ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಜಾಥಾಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಚಾಲನೆ ನೀಡಿದರು. ನಂತರ ಮಾತನಾಡಿ, ಇಂಧನ ಮುಗಿದು ಹೋಗುವ ಖನಿಜವಾಗಿದ್ದು, ಅದನ್ನು ಸುರಕ್ಷಿತವಾಗಿ ಬಳಸಿದಲ್ಲಿ ಮಾತ್ರ ನಮ್ಮ ಮುಂದಿನ ತಲೆಮಾರಿಗೂ ಉಳಿಸಬಹುದು. ಪರಿಸರಕ್ಕೆ ಪೂರಕವಾದ ಇಂಧನಗಳನ್ನು ಬಳಸಿದಲ್ಲಿ ಹವಾಮಾನಕ್ಕೆ ಹೆಚ್ಚಿನ ಅನುಕೂಲವಾಗುವುದು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿಗಳಿಂದ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಶಾಲಾ ಆವರಣದಿಂದ ಹೊರಟ ಜಾಥಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಈ ಸಂದರ್ಭ ಬಿಆರ್‌ಸಿ ಮಂಜೇಶ್, ಪ್ರೌಢಶಾಲಾ ಉಪ ಪ್ರಾಂಶುಪಾಲರಾದ ಹೇಮಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಯಶೋಧ, ಸಿಇಇಸಿಒ ಸಂಸ್ಥೆಯ ಹರೀಶ್, ಪ್ರೌಢಶಾಲಾ ಶಿಕ್ಷಕರಾದ ಬಿ. ವಿಜಯಕುಮಾರ್, ಶಶಿಧರ್, ಧನ್ಯ, ರಾಜರತ್ನ, ಬಸವರಾಜು, ವೆಂಕಟೇಶ್ ಹಾಗೂ ಆರಕ್ಷಕ ಸಿಬ್ಬಂದಿ ಇದ್ದರು.