ಕೆಆರ್‌ಎಸ್‌ನಲ್ಲಿ ಕಾವೇರಿ ನೀರಾವರಿ ನಿಗಮದ ಜಾಗ ಖಾಸಗಿ ವ್ಯಕ್ತಿಯಿಂದ ಒತ್ತುವರಿ

KannadaprabhaNewsNetwork |  
Published : Oct 12, 2025, 01:00 AM IST
11ಕೆಎಂಎನ್ ಡಿ22 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ ಕಾವೇರಿ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕಚೇರಿ ಮುಂಭಾಗ ಖಾಸಗಿ ವ್ಯಕ್ತಿ ಒತ್ತುವರಿ ಮಾಡಿ ನಿರ್ಮಿಸಿದ್ದ ವಸತಿ ಗೃಹವನ್ನು ನಿಗಮದ ಅಧಿಕಾರಿಗಳು ಜೆಸಿಬಿ ಮೂಲಕ ತೆರವು ಮಾಡಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕೆಆರ್‌ಎಸ್‌ನ ಕಾವೇರಿ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕಚೇರಿ ಮುಂಭಾಗ ಖಾಸಗಿ ವ್ಯಕ್ತಿ ಒತ್ತುವರಿ ಮಾಡಿ ನಿರ್ಮಿಸಿದ್ದ ವಸತಿ ಗೃಹವನ್ನು ನಿಗಮದ ಅಧಿಕಾರಿಗಳು ಜೆಸಿಬಿ ಮೂಲಕ ತೆರವು ಮಾಡಿದರು.

ಗ್ರಾಮದ ಸರ್ವೇ ನಂ 291ರಲ್ಲಿ 4 ಎಕರೆ ಜಾಗವನ್ನು ಹಲವು ತಿಂಗಳಿಂದ ಖಾಸಗಿ ವ್ಯಕ್ತಿ ತನಗೆ ಸೇರಿದ ಜಾಗ ಎಂದು ಮಾಜಿ ಸಂಸದ ಅಂಬರೀಷ್ ಅನುದಾನದಲ್ಲಿ ಪ್ರಾರಂಭಿಸಿದ್ದ ಸಮುದಾಯ ಭವನ ಸೇರಿದಂತೆ ನಿಗಮದ ಎರಡು ವಸತಿ ಗೃಹಗಳು, ಹಳೆಯ ನೌಕರರ ಹಾಜರಾತಿ ಕಟ್ಟಡ ಸೇರಿದಂತೆ ಸುಮಾರು ಕೋಟ್ಯಂತರ ರು. ಬೆಲೆ ಬಾಳುವ 4 ಎಕರೆ ಜಾಗವನ್ನು ವಶಕ್ಕೆ ಪಡೆದು ತೆಂಗಿನ ಗಿಡಗಳನ್ನು ನೆಟ್ಟು ಅಕ್ರಮ ಕಟ್ಟಡ ನಿರ್ಮಿಸಲು ಪ್ರಾರಂಭಿಸಿದ್ದರು.

ಶನಿವಾರ ಬೆಳಗ್ಗೆ ಏಕಾಏಕಿ ಕಾರ್ಯಚರಣೆ ನಡೆಸಿದ ಕಾವೇರಿ ನೀರಾವರಿ ನಿಗಮ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಹಾಯಕ ಅಭಿಯಂತರರು ಗಿಡಗಳು ಸೇರಿದಂತೆ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಯಿತು.

ಇದಲ್ಲದೇ, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಕಚೇರಿ ಮುಂಭಾಗ ಮತ್ತೋರ್ವ ಖಾಸಗಿ ವ್ಯಕ್ತಿ ತನ್ನ ರಾಜಕೀಯ ಪ್ರಭಾವ ಬಳಸಿ ನಿಗಮ ಅರ್ಧ ಎಕರೆ ಜಾಗದಲ್ಲಿ ತೆಂಗಿನ ಸಸಿ ನೆಟ್ಟು, ಅಂಗಡಿ ನಿರ್ಮಿಸಿಕೊಂಡು ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಸಹ ಜೆಸಿಬಿ ಮತ್ತು ಸಿಬ್ಬಂದಿಯನ್ನು ಬಳಸಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ನಿಗಮಕ್ಕೆ ಸೇರಿದ ಜಾಗಗಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮ ದಾಖಲಾತಿ ಇಟ್ಟುಕೊಂಡು ಒತ್ತುವರಿ ಮಾಡಿಕೊಂಡಿದ್ದರು. ಈ ಕುರಿತು ಸ್ಥಳೀಯ ಶಾಸಕರು, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ನಮಗೆ ಸೇರಿದ ಜಾಗದ ಒತ್ತುವರಿ ತೆರವು ಮಾಡಿ ವಶಪಡಿಕೊಳ್ಳಲಾಗಿದೆ. ಇದೇ ರೀತಿ ಖಾಸಗಿ ವ್ಯಕ್ತಿಗಳು ಜಾಗ ಒತ್ತುವರಿ ಮಾಡಿದ್ದರೆ ಮುಂದೆಯೂ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಕೆಆರ್‌ಎಸ್‌ನ ಕಾರ್ಯಪಾಲಕ ಆಭಿಯಂತರ ಜಯಂತ್ ತಿಳಿಸಿದರು.

PREV

Recommended Stories

ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