ಅಭಿಯಂತರರು ನಾವಿನ್ಯ ತಂತ್ರಜ್ಞಾನ ಕೌಶಲ್ಯ ಅಳವಡಿಸಿಕೊಳ್ಳಲಿ

KannadaprabhaNewsNetwork |  
Published : Dec 18, 2025, 01:00 AM IST
17ಡಿಡಬ್ಲೂಡಿ2ಕೃಷಿ ವಿವಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ದಿಂದ ಆಯೋಜಿಸಿದ್ದ ‘ಜಲ ಸಂಕಲ್ಪ ಸಮಾವೇಶ ಹಾಗೂ ತರಬೇತಿ ಪಡೆದ ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರ ಸಮ್ಮೇಳನದ ಉದ್ಘಾಟನೆ.  | Kannada Prabha

ಸಾರಾಂಶ

ರಾಜ್ಯದ ಒಟ್ಟು ಬಜೆಟ್‌ನಲ್ಲಿ ಬಹುಪಾಲಿನ ಅನುದಾನದ ಕಾಮಗಾರಿಗಳನ್ನು ಇಲಾಖೆಯು ಕೈಗೆತ್ತಿಕೊಳ್ಳುತ್ತಿದೆ. ಹೀಗಾಗಿ ನೀರಿನ ಬಳಕೆ ಸಾಮರ್ಥ್ಯವನ್ನು ಹೆಚ್ಚಿಸುವ ಜತೆಗೆ ಜನರಿಗೆ ಕಾಮಗಾರಿಗಳ ಪ್ರಯೋಜನ ತಲುಪಿಲು ಶ್ರಮ ಪಡಬೇಕು.

ಧಾರವಾಡ:

ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರು ನಾವಿನ್ಯ ತಂತ್ರಜ್ಞಾನದ ಕೌಶಲ್ಯ ಬಳಸಿಕೊಳ್ಳುವ ಮೂಲಕ ಇಲಾಖೆಗೆ ಉತ್ಕೃಷ್ಟ ಸೇವೆ ನೀಡಬೇಕೆಂದು ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಹೇಳಿದರು.

ಇಲ್ಲಿಯ ಕೃಷಿ ವಿವಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ದಿಂದ ಆಯೋಜಿಸಿದ್ದ ‘ಜಲ ಸಂಕಲ್ಪ ಸಮಾವೇಶ ಹಾಗೂ ತರಬೇತಿ ಪಡೆದ ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರ ಸಮ್ಮೇಳನ ಉದ್ಘಾಟಿಸಿದ ಅವರು, ರಾಜ್ಯದ ಒಟ್ಟು ಬಜೆಟ್‌ನಲ್ಲಿ ಬಹುಪಾಲಿನ ಅನುದಾನದ ಕಾಮಗಾರಿಗಳನ್ನು ಇಲಾಖೆಯು ಕೈಗೆತ್ತಿಕೊಳ್ಳುತ್ತಿದೆ. ಹೀಗಾಗಿ ನೀರಿನ ಬಳಕೆ ಸಾಮರ್ಥ್ಯವನ್ನು ಹೆಚ್ಚಿಸುವ ಜತೆಗೆ ಜನರಿಗೆ ಕಾಮಗಾರಿಗಳ ಪ್ರಯೋಜನ ತಲುಪಿಲು ತಾವು ಶ್ರಮ ಪಡಬೇಕು ಎಂದರು.

ಜಲ ಸಂಪನ್ಮೂಲ ಇಲಾಖೆಯ ಭಾಗೀದಾರರಾದ ನೀರು ಬಳಕೆದಾರರು, ನೀರು ಬಳಕೆದಾರರ ಸಹಕಾರ ಸಂಘಗಳು, ಕಾಡಾ, ಕೃಷಿ, ವಾಲ್ಮಿ ಸಂಸ್ಥೆ ಮತ್ತು ಅಭಿಯಂತರರು ಸಹಯೋಗದಿಂದ ಕೆಲಸ ನಿರ್ವಹಿಸಬೇಕು. ಅಭಿಯಂತರರು ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಬೇಕು. ಕಾಮಗಾರಿಗಳ ಅಂದಾಜು ತಯಾರಿಸುವಾಗ ವೆಚ್ಚಗಳ ನೈಜ ಅಂದಾಜುಗಳನ್ನು ಸಿದ್ಧಪಡಿಸಲು ಅವಶ್ಯವಿರುವ ಮಾರ್ಗಸೂಚಿ ಹಾಗೂ ನಿಯಮಗಳನ್ನು ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುವುದು. ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಉದ್ದೇಶದಿಂದ ರಾಜ್ಯಮಟ್ಟದ ಮಹಾಮಂಡಳ ಸೃಜನೆ ಮಾಡಲಾಗುತ್ತಿದೆ. ಕಾಲುವೆಗಳಲ್ಲಿ ಅನಧಿಕೃತ ನೀರು ಎತ್ತುವುದನ್ನು ತಡೆಯಲು ಮತ್ತು ಸಮರ್ಥವಾಗಿ ನೀರು ನಿರ್ವಹಣೆಗೆ ಕರ್ನಾಟಕ ನೀರಾವರಿ ಕಾಯ್ದೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.

