ಅತಿಕ್ರಮಣ ಸಕ್ರಮಕ್ಕೆ 3 ತಲೆಮಾರಿನ ಗರಿಷ್ಟ ದಾಖಲೆಗೆ ಒತ್ತಾಯಿಸತಕ್ಕದ್ದಲ್ಲ: ರವೀಂದ್ರ ನಾಯ್ಕ

KannadaprabhaNewsNetwork |  
Published : Dec 05, 2025, 01:15 AM IST
ಪೊಟೋ ಪೈಲ್ : 3ಬಿಕೆಲ್ 1,2 | Kannada Prabha

ಸಾರಾಂಶ

ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯಿಂದ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾಕ್ಕೆ ತಹಸೀಲ್ದಾರರಿಗೆ ಮನವಿ ಸಲ್ಲಿಸುವುದರ ಮೂಲಕ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಚಾಲನೆ ನೀಡಿದರು.

ಭಟ್ಕಳದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಭಟ್ಕಳ

ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯಿಂದ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾಕ್ಕೆ ತಹಸೀಲ್ದಾರರಿಗೆ ಮನವಿ ಸಲ್ಲಿಸುವುದರ ಮೂಲಕ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಚಾಲನೆ ನೀಡಿದರು.

ಅರಣ್ಯವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಮೂರು ತಲೆಮಾರಿನ ಗರಿಷ್ಟ ವಯಕ್ತಿಕ ದಾಖಲೆಗೆ ಒತ್ತಾಯಿಸತಕ್ಕದ್ದಲ್ಲ. ಇಂತಹ ಪ್ರಕ್ರಿಯೆ ಕಾನೂನಿಗೆ ವ್ಯತಿರಿಕ್ತವಾಗಿದೆ. ಸೆಪ್ಟೆಂಬರ್ ೨೦೧೨ರಲ್ಲಿಯೇ ಗರಿಷ್ಟ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂದು ಕಾಯ್ದೆ ತಿದ್ದಪಡಿಯಾಗಿದ್ದು, ಇದಕ್ಕೆ ಪೂರಕವಾಗಿ ಗುಜಾರತ್ ಹೈಕೋರ್ಟ್‌ ಸಹಿತ ದಾಖಲೆಯ ಸಾಕ್ಷ್ಯ ಒತ್ತಾಯಿಸಲು ಅವಕಾಶವಿಲ್ಲವೆಂದು ಉಲ್ಲೇಖಿಸಿದೆ. ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯದ ಆದೇಶದಲ್ಲಿ ಮಂಜೂರಿ ಪ್ರಕ್ರಿಯೆಯಲ್ಲಿ ದಾಖಲೆಗಳಿಗೆ ಆಗ್ರಹಿಸಿ ಅರ್ಜಿ ತಿರಸ್ಕರಿಸುವುದು ಸಮಂಜಸವಲ್ಲ ಎಂದು ತಿಳಿಸಿದೆ. ಅಲ್ಲದೇ, ಮೂರು ತಲೆಮಾರಿನ ಸಾಗುವಳಿ ಕ್ಷೇತ್ರದಲ್ಲಿನ ಜನವಸತಿ ಪ್ರದೇಶವೆಂದು ಪುಷ್ಠೀಕರಿಸುವುದು ಅವಶ್ಯವೆಂದು ಸ್ಪಷ್ಟಪಡಿಸಿದೆ ಎಂದು ಹೇಳಿದರು.

ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ ಪರಿಶೀಲಿಸಲಾಗಿರುವುದರಿಂದ ರಾಜ್ಯದಲ್ಲಿ ಶೇ.೮೮.೯೦ ಅರ್ಜಿಗಳು ಹಾಗೂ ಜಿಲ್ಲೆಯಲ್ಲಿ ಶೇ ೮೩.೫೦ರಷ್ಟು ಅರ್ಜಿ ತಿರಸ್ಕರಿಸ್ಪಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಅರಣ್ಯವಾಸಿಗಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಡೆಯಲಿದೆ. ಸರ್ಕಾರ ಇನ್ನಾದರೂ ಅರಣ್ಯವಾಸಿಗಳ ಪರ ನಿಲ್ಲಬೇಕು ಎಂದು ಒತ್ತಾಯಿಸಿದರು.

ಅರಣ್ಯವಾಸಿಗಳಲ್ಲಿ ಕಾನೂನು ತಿಳುವಳಿಕೆ ನೀಡುವ ಉದ್ದೇಶದಿಂದ ಜಿಲ್ಲಾದ್ಯಂತ ೧೩೨ ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಜಾಗ್ರತ ಜಾಥಾಕ್ಕೆ ಸಂಬಂಧಿಸಿ ಕಾರ್ಯಕ್ರಮ ಸಂಘಟಿಸಲು ನಿರ್ಧರಿಸಲಾಗಿದೆ. ಅರಣ್ಯವಾಸಿಗಳಲ್ಲಿ ಕಾನೂನು ಜಾಗೃತಿ ಮೂಡಿಸುವ ಅಗತ್ಯವಿದೆ. ನಮ್ಮ ಕಾನೂನು ಜಾಗೃತಿ ಜಾಥಾಕ್ಕೆ ಜಿಲ್ಲಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದ ಅವರು, ಅರಣ್ಯವಾಸಿಗಳ ಕಾನೂನು ಜಾಗೃತಿಯ ಅಂಗವಾಗಿ ಗರಿಷ್ಟ ದಾಖಲೆಗಳ ಒತ್ತಾಯಿಸುವಿಕೆಗೆ ಅವಕಾಶವಿಲ್ಲದ ಕುರಿತು ಮತ್ತು ಸಾಗುವಳಿ ಪತ್ರಕ್ಕೆ ಸಂಬಂಧಿಸಿ ಅರಣ್ಯವಾಸಿಗಳು ಸಲ್ಲಿಸಬೇಕಾದ ೯ ದಾಖಲೆಗಳ ಪಟ್ಟಿಗಳನ್ನು ಒಳಗೊಂಡಿರುವ ಮೂರು ಲಕ್ಷ ಕರಪತ್ರ ವಿತರಿಸಲಾಗುವುದು ಎಂದರು.

ಜಿಲ್ಲಾ ಸಂಚಾಲಕ ಪಾಂಡುರಂಗ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಇನ್ನೋರ್ವ ಸಂಚಾಲಕ ದೇವರಾಜ ಗೊಂಡ ವಂದಿಸಿದರು. ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ರಪೀಕ್, ನವೀನ್ ಜೈನ್, ಈಶ್ವರ ನಾಯ್ಕ ಹಾಡವಳ್ಳಿ, ಚಂದ್ರ ನಾಯ್ಕ ಬೈರೋಳೆ,ರತ್ನ ನಾಯ್ಕ ರಾಘವೇಂದ್ರ ಮರಾಠಿ, ವಿಮಲಾ ಮೋಗೇರ, ಕವಿತಾ ಮಂಜುನಾಥ ಗೊಂಡ ನಾಗಮ್ಮ ಮೋಗೇರ, ದತ್ತ ನಾಯ್ಕ ಹಸವಳ್ಳಿ, ಸಬೀರ್, ಮೋಯೈದ್ದೀನ್, ನತ್ತಾರ, ಜಮಾವೀರ್ ಜಾಬೀರ್, ಶ್ರೀಧರ ನಾಯ್ಕ ಸೇರಿ ನೂರಾರು ಅರಣ್ಯವಾಸಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಕುರ್ಚಿಗೆ ಪೈಪೋಟಿ, ರೈತರ ಸಮಸ್ಯೆ ಗೌಣ: ವಿಜಯೇಂದ್ರ
ಜನ್ಮ ಸಾರ್ಥಕತೆಗೆ ಗುರುವಿನ ಅನುಗ್ರಹ ಅವಶ್ಯ