ಎಂಜಿನಿಯರಿಂಗ್ ವಿದ್ಯಾಭ್ಯಾಸ ಜೀವನ ನೋಡುವ ದೃಷ್ಟಿಕೋನ ಬದಲಿಸಬಲ್ಲದು: ಬಸವರಾಜ

KannadaprabhaNewsNetwork |  
Published : Jun 01, 2024, 01:45 AM IST
ಕ್ಯಾಪ್ಷನಃ31ಕೆಡಿವಿಜಿ32ಃದಾವಣಗೆರೆ ಜಿಎಂಐಟಿ ಕಾಲೇಜಿನಲ್ಲಿಂದು ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಸಮಾರೋಪ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಎಂಜಿನಿಯರಿಂಗ್ ವಿದ್ಯಾಭ್ಯಾಸ ಜೀವನವನ್ನು ನೋಡುವ ದೃಷ್ಟಿಕೋನ ಬದಲಾಗಿಸುತ್ತದೆ ಎಂದು ಕೂಡ್ಲಿಗಿ- ಕೊಟ್ಟೂರು ವಲಯ ಅಬಕಾರಿ ಇನ್‌ಸ್ಪೆಕ್ಟರ್‌ ಜಿ.ಸಿ.ಬಸವರಾಜ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಎಂಜಿನಿಯರಿಂಗ್ ವಿದ್ಯಾಭ್ಯಾಸ ಜೀವನವನ್ನು ನೋಡುವ ದೃಷ್ಟಿಕೋನ ಬದಲಾಗಿಸುತ್ತದೆ ಎಂದು ಕೂಡ್ಲಿಗಿ- ಕೊಟ್ಟೂರು ವಲಯ ಅಬಕಾರಿ ಇನ್‌ಸ್ಪೆಕ್ಟರ್‌ ಜಿ.ಸಿ.ಬಸವರಾಜ ಹೇಳಿದರು.

ನಗರದ ಜಿಎಂಐಟಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜೀವನವನ್ನು ನಿಮ್ಮ ಮನಸ್ಸಿಗೆ ಬಂದಂತೆ ಅನುಭವಿಸಿ, ಆದರೆ ವ್ಯಸನಗಳ ದಾಸರಾಗಬೇಡಿ. ನಾನೂ ಇದೇ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಹಳೆಯ ವಿದ್ಯಾರ್ಥಿಯಾಗಿದ್ದೆ ಎಂದು ನೆನಪುಗಳ ಹೊರಹಾಕಿದರು. ಎಂಜಿನಿಯರಿಂಗ್ ಪಠ್ಯವು ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯ ಎಲ್ಲ ಪರೀಕ್ಷೆಗಳಿಗೆ ಪೂರಕವಾಗಿದೆ ಎಂದರು.

ಪ್ರೊ. ಸಿ.ವಿ.ಶ್ರೀನಿವಾಸ ಮಾತನಾಡಿ, ಜಿಎಂಐಟಿ ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಗಳು ಅತಿ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಪದವಿ ಪಡೆದ ನಂತರ ಸರಿಯಾದ ಆಯ್ಕೆಯನ್ನು ಮಾಡಿಕೊಳ್ಳಲು ಎಂಜಿನಿಯರಿಂಗ್ ಪದವಿಯ ಉಪಯೋಗ ಬಳಸಿಕೊಳ್ಳಲು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ ಮಾತನಾಡಿ, ಶಿಸ್ತನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದು ಸಾಧನೆಗಳಿಗೆ ದಾರಿ. ಪದವಿಯು ಮನಸ್ಸನ್ನು ತೆರೆದುಕೊಳ್ಳುವ ರೀತಿ, ಅವಕಾಶಗಳಿಗೆ ತೆರೆದುಕೊಳ್ಳುವ ವಿಧಾನ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಎಸ್.ಬಸವರಾಜಪ್ಪ, ದಿಲೀಪ್ ಕುಮಾರ, ವಿದ್ಯಾರ್ಥಿ ಮುಖಂಡರಾದ ಮಹೇಶ ರೆಡ್ಡಿ, ಎ.ಎಂ. ಭೂಮಿಕ, ಸೃಜನ್, ಅಭಿಷೇಕ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ಎಲ್ಲ ಸೆಮಿಸ್ಟರ್‌ಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

- - - -31ಕೆಡಿವಿಜಿ32ಃ:

ದಾವಣಗೆರೆ ಜಿಎಂಐಟಿ ಕಾಲೇಜಿನಲ್ಲಿ ಶುಕ್ರವಾರ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಸಮಾರೋಪ ಸಮಾರಂಭವನ್ನು ಅಬಕಾರಿ ಇನ್‌ಸ್ಪೆಕ್ಟರ್‌ ಜಿ.ಸಿ.ಬಸವರಾಜ ಉದ್ಘಾಟಿಸಿದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’