ಯುವ ಪ್ರತಿಭೆಗಳನ್ನು ಗುರುತಿಸಿ ಪುರಸ್ಕಾರ ನೀಡಿ ಸನ್ಮಾನಿಸಿ, ಗೌರವಿಸುವುದರಿಂದ ಅವರಲ್ಲಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಯುವ ಧುರೀಣ ರವೀಂದ್ರ ಜಿಂಡ್ರಾಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಯಮಕನಮರಡಿ
ಯುವ ಪ್ರತಿಭೆಗಳನ್ನು ಗುರುತಿಸಿ ಪುರಸ್ಕಾರ ನೀಡಿ ಸನ್ಮಾನಿಸಿ, ಗೌರವಿಸುವುದರಿಂದ ಅವರಲ್ಲಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಯುವ ಧುರೀಣ ರವೀಂದ್ರ ಜಿಂಡ್ರಾಳಿ ಹೇಳಿದರು.ಇಂದಿರಾ ನಗರದಲ್ಲಿ ನಡೆದ ಪ್ರಿಯದರ್ಶನ ಗಣೇಶ ಉತ್ಸವದ 36ನೇ ವರ್ಷದ ಸಂಭ್ರಮ ಆಚರಣೆಯ ನಿಮಿತ್ತ ಹಮ್ಮಿಕೊಂಡಿದ್ದ ಯುವ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಸಿ ಮಾತನಾಡಿದ ಅವರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯವಾದದು ಎಂದರು.ಈ ವೇಳೆಯಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ಜೋಮಲಿಂಗ ಪಟೋಳಿ, ಹುಕ್ಕೇರಿ ತಾ.ಪಂ ಮಾಜಿ ಅಧ್ಯಕ್ಷ ದಸ್ತಗೀರ ಬಸ್ಸಾಪುರಿ, ಹಿರಿಯ ಕಾಂಗ್ರೆಸ್ ಮುಖಂಡ ಹಣಮಂತ ಗಾಡಿವಡ್ಡರ, ಪಾಂಡುಗಾಡಿ ವಡ್ಡರ, ಅಶೋಕ ಸಾಳೆ, ಚನ್ನಪ್ಪ ಗಾಡಿವಡ್ಡರ, ಶೆಟ್ಟಪ್ಪ ಶಿರಹಟ್ಟಿ, ಬಸವರಾಜ ಶಿಂಧೆ, ಗಣಪತಿ ಗಾಡಿವಡ್ಡರ, ಅಶೋಕ ಗಾಡಿವಡ್ಡರ, ಸಂತೋಷ ನಾಯಕ, ಬಸವರಾಜ ಕೆಸರೋರಿ, ಉಪಸ್ಥಿತರಿದ್ದರು. ಮಾಜಿ ಸೈನಿಕರಿಗೆ ದಾನಿಗಳಿಗೆ ಯುವ ಪ್ರತಿಭೆಗಳಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕ್ರೀಡಾಪಟುಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು. ಆರಂಭದಲ್ಲಿ ಅರವಿಂದ ಕಾಳಿಸಿಂಗೆ, ಗಣೇಶ ಸ್ತುತಿ ಹಾಡಿದರು. ಉಪನ್ಯಾಸಕ ಎಸ್.ಆರ್.ತಬರಿ, ಜಾನಪದ ಕಲಾವಿದ ಗೋಪಾಲ ಚಿಪಣಿ, ಪ್ರಿಯದರ್ಶನ ಗಣೇಶ ಉತ್ಸವ ಸಂಘದ ಅಧ್ಯಕ್ಷ ಮಂಜುನಾಥ ಪಾತ್ರೋಟ, ಉಪಾಧ್ಯಕ್ಷ ಸಂತೋಷ ಹತ್ತರಗಿ, ಕಾರ್ಯದರ್ಶಿ ಅರುಣ ಪಾತ್ರೋಟ, ಖಜಾಂಚಿ ಶಶಿಕುಮಾರ ಶಿರಹಟ್ಟಿ, ಉಪಕಾರ್ಯದರ್ಶಿ ಗುರುರಾಜ ಭೋವಿವಡ್ಡರ, ಸದಸ್ಯರಾದ ಶಶಿಕಾಂತ ಗಾಡಿವಡ್ಡರ, ಶ್ರೀಧರ ಭೋವಿವಡ್ಡರ, ರವಿ ಗಾಡಿವಡ್ಡರ, ಅಮರ ಗಾಡಿವಡ್ಡರ, ಗೋಪಿ ಪಾತ್ರೋಟ, ಲಖನ ಪಾತ್ರೋಟ, ಮಂಜುನಾಥ ವಡ್ಡರ ಇದ್ದರು.ಇಂದಿರಾ ನಗರ ಗ್ರಾಮದ ಸಮಸ್ತ ಗ್ರಾಮಸ್ಥರು ಪಾಲ್ಗೊಂಡಿದ್ದರು. ದೇಶದ ರಕ್ಷಣೆ ಮಾಡುತ್ತಿರುವ ಸೈನಿಕ, ಅನ್ನ ನೀಡುತ್ತಿರುವ ರೈತ ಈ ದೇಶದ ಎರಡು ಕಣ್ಣುಗಳು ರೈತರು ಮತ್ತು ಸೈನಿಕರು ಇವರ ದೇಶ ಸೇವೆ ಎಂದಿಗೂ ಮರೆಯಬಾರದು. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸಚಿವ ಸತೀಶ ಜಾರಕಿಹೊಳಿಯವರು ಇಂದಿರಾನಗರದ ಹುಲಿಗೆಮ್ಮಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ₹10 ಲಕ್ಷ ಮಂಜೂರು ಮಾಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.