ಮುಧೋಳದಲ್ಲಿ ಮುಗಿಯದ ಸಂಚಾರಿ ಗೋಳು!

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ಮುಧೋಳ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಾಗಿವೆ. ಹೀಗಾಗಿ ನಿತ್ಯ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ಅಧಿಕವಾಗಿ ಸಂಚಾರ ಮಾಡುತ್ತಿವೆ. ಈ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ನಿಧಾನವಾಗಿ ಸಂಚರಿಸುವ ಕಾರಣದಿಂದ ಉಳಿದ ವಾಹನಗಳು ಸಂಚಾರ ದುಸ್ತರವಾಗಿದೆ. ಇದಷ್ಟೇ ಅಲ್ಲದೇ ಈ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿರುವ ಕಾರಣಕ್ಕೆ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ಇದಷ್ಟೇ ಅಲ್ಲದೇ ಅಪಘಾತಗಳು ಹೆಚ್ಚಾಗುತ್ತಿದೆ.

ವಿಶ್ವನಾಥ ಮುನವಳ್ಳಿಕನ್ನಡಪ್ರಭ ವಾರ್ತೆ ಮುಧೋಳರನ್ನ ನಾಡು ಮುಧೋಳದ ಜನಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಸಾಗಿದೆ. ಇದರೊಟ್ಟಿಗೆ ಜನದಟ್ಟಣೆ, ವಾಹನಗಳ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದೆ. ಇದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿ ನಿತ್ಯ ಪಾದಚಾರಿಗಳು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 31 ವಾರ್ಡ್, 30 ನಗರಸಬೆ ಸದಸ್ಯರು ಇದಷ್ಟೇ ಅಲ್ಲದೇ 60,000ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ ಮುಧೋಳ. ಇದರ ಜತೆಗೆ ನಗರ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಾ ಸಾಗಿರುವುದರಿಂದ ವಸತಿ ಸಮಸ್ಯೆ, ವಾಯು ಮಾಲಿನ್ಯ ಸೇರಿದಂತೆ ಅನೇಕ ಸಮಸ್ಯೆಗಳು ನಗರವನ್ನು ಕಾಡಲಾರಂಭಿಸಿದೆ.ಮುಧೋಳ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚರಿಸಬೇಕಾದರೆ ಪ್ರಾಣವನ್ನು ಒತ್ತೆ ಇಡಬೇಕಿದೆ. ಲೋಕಾಪೂರ ರಸ್ತೆಯ ರನ್ನ ಕ್ರೀಡಾಂಗಣದಿಂದ ಜಮಖಂಡಿ ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ವರೆಗೆ ಹಾದು ಹೋಗಿರುವ ರಾಜ್ಯ ಹೆದ್ದಾರಿ ಮೇಲೆ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತವೆ. ಇಕ್ಕಟ್ಟಾದ ಈ ರಸ್ತೆಯನ್ನು ದಾಟಲು ವಿದ್ಯಾರ್ಥಿಗಳು, ಮಹಿಳೆಯರು, ವಯೋ ವೃದ್ಧರ ಗೋಳು ಹೇಳತೀರದು. ಕಬ್ಬಿನ ಟ್ರ್ಯಾಕ್ಟರ್ಗಳ ಹಾವಳಿ:ಮುಧೋಳ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಾಗಿವೆ. ಹೀಗಾಗಿ ನಿತ್ಯ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳು ಅಧಿಕವಾಗಿ ಸಂಚಾರ ಮಾಡುತ್ತಿವೆ. ಈ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳು ನಿಧಾನವಾಗಿ ಸಂಚರಿಸುವ ಕಾರಣದಿಂದ ಉಳಿದ ವಾಹನಗಳು ಸಂಚಾರ ದುಸ್ತರವಾಗಿದೆ. ಇದಷ್ಟೇ ಅಲ್ಲದೇ ಈ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿರುವ ಕಾರಣಕ್ಕೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇದಷ್ಟೇ ಅಲ್ಲದೇ ಅಪಘಾತಗಳು ಹೆಚ್ಚಾಗುತ್ತಿದೆ.