ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಶ್ರೀಲಕ್ಷ್ಮೀ ಗೋಮಾತಾ ಮಂದಿರ ಪಾಂಚಗವ್ಯ ಉತ್ಪನ್ನ ಕೇಂದ್ರದಿಂದ ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನಾ ತಂಡದ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಿದ್ದ ಗೋದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಿನಾಟಿ ಗೋತಳಿಗಳ ಸಂಖ್ಯೆ ದಿನೇದಿನೇ ಕ್ಷೀಣಿಸುತ್ತಿದೆ. ರೈತರು ವಿದೇಶಿ ಸೀಮೆ ಹಸುಗಳು ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಈ ಹಸುಗಳು ಮನುಷ್ಯನ ದೇಹಕ್ಕೆ ಹಾನಿಕಾರಕವಾಗಿದೆ. ಈ ಹಸುವಿನ 2 ಲೀಟರ್ ಹಾಲನ್ನು ಉಪಯೋಗಿಸುವ ಬದಲು ನಾಟಿ ತಳಿ ಹಸುವಿನ 200 ಗ್ರಾಂ ಹಾಲನ್ನು ಉಪಯೋಗಿಸಿದರೆ ಪೌಷ್ಟಿಕಾಂಶ ಹೆಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ ದೇಶಿಯ ಗೋ ಉತ್ಪನ್ನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.ನಾಟಿ ತಳಿ ಹಸುಗಳನ್ನು ಸಾಕಾಣಿಕೆ ಮಾಡುವ ರೈತರ ಸಂಖ್ಯೆಯೂ ಹೆಚ್ಚಾಗಬೇಕಿದೆ. ದೇಶಿ ಗೋವುಗಳನ್ನು ಸಾಕುವ ಮೂಲಕ ರೈತರು ಆರ್ಥಿಕವಾಗಿಯೂ ಸಧೃಡರಾಗಬಹುದು. ದೇಶಿ ಗೋ ಆರ್ಕವನ್ನು ಮನುಷ್ಯನ ದೇಹದ ಸಮಸ್ಯೆಗಳಿಗೆ ಒಳ್ಳೆಯ ಔಷಧವಾಗಿ ಬಳಕೆಯಾಗುತ್ತಿದೆ. ಇಂತಹ ದೇಶಿ ಹಸುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಇದೇ ವೇಳೆ ಗದ್ದೇ ಭೂವನಹಳ್ಳಿ ಹರೀಶ್ ಸೇರಿದಂತೆ ಹಲವು ರೈತರಿಗೆ ಮಲೆನಾಡು ಗಿಡ್ಡ ಹಸುವನ್ನು ಉಚಿತವಾಗಿ ನೀಡಿದರು. ಜಿಲ್ಲಾ ಧರ್ಮಜಾಗರಣಾ ಸಂಚಾಲಕ ಅಮಾವಾಸ್ಯೆಗೌಡ, ತಾಲೂಕು ಗೋ ಸೇವಾ ಪ್ರಮುಖ ಶಶಿಕುಮಾರ್, ಶೇಷಾದ್ರಿ, ದಿಲೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು