಾಪ ಪದಾಧಿಕಾರಿಗಳಾ ದ ವಿಜಯ್, ದೇವರಾಜ್, ಶೈಲಾ ಬಸವರಾಜ್ ಮತ್ತಿತರಿದ್ದರು.24 ಸಿಕೆಎಂ5ನಗರದ ಕೋಟೆ ಅಗ್ರಹಾರ ಸಮೀಪ ಮಂಗಳವಾರ ಸಂಜೆ ಜಾನಪದ ಪರಿಷತ್ತು ತಾಲ್ಲೂಕು ಘಟಕ ದಿಂದ ಆಯೋಜಿಸಿದ್ಧ ಜಾನಪದ ಕಲಾತಂಡಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಡಾ|| ವರ್ಷ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.