ಸದ್ಬಳಕೆ ಆಗದ ಬೈಪಾಸ್ ರಸ್ತೆ:ಟ್ರಾಫಿಕ್ ತೊಂದರೆ ನಿವಾರಣೆಗಾಗಿ ಸರ್ಕಾರ ಕಳೆದ ವರ್ಷ ಬೈಪಾಸ್ ರಸ್ತೆ ನಿರ್ಮಿಸಿದೆ. ಆದಾಗ್ಯೂ ನಗರದ ಮಧ್ಯ ಭಾಗದಲ್ಲಿಯೇ ಕಬ್ಬು ತುಂಬಿರುವ ವಾಹನಗಳು ಓಡಾಟ ಬಲು ಜೋರಾಗಿದೆ. ಬೈಪಾಸ್ ರಸ್ತೆಯಲ್ಲಿ ಕಬ್ಬು ತುಂಬಿರುವ ವಾಹನಗಳು ಏಕೆ ಓಡಾಟವಾಗುತ್ತಿಲ್ಲ, ಪೊಲೀಸರು ಏಕೆ ಸುಮ್ಮನೆ ಇದ್ದಾರೆ ಎಂಬುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಕೋಟ್ಯಂತರ ಹಣ ವೆಚ್ಚಮಾಡಿ ಬೈಪಾಸ್ ರಸ್ತೆ ನಿರ್ಮಿಸಿದರೂ ಬಳಕೆಗೆ ಬಾರದೇ ಇರುವುದು ಗಮನಿಸಿದರೆ ಸರ್ಕಾರದ ದುಡ್ಡು ಪೋಲು ಆದಂತೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು. ನಗರದ ಮಧ್ಯಭಾಗದಲ್ಲಿ ಓಡಾಡುವ ಬೃಹತ್ ಗಾತ್ರದ ವಾಹನಗಳನ್ನು ಬೈಪಾಸ್ ರಸ್ತೆಯಲ್ಲಿಯೇ ಓಡಿಸಿ ಅಪಘಾತವನ್ನು ತಡೆಯಬೇಕು. ಜೊತೆಗೆ ಟ್ರಾಫಿಕ್ ಸಮಸ್ಯೆಗೆ ಇತ್ಯರ್ಥ ಹಾಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.ಮೇಲ್ಸೇತುವೆ ನಿರ್ಮಿಸಿ:ಬಸ್ ನಿಲ್ದಾಣ ಪಕ್ಕದ ಬಸವೇಶ್ವರ ಸರ್ಕಲ್, ಉತ್ತೂರ ಗೇಟದ ಜಡಗಾಬಾಲಾ ಸರ್ಕಲ್, ಅಂಬೇಡ್ಕರ್ ಸರ್ಕಲ್, ಶಿವಾಜಿ ಸರ್ಕಲ್ ಹಾಗೂ ರನ್ನ ಸರ್ಕಲ್ಗಳಲ್ಲಿ ಬಹುತೇಕ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಇದಕ್ಕೆ ಮೂಲ ಕಾರಣ ರಸ್ತೆ ದಾಟಲು ಸಾಧ್ಯವಾಗದು. ಈ ಸ್ಥಳಗಳಲ್ಲಿ ಪಾದಚಾರಿಗಳ ಮೇಲ್ಸೇತುವೆ ನಿರ್ಮಿಸಿದರೆ ಒಳಿತು ಎಂಬ ಮಾತು ಕೇಳಿಬರುತ್ತಿದೆ.ಟ್ರಾಫಿಕ್ ಜಾಮ್ ಆಗುವ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನೇಮಕ ಮಾಡಿ ರಸ್ತೆ ಅಪಘಾತವನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಮುಂದಾಗಬೇಕು. ಇಲ್ಲದಿದ್ದರೆ ಮುಂದಾಗುವ ಅವಘಡಗಳಿಗೆ ಪೊಲೀಸ್ ಇಲಾಖೆ ನೇರ ಹೊಣೆ ಹೊರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯವರು ಎಚ್ಚೆತ್ತುಗೊಂಡು ಕಾರ್ಯಪ್ರವೃತ್ತರಾಗಬೇಕು.ಸಾರ್ವಜನಿಕರ ಸಹಕಾರದ ಕೊರತೆ:ರಸ್ತೆ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಅವರು ಸಾಕಷ್ಟು ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡಿದ್ದೇವೆ. ರಸ್ತೆ ಮಧ್ಯೆ ಭಾಗದಲ್ಲಿ ಕಬ್ಬಿನ ಗ್ರೇಡ್ ನಿರ್ಮಿಸಿ ಮುಕ್ತ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಆಯಕಟ್ಟಿನ ಸ್ಥಳದಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿ ಅಪಘಾತ ಆಗದಂತೆ ನೋಡಿ ಕೊಳ್ಳಲಾಗಿದೆ. ಆದಾಗ್ಯೂ ಸಾರ್ವಜನಿಕರ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ ಎಂದು ಪೊಲೀಸ್ ಇಲಾಖೆಯವರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.