ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿಗಳ ವಿವಿಧ ಸಂಘಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವ ಅಗತ್ಯತೆ ಇದೆ, ಇಂದು ಪ್ರತಿಭಾವಂತರನ್ನು ನಾವು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶದ ಪ್ರತಿಭೆಗಳು ವಿದೇಶಕ್ಕೆ ತೆರಳುತ್ತಿವೆ, ಅಂಥವರಿಗೆ ಸೂಕ್ತ ಅವಕಾಶ ಕಲ್ಪಿಸಿ ಕೊಡಬೇಕಾದದ್ದು ನಮ್ಮ ಕರ್ತವ್ಯ ಎಂದರು.
ಈ ಕಾಲೇಜಿಗೆ ಹೆಚ್ಚುವರಿ ಕೊಠಡಿಗಳ ಅಗತ್ಯವಿದ್ದು, ದೊರಕಿಸಿ ಕೊಡುವಂತೆ ಪ್ರಾಂಶುಪಾಲರು ಮನವಿ ಮಾಡಿದ್ದಾರೆ. ನೂತನವಾಗಿ ಬಂದಿರುವ ಪ್ರಾಂಶುಪಾಲರು ಆಸಕ್ತಿ ಹೊಂದಿದ್ದಾರೆ. ಹೆಚ್ಚುವರಿ ಕೊಠಡಿ ಮತ್ತು ಒಂದು ವೇದಿಕೆ ಅಗತ್ಯವೂ ಇದೆ ಎಂಬುದನ್ನು ಅರಿತಿದ್ದೇನೆ, ನಿರ್ಮಿಸಿ ಕೊಡುವ ಪ್ರಯತ್ನವನ್ನು ಮಾಡುವುದಾಗಿ ಅವರು ಭರವಸೆ ನೀಡಿದರು.ಇತ್ತೀಚಿಗಷ್ಟೇ ಈ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ರೇಣುಕಾರಾಧ್ಯ ಅವರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪರಮಶಿವಪ್ಪ, ಕಾಲೇಜಿನ ಅಭಿವೃದ್ಧಿಗೆ ತಾವು ಹೆಚ್ಚಿನ ಆಸಕ್ತಿ ವಹಿಸುವುದಾಗಿ ಹೇಳಿದ ಅವರು, ಮೂಲಭೂತ ಸೌಕರ್ಯಗಳ ಅವಶ್ಯಕತೆ ಕುರಿತಂತೆ ಪ್ರಸ್ತಾಪಿಸಿ ಮನವಿಯನ್ನು ಸಹ ಸಲ್ಲಿಸಿದರು.
ಕಾಲೇಜು ಹಿರಿಯ ಉಪನ್ಯಾಸಕ ಗಂಗಾಧರಪ್ಪ ಕಾಲೇಜಿನ ಇತಿಹಾಸವನ್ನು ಸಭೆ ಮುಂದಿಟ್ಟರು.
ಸರಕಾರಿ ಬಾಲಕಿಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಗದೀಶ ಹಿರೇಮಠ್, ಉಪನ್ಯಾಸಕರು ಉಪಸ್ಥಿತರಿದ್ದರು.