ಇಲಾಖೆಯಲ್ಲಿ ಅಭಿಯಂತರರು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕೆಂದ ಉಪ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ. ವಿಶ್ವನಾಥ ರೆಡ್ಡಿ, ಅಭಿಯಂತರರು ತರಬೇತಿಗಳಲ್ಲಿ ಪಡೆದ ಸಂದೇಶವನ್ನು ದಿನನಿತ್ಯದ ಕಾರ್ಯ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲಿ. ಇಲಾಖೆಯಲ್ಲಿ ಕ್ರಾಂತಿಕಾರಿ ಅಂಶಗಳನ್ನು ಜಾರಿಗೆ ತರಲು ನೀರಾವರಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದರಲ್ಲಿ ಎಂಜಿನಿಯರ್‌ಗಳಿಗೆ ಕಾನೂನು ಅಧಿಕಾರಗಳನ್ನು ನೀಡಲಾಗಿದೆ. ಸಮರ್ಥ ನೀರು ನಿರ್ವಹಣೆಗೆ ಅವಶ್ಯಕ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದರು.

ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರ ಕೆ. ಜಯಪ್ರಕಾಶ ಮಾತನಾಡಿ, ಪ್ರಸ್ತುತ ನೀರಿನ ಕೊರತೆಯಿಂದ ನೀರಿನ ಸಮರ್ಪಕ ನಿರ್ವಹಣೆ ಅವಶ್ಯಕತೆ ಇದೆ. ಅಭಿಯಂತರರಿಗೆ ನೀಡಲಾದ ಕಾನೂನು ಅಧಿಕಾರಗಳನ್ನು ಸಂದರ್ಭೊಚಿತವಾಗಿ ಬಳಕೆ ಮಾಡಬೇಕು. ರೈತ ಒಬ್ಬ ಜಾದುಗಾರನಿದ್ದಂತೆ. ಮಣ್ಣಿನಿಂದ ಆಹಾರ ಉತ್ಪಾದನೆ ಮಾಡುವ ವಿಜ್ಞಾನಿಯೂ ಆಗಿದ್ದಾನೆ. ರೈತನ ಬದುಕು ಹವಾಮಾನದೊಂದಿಗೆ ಜೂಜಾಟವಾಗಿದ್ದು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾನೆ. ಹೀಗಾಗಿ ಅಧಿಕಾರಿಗಳಿಗೆ ರೈತರನ್ನು ನೋಡುವ ಕಣ್ಣು ಮತ್ತು ಮಿಡಿಯುವ ಕರುಳಿರಬೇಕು ಎಂದರು.

ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಎಜಾಜ್ ಹುಸೇನ್, ವಾಲ್ಮಿ ನಿರ್ದೇಶಕ ಗಿರೀಶ ಮರಡ್ಡಿ ಮಾತನಾಡಿದರು. ಇದೇ ವೇಳೆ ವಾಲ್ಮಿ ಸಂಸ್ಥೆಯ ಪ್ರಕಟಣೆ ಬಿಡುಗಡೆ ಮಾಡಲಾಯಿತು. ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಅಧಿಕಾರಿಗಳಾದ ಕೃಷ್ಣಮೂರ್ತಿ ಕುಲಕರ್ಣಿ, ರಾಜೇಶ ಅಮ್ಮಿನಭಾವಿ, ಸಣ್ಣಚಿತ್ತಯ್ಯ, ಮಂಜುನಾಥ ಗಾಟೆ ಮತ್ತಿತರರು ಇದ್ದರು. 17ಡಿಡಬ್ಲೂಡಿ2

ಕೃಷಿ ವಿವಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ದಿಂದ ಆಯೋಜಿಸಿದ್ದ ‘ಜಲ ಸಂಕಲ್ಪ ಸಮಾವೇಶ ಹಾಗೂ ತರಬೇತಿ ಪಡೆದ ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರ ಸಮ್ಮೇಳನ ಉದ್ಘಾಟಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ನಭಾಗ್ಯದಂತೆ ಪುಸ್ತಕ ಭಾಗ್ಯವೂ ಜಾರಿಯಾಗಲಿ; ಕಥೆಗಾರ ಡಾ.ಅಮರೇಶ ನುಗಡೋಣಿ
ಮಕ್ಕಳ ಬೆಳೆವಣಿಗೆಗೆ ಉತ್ತಮ ವಾತಾವರಣ ಅವಶ್ಯ