-------ಬಾಕ್ಸ್ಟ್ರಾಫಿಕ್ ಪೊಲೀಸ್ ಠಾಣೆ ಅವಶ್ಯಕ60,000 ಜನಸಂಖ್ಯೆ ಹೊಂದಿರುವ ಮುಧೋಳ ನಗರಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಅವಶ್ಯಕವಾಗಿದೆ. ತೀವ್ರಗತಿಯಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ಮುಧೋಳ ಸಹಿತ ಒಂದಾಗಿದೆ. ಹೀಗಾಗಿ ನಿತ್ಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಧೋಳ ನಗರಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಅವಶ್ಯಕವಾಗಿದೆ. ಇನ್ನೂ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಮುಧೋಳ ಮತಕ್ಷೇತ್ರದಿಂದ ಒಬ್ಬರು ಸಚಿವರು ಆಗುವುದು ನಿಶ್ಚಿತ. ಆದರೂ ಬೆಳೆಯುತ್ತಿರುವ ಮುಧೋಳ ನಗರಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ತರದೇ ಇರುವುದು ಇಲ್ಲಿಯ ಜನರ ಆಕ್ರೋಶಕ್ಕೂ ಕಾರಣವಾಗಿದೆ. --ಕೋಟ್-ಮುಧೋಳ ಪಟ್ಟಣದ ಹೃದಯ ಭಾಗದಲ್ಲಿ ಹಾಯ್ದು ಹೋಗಿರುವ ರಾಜ್ಯ ರಸ್ತೆಯು ಇಕ್ಕಟ್ಟಾಗಿರುವುದರಿಂದ ಮುಕ್ತ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇದರಿಂದ ಆಗಾಗ್ಗೆ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲಿವೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿರುವದರಿಂದ ಈಗ ಅಪಘಾತಗಳ ಸಂಖ್ಯೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಲ್ಲದೇ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕ್ರಮವನ್ನು ಕೈಗೊಳ್ಳಲಾಗಿದೆ. ಆಯ ಕಟ್ಟಿನ ಸ್ಥಳದಲ್ಲಿ ಪೊಲೀಸ್ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ.-ಮಹಾದೇವ ಶಿರಹಟ್ಟಿ ಸಿಪಿಐ ಮುಧೋಳ -------------ಮುಧೋಳ ತಾಲೂಕಿನ ಸುತ್ತ-ಮುತ್ತ ಸಾಕಷ್ಟು ಉದ್ಯಮಿಗಳು ಇರುವುದರಿಂದ ವಾಹನ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ಕಳೆದ ವರ್ಷ ಬೈಪಾಸ್ ನಿರ್ಮಾಣವಾದರೂ ಕಬ್ಬು ತುಂಬಿರುವ ಹಾಗೂ ಬೃಹತ್ ಗಾತ್ರದ ವಾಹನಗಳು ನಗರದ ಮಧ್ಯಭಾಗದ ರಸ್ತೆಯಲ್ಲಿಯೇ ಓಡಾಡುತ್ತಿದ್ದರೂ ಪೊಲೀಸ್ ಇಲಾಖೆ ಏಕೆ ಮೌನ ತಾಳಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ. ಪಾದಚಾರಿಗಳ ಮೇಲು ಸೇತುವೆ ಹಾಗೂ ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನೇಮಿಸಬೇಕು.-ಪ್ರಕಾಶ ರಾಮತೀರ್ಥ ಗಣ್ಯ ವರ್ತಕರು

Share